ಬೆಳಗಾವಿಯಲ್ಲಿ ಆದರ್ಶ ದಂಪತಿಗಳು
ಬೆಳಗಾವಿ 15: ಎರಡು ದಶಕಗಳ ಕಾಲ ಕರ್ನಾಟಕದಾದ್ಯಂತ ವೀಕ್ಷಕರನ್ನು ಮನಸೂರೆಗೊಳಿಸಿದ್ದ ಉದಯ ಟಿವಿಯ ಆದರ್ಶ ದಂಪತಿಗಳು ಐಕಾನಿಕ್ ರಿಯಾಲಿಟಿ ಷೋ ಕಾರ್ಯಕ್ರಮವು ಮತ್ತೆ ಶುರುವಾಗಿ ಜನಮನ್ನಣೆ ಪಡೆಯುತ್ತಿದೆ. ಅದರಂತೆಯೇ ಇತ್ತೀಚೆಗಷ್ಟೇ ದಾವಣಗೆರೆ ಮತ್ತು ಹಾಸನದಲ್ಲಿ ಯಶಸ್ವಿಯಾಗಿ ಜರುಗಿದ್ದು, ಎಲ್ಲಾ ಕಡೆಗಳಿಂದ ಅದ್ಬುತ ಪ್ರತಿಕ್ರಿಯೆ ವ್ಯಕವಾಗಿತ್ತು. ಈ ಹಿನ್ನಲೆಯಲ್ಲಿ ಕುಂದಾನಗರಿ ಬೆಳಗಾವಿಯಲ್ಲಿ ದಾಪುಗಾಲು ಹಾಕುತ್ತಿದೆ.
ಖ್ಯಾತ ಹಾಸ್ಯ ನಟ ಶಿವರಾಜ್.ಕೆ.ಆರ್. ಪೇಟೆ ಮತ್ತು ನಿರೂಪಕಿ ಅಂಕಿತಾಗೌಡ ಕಾರ್ಯಕ್ರಮ ನಡೆಸಿಕೊಡಲಿರುವರು. ತಾವೆಲ್ಲರೂ ಇದರಲ್ಲಿ ಭಾಗವಹಿಸಿ ಬಹುಮಾನಗಳನ್ನು ಗೆಲ್ಲುವ ಅವಕಾಶ ಪಡೆಯಬಹುದು. ಇದೇ ಭಾನುವಾರ ಏಪ್ರಿಲ್ 20ರಂದು ಬೆಳಗಾವಿಯ ಸುಭಾಷ್ ನಗರದ ’ಕುಮಾರ ಗಂದರ್ವ ಕಲಾಮಂದಿರದಲ್ಲಿ ಮಧ್ಯಾಹ್ನ 2 ಗಂಟೆಯಿಂದ ನಡೆಯಲಿದೆ. ಆಸಕ್ತ ದಂಪತಿಗಳು ಒಂದು ಗಂಟೆ ಮುಂಚಿತವಾಗಿ ಬಂದು ಹೆಸರನ್ನು ನೊಂದಾಯಿಸಿಕೊಳ್ಳಬೇಕು. ಮೊದಲು ಬಂದವರಿಗೆ ಆದ್ಯತೆ. ಎಲ್ಲರಿಗೂ ಪ್ರವೇಶ ಉಚಿತವೆಂದು ಉದಯ ವಾಹಿನಿ ತಿಳಿಸಿದೆ.