ಬೆಳಗಾವಿ 25: ಮುಂಬರುವ 15 ದಿನಗಳಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸಕರ್ಾರ ಪತನವಾಗಲಿದ್ದು, ರಾಜ್ಯದಲ್ಲಿ ಹೊಸ ಸಕರ್ಾರ ರಚನೆಯಾಗಲಿದೆ. ಸಿದ್ದರಾಮಯ್ಯ, ಕುಮಾರಸ್ವಾಮಿ ಈ ಸಮ್ಮಿಶ್ರ ಸಕರ್ಾರ ಒತ್ತಾಯ ಪೂರ್ವಕವಾದ ಮ್ಯಾರೇಜ್ ಆಗಿದೆ. ಈ ಮ್ಯಾರೇಜ್ಗೆ ಯಾವದೇ ಸಂದರ್ಭದಲ್ಲಿ ಡೈವಸರ್್ ಆಗಬಹುದು ಎಂದು ಬೆಳಗಾವಿ ಸಂಸದ ಸುರೇಶ್ ಅಂಗಡಿ ಹೊಸ ಬಾಂಬ್ ಸಿಡಿಸುವ ಮೂಲಕ ರಾಜ್ಯ ಸರಕಾರದ ಭವಿಷ್ಯವನ್ನು ನುಡಿದಿದ್ದಾರೆ.
ನಿನ್ನೆಯಷ್ಟೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮತ್ತೆ ನಾನು ಮುಖ್ಯಮಂತ್ರಿಯಾಗುತ್ತೇನೆ ಎಂದು ಹೇಳಿದ ಬೆನ್ನಲ್ಲೇ ಸುರೇಶ್ ಅಂಗಡಿ ಈ ಹೇಳಿಕೆ ರಾಜಕೀಯ ವಲಯದಲ್ಲಿ ಭಾರೀ ಮಹತ್ವ ಪಡೆದುಕೊಂಡಿದೆ. ನಗರದಲ್ಲಿ ಶನಿವಾರ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಇನ್ನು 15 ದಿನದೊಳಗೆ ಸಮ್ಮಿಶ್ರ ಸಕರ್ಾರ ಪತನವಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಾಜೀನಾಮೆ ನೀಡುವುದು ಅನಿವಾರ್ಯವಾಗುತ್ತದೆ ಎಂದು ಹೇಳಿದರು.
ಈಗಾಗಲೇ ಕಾಲು ಜಗ್ಗಾಟ ಆರಂಭವಾಗಿದೆ. ದೇವೇಗೌಡರಿಗೆ ಮೋಸ ಮಾಡಿದ ಕಾಂಗ್ರೆಸ್ ಕುಮಾರಸ್ವಾಮಿಗೆ ಕಾಂಗ್ರೆಸ್ ಮೋಸ ಮಾಡಲ್ವಾ ಎಂದ ಪ್ರಶ್ನೆ ಮಾಡಿದ ಅವರು, ಈಗ ಸಿದ್ದರಾಮಯ್ಯ ಅವರು ಚಾಪೆ ಜಗ್ಗುವ ಕೆಲಸ ಮಾಡುತ್ತಿದ್ದಾರೆ. ಮುಂದಿನ 15 ದಿನಗಳಲ್ಲಿ ಸಕರ್ಾರ ಬೀಳುತ್ತದೆ ಎಂದು ಹೇಳಿದರು.
ಸಮ್ಮಿಶ್ರ ಸಕರ್ಾರ ಪತನವಾದರೆ ಬಿಜೆಪಿ ಸಕರ್ಾರ ರಚನೆ ಮಾಡಲಿದೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ, ಈ ಬಗ್ಗೆ ನಾನು ಏನೂ ಹೇಳುವುದಿಲ್ಲ. ಕಾಲವೇ ಎಲ್ಲದಕ್ಕೂ ಉತ್ತರ ಕೊಡುತ್ತದೆ ಎಂದು ಸೂಚ್ಯವಾಗಿ ಪ್ರತಿಕ್ರಿಯಿಸಿದರು. ಇದು ಯಾವುದೇ ತತ್ವ ಸಿದ್ದಾಂತಗಳ ಆಧಾರದ ಮೇಲೆ ಸಕರ್ಾರ ರಚನೆಯಾಗಿಲ್ಲ.
ಕೇವಲ ಹೊಂದಾಣಿಕೆಗೆ ಮಾತ್ರ ಸಕರ್ಾರ ರಚನೆಯಾಗಿದೆ. ಹೆಚ್ಚುದಿನ ಬಾಳಿಕೆ ಬರುವ ಲಕ್ಷಣಗಳು ಕಾಣುತ್ತಿಲ್ಲ. ಎತ್ತು ಏರಿಗೆ ಕೋಣ ನೀರಿಗೆ ಎಂಬಂತೆ ಸಕರ್ಾರ ಹಾಗೋ ಹೀಗೋ ನಡೆಯುತ್ತಿದೆ ಎಂದರು. ಬಲವಂತವಾಗಿ ಇಲ್ಲವೇ ಒತ್ತಾಯಪೂರ್ವಕವಾಗಿ ಮಾಡಿದ ಮದುವೆಗಳು ಬಹಳ ದಿನ ಕೂಡಿ ಇರುವುದಿಲ್ಲ. ಈಗಾಗಲೇ ಸಿದ್ದರಾಮಯ್ಯನವರು ಚಾಪೆ ಎಳೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.