ವೀರಶೈವ ಧರ್ಮಗ್ರಂಥದಲ್ಲಿ ಜ್ಞಾನಕ್ಕಿಂತ ಭಕ್ತಿಗೆ ಹೆಚ್ಚಿನ ಮಹತ್ವ

ಶಿಗ್ಗಾವಿ : ವೀರಶೈವ ಧರ್ಮಗ್ರಂಥದಲ್ಲಿ ಜ್ಞಾನಕ್ಕಿಂತ ಭಕ್ತಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ ಎಂದು ಕಾಶಿ ಡಾ.ಚಂದ್ರಶೇಖರ ಶಿವಾಚಾರ್ಯ ಶ್ರೀ ಹೇಳಿದರು.

    ತಾಲೂಕಿನ ಬಿಸನಳ್ಳಿ ಗ್ರಾಮದ ಕಾಶಿ ಶಾಖಾ ಮಠದ ಆವರಣದಲ್ಲಿ ಲೋಕ ಕಲ್ಯಾಣಾರ್ಥವಾಗಿ ನಡೆದ ಸಾಮೂಹಿಕ ಇಷ್ಟಲಿಂಗ ಮಹಾಪೂಜೆ, ಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಆಶೀರ್ವಚನದ ನಾಲ್ಕನೇ ದಿನದ ಕಾರ್ಯಕ್ರಮವನ್ನುದ್ಧೇಸಿಸಿ ಮಾತನಾಡಿದ ಅವರು ಮನುಷ್ಯನ ದಿನ ನಿತ್ಯದ ಲೌಕಿಕ ಬದುಕು ಸುಂದರವಾಗಿರಬೇಕಾದರೆ ಗುರು, ಲಿಂಗ, ಜಂಗಮರಲಿ ನಿಷ್ಠೆ, ಭಕ್ತಿಯನ್ನಿರಿಸುವುದು ಮುಖ್ಯವಾಗಿದೆ. ನೀರಿನಲ್ಲಿ ಉತ್ಪತ್ತಿಯಾಗುವ ಉಪ್ಪು, ಐಸ್, ಮುತ್ತುಗಳಲ್ಲಿ ಮತ್ತೆ ನೀರಲ್ಲಿ ಬೇರಸಿದಾಗ ಉಪ್ಪು, ಐಸ್ ಕರಗುತ್ತದೆ. ಆದರೆ ಅದೇ ನೀರಲ್ಲಿ ಉತ್ಪತ್ತಿಯಾದ ಮುತ್ತು ಮಾತ್ರ ಕರಗಲಾರದು. ಅದೇ ರೀತಿ ಭಕ್ತ ಗುರುವಿನ ಮೇಲೆ ಮುತ್ತಿನಂತೆ ಏಕ ನಿಷ್ಠೆ ಹೊಂದಿದಾಗ ಮನುಷ್ಯನ ಜೀವನ ಸಾರ್ಥಕವಾಗಲಿದೆ ಎಂದು ಹೇಳಿದರು.

     ಹೈದರಾಬಾದ ತೆಲಂಗಾಣದ ಸಂಗಯ್ಯ ಶಾಸ್ತ್ರೀಗಳು ಮಾತನಾಡಿ ಜಂಗಮರ ಆರಾಧನೆಯಲ್ಲಿ ನಾವು ದೇವರನ್ನು ಕಾಣಬಹುದಾಗಿದೆ. ಗುರು, ಲಿಂಗ, ಜಂಗಮರ ಪಾದಸ್ಫರ್ಶದಿಂದ ನೀರು ತೀರ್ಥ, ಪಾದೋದಕವಾಗುವಹಾಗೆ ನಾವು ಮಾಡಿದ ಅಡುಗೆಯನ್ನು ಮೊದಲು ಗುರು ಲಿಂಗ ಜಂಗಮರಿಗೆ ಸಮಪರ್ಿಸಿದಾಗ ಮಾತ್ರ ಪ್ರಸಾದವೇನಿಸಿಕೋಳ್ಳುತ್ತದೆ ಎಂದು ಹೇಳಿದರು.

     ಈ ಬಿಸನಳ್ಳಿ ಗ್ರಾಮ ಕಾಶಿ ಶ್ರೀಗಳವರ ಕೃಪಾ ಕಟಾಕ್ಷದಿಂದಾಗಿ ಪವಿತ್ರ ಪಾವನ ಸುಕ್ಷೇತ್ರವಾಗಿ ಪರಿವರ್ತನೆಗೊಂಡಿದೆ. ದಕ್ಷಿಣ ಕಾಶಿ ಎಂದೇ ಅಭಿವೃದ್ಧಿ ಪಥದತ್ತ ಸಾಗುತ್ತಿರುವ ಈ ಬಾಗದ ಜನರ ಜೀವನ ಬಂಗಾರಮಯವಾಗಿಸುವ ಸುಸಮಯ ಒದಗಿ ಬಂದಿದೆ. 

     ಜ್ಞಾನದ ಖಣಿಯಾಗಿರುವ ಕಾಶಿ ಶ್ರೀಗಳವರಲ್ಲಿ ಮನುಷ್ಯರ ಬದುಕನ್ನು ಬದಲಿಸುವ ಶಕ್ತಿ ಪಡೆದವರಾಗಿದ್ದಾರೆ. ವೀರಶೈವ ಧರ್ಮ ಗ್ರಂಥವನ್ನು ರಚಿಸಿ ಅದನ್ನು 16 ಭಾಷೆಗಳಲ್ಲಿ ಭಾಷಾಂತರಗೊಳಿಸಿ ದೇಶ, ವಿದೇಶಗಳಲ್ಲಿ ಪ್ರಚುರ ಪಡೆಸಿದ ಕೀತರ್ಿ ಕಾಶಿ ಡಾ. ಚಂದ್ರಶೇಖರ ಶಿವಾಚಾರ್ಯರಿಗೆ ಸಲ್ಲುತ್ತದೆ ಎಂದು ಹೇಳಿದರು.

     ಹೈದ್ರಾಬಾದ ತೆಲಂಗಾಣ ವೀರಶೈವ ಸಮಾಜದವರಿಂದ ವೃದ್ಧ ದಂಪತಿ ಹಾಗು ವಿದುರ, ವಿದವೆಯರಿಗೆ ವಸ್ತ್ರವಿತರಣೆ, ಜಂಗಮಾರಾಧನೆಯನ್ನು ಶ್ರದ್ಧಾ, ಭಕ್ತಿಯಿಂದ ನೆರವೇರಿಸಿದರು.

     ವೈದಿಕ ಶಿರೋಮಣಿ ಶಾಂಬಶಿವ ಶರ್ಮ, ಡಾ.ಮಹಂತಯ್ಯಸ್ವಾಮಿ, ಜಗದೀಶ ಶಾಸ್ತ್ರೀ, ಉಳವಯ್ಯ, ಶಿವಯೋಗಿ, ಡಂಬಳ ಶಾಸ್ತ್ರೀಗಳು, ಲೋಕಸಭಾ ಮಾಜಿ ಸದಸ್ಯ ಮಂಜುನಾಥ ಕುನ್ನೂರ, ಗಿ.ಎ.ಹಿರೇಮಠ,  ಎಸ್.ಬಿ.ಅಕ್ಕಿ, ರಮೇಶ ಸಾತಣ್ಣವರ, ಬಲಕಂಪೇಟೆ ಶೇಖರಪ್ಪ, ಹರ್ಜಪ್ಪ ಲಮಾಣಿ, ನಿಂಗಪ್ಪ ಹುಬ್ಬಳ್ಳಿ, ನಾಗರಾಜ ಹೊಸಮನಿ, ಪರಶುರಾಮ ಕುದರಿ, ಗಂಗಾದರ ಬಡ್ಡಿ, ಗದಿಗೇಪ್ಪ ಮಾಮ್ಲೇಪಟ್ಟಣಶೆಟ್ಟರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ರುದ್ರಮುನಿ ನರೇಗಲ್ ಸ್ವಾಗತಿಸಿದರು. ಜಿ.ಎಸ್.ದೇಸಾಯಿ ನಿರೂಪಿಸಿದರು.