ಯಲ್ಲಾಪುರ : ನೀರು ಕುಡಿಯಲು ಕಾಡಿನಿಂದ ನಾಡಿಗೆ ಬಂದು ಬೆನ್ನಟ್ಟಿ ಬಂದ ನಾಯಿಯಿಂದ ತಪ್ಪಿಸಿಕೊಳ್ಳಲು ಹೋದಾಗ ಹೊಂಡದಲ್ಲಿ ಬಿದ್ದು ಗಾಯಗೊಂಡ ಜಿಂಕೆಯೊಂದನ್ನು ವಿದ್ಯಾರ್ಥಿಗಳು ರಕ್ಷಿಸಿ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.
ಬುಧವಾರ ಜಿಂಕೆಯೊಂದು ಪಟ್ಟಣದ ರವೀಂದ್ರ ನಗರದ ಕರೆಯೊಂದಕ್ಕೆ ಬಂದಿತ್ತು. ನಾಯಿಯೊಂದು ಜಿಂಕೆಯನ್ನು ಅಟ್ಟಿಸಿಕೊಂಡು ಬಂದಾಗ ತಪ್ಪಿಸಿಕೊಳ್ಳುವ ಧಾವಂತದಲ್ಲಿ ಹೊಂಡದಲ್ಲಿ ಬಿದ್ದ ಜಿಂಕೆಯನ್ನು ನಾಯಿ ಕಚ್ಚಿ ಗಾಯಗೊಳಿಸಿತ್ತು. ಅದನ್ನು ವಿದ್ಯಾರ್ಥಿಗಳಾದ ನಿತ್ಯಾನಂದ ನಾಯ್ಕ, ದಿಲೀಪ್ ನಾಯ್ಕ, ದೀಕ್ಷಾ, ಅಶೋಕ್ ನಾಯ್ಕ, ಹಾಗೂ ಗಂಗಾಧರ ನಾಯ್ಕ ರಕ್ಷಿಸಿ ಅರಣ್ಯ ಇಲಾಖೆಯ ಸುಪರ್ಧಿಗೆ ಒಪ್ಪಿಸಿದರು.
ಗಾಯಗೊಂಡ ಚಿಕಿತ್ಸೆಗೆ ಡಾ. ಸುಬ್ರಾಯ ಭಟ್ಟ ಚಿಕಿತ್ಸೆ ನೀಡಿದರು. ಗಾಯಗೊಂಡ ಜಿಂಕೆ ಗುಣಮುಖವಾದ ನಂತರ ಕಾಡಿಗೆ ಬಿಡಲಾಗುವುದೆಂದು ಆರ್. ಎಫ್ ಓ ಬಾಲ ಸುಬ್ರಹ್ಮಣ್ಯ ತಿಳಿಸಿದ್ದಾರೆ.