ಸಾರ್ವಜನಿಕರ ಆಸ್ತಿ-ಪ್ರಾಣ ರಕ್ಷಣೆಗೆ ಮೊದಲ ಆದ್ಯತೆ : ಡಿ.ಸಿ

ಲೋಕದರ್ಶನ ವರದಿ

ಅಂಕೋಲಾ: ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಸೇರಿದಂತೆ ಮಳೆಗಾಲದಲ್ಲಿ ಆಗಬಹುದಾದ ಇನ್ನಿತರ ನಾನಾ ಸಮಸ್ಯೆಗಳ ಕುರಿತು ಪರಿಶೀಲಿಸಿ ಪರಿಹಾರ ಸೂಚಿಸಲು ಭಾನುವಾರ ಜಿಲ್ಲಾಧಿಕಾರಿ ಡಾ. ಹರೀಶಕುಮಾರ ಅವರು ಅಂಕೋಲಾಕ್ಕೆ ಹಠಾತ್ ಭೇಟಿ ನೀಡಿ ಸಾರ್ವಜನಿಕ ಆಸ್ತಿಪಾಸ್ತಿ ಮತ್ತು ಪ್ರಾಣ ರಕ್ಷಣೆಗೆ ಮುಂಜಾಗೃತೆ ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.

ಕೋಟೆವಾಡ, ಶಿರಕುಳಿ ಪ್ರದೇಶಕ್ಕೆ ಭೇಟಿ ನೀಡಿ ರಾಷ್ಟ್ರೀಯ ಹೆದ್ದಾರಿಯ ಅಂಚಿನಿಂದ ಸರಾಗವಾಗಿ ನೀರು ಹರಿದು ಹೋಗದೆ ಸ್ಥಳೀಯರಿಗೆ ಆಗುತ್ತಿರುವ ಸಮಸ್ಯೆಗಳನ್ನು ಆಲಿಸಿದ ಜಿಲ್ಲಾಧಿಕಾರಿ, ತಮ್ಮ ವೈಯಕ್ತಿಕ ಸ್ವಾರ್ಥಕ್ಕಾಗಿ ಅಥವಾ ನಿರ್ಲಕ್ಷ್ಯದಿಂದ ನೀರು ಹರಿದು ಹೋಗುವ ಜಾಗವನ್ನು ಯಾರಾದರೂ ತಡೆ ಮಾಡಿದ್ದರೆ ಜೆಸಿಬಿ ಯಂತ್ರ ಬಳಸಿ ನಿದರ್ಾಕ್ಷ್ಯಣ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.  ಸಾರ್ವಜನಿಕರು ಸಹ ತಮ್ಮ ಅಕ್ಕಪಕ್ಕ ಕಾಮಗಾರಿ ನಡೆಯುವಾಗ ವ್ಯವಸ್ಥಿತವಾಗಿ ಕೆಲಸ ಮಾಡಿಸಿಕೊಳ್ಳಬೇಕೆ ವಿನಃ ಎಲ್ಲ ದಕ್ಕೂ ಸರಕಾರ ಮತ್ತು ಜನಪ್ರತಿನಿಧಿಗಳನ್ನು ದೂರುವುದಲ್ಲಾ ಎಂದರು. ಇದೇ ವೇಳೆ ನೀರು ಹರಿದು ಹೋಗುವ ಗಟಾರ ನಿಮರ್ಾಣ ಮಾಡಿಸಲು ಡಿಸಿಯವರೇ ಬರಬೇಕೇನ್ರಿ? ತಹಶೀಲ್ದಾರ ಮತ್ತು ಪುರಸಭೆ ಅಧಿಕಾರಿಗಳು ಸರಿಯಾಗಿ ಲಕ್ಷ್ಯವಹಿಸದೆ ಇಂತಹ ಕೆಲಸ ಮಾಡಿಸಲು ನಾನು ಮತ್ತೊಮ್ಮೆ ಬರುವುದಾದರೆ ನೀವು ಈ ಜಾಗದಲ್ಲಿ ಇರಬಾರದು ಎಂದು ಖಡಕ್ ಆಗಿ ಹೇಳಿದರು.  ಜಿಲ್ಲಾಧಿಕಾರಿಗಳ ಖಡಕ್ ಎಚ್ಚರಿ ಕೆಗೆ ತಲೆಬಾಗಿದ ಪುರಸಭೆ ಅಧಿಕಾರಿಗಳು ಕೆಲವೇ ಕ್ಷಣದಲ್ಲಿ ಶಿರಕುಳಿ ಭಾಗದ ಯಮಹಾ ಮೋಟರ್ಸ್ ಶೋರೂಂ ಎದುರುಗಡೆ ನೀರು ಹರಿದು ಹೋಗಲು ಅಡ್ಡಿಯಾಗಿದ್ದ ಸ್ಥಳವನ್ನು ಜೆಸಿಬಿ ಯಂತ್ರ ಬಳಸಿ ಖುಲ್ಲಾಪಡಿಸಿ ಕರ್ತವ್ಯ ಪ್ರಜ್ಞೆ ಮೆರೆದರು. 

ಪುರಸಭೆ ವ್ಯಾಪ್ತಿಗೆ ಸಂಬಂಧಪಟ್ಟಂತೆ ವಾಣಿಜ್ಯ ಕಟ್ಟಡ ಮತ್ತಿತರ ಕಟ್ಟಡ ನಿಮರ್ಿಸುವಾಗ ಕೆಲವರು ನೀರು ಹೋಗುವ ಸ್ಥಳ ಮುಚ್ಚಿ ಇಂಟರ್ ಲಾಕ್ ಅಳವಡಿಸಿ ತಮ್ಮ ಕಟ್ಟಡದ ಮುಂಭಾಗ ಅಂದ ಕಾಣು ವಂತೆ ಮಾಡಿಕೊಳ್ಳುತ್ತಾರೆ. ಅಂತವರಿಗೆಲ್ಲಾ ಏಕೆ ಪರವಾನಿಗೆ ನೀಡುತ್ತೀರಿ ಒಂದೊಮ್ಮೆ ನೀವು ಪರವಾನಿಗೆ ನೀಡಿ ದ ನಂತರ ಈ ರೀತಿ ದುರುಪಯೋಗ ಕಂಡು ಬಂದಲ್ಲಿ ಪರವಾನಿಗೆ ರದ್ದು ಪಡಿಸಿಯೆಂದು ಪುರಸಭಾ ಮುಖ್ಯಾಧಿಕಾರಿಯವರಿಗೆ ತಿಳಿಸಿದರು. 

ಪಟ್ಟಣದ ಸುತ್ತಮುತ್ತಲು ಗಟಾರದ ಸ್ಲೇಬ್ ಮತ್ತು ಮುಚ್ಚಣಿಕೆ ತೆಗೆಯದೇ ಹೂಳೆತ್ತುವ ಕಾಮಗಾರಿ ನಡೆ ಯುತ್ತಿರುವ ಕುರಿತು ಜಿಲ್ಲಾಧಿಕಾರಿ ನೇರವಾಗಿ ಪ್ರಶ್ನಿಸಿದಾಗ ಸ್ಥಳದಲ್ಲಿದ್ದ ಅಭಿಯಂತರ ಭಾಸ್ಕರ ಗೌಡ ಮತ್ತು ಮುಖ್ಯಾಧಿಕಾರಿ ಪ್ರಹ್ಲಾದ ಬಿ., ಉತ್ತರಿಸಿ ಹೂಳೆತ್ತುವ ಕೆಲಸ ಪ್ರಗತಿಯಲ್ಲಿದ್ದು, 20 ಪಸರ್್ಂಟ್  ಕೆಲಸ ಮಾತ್ರ ಬಾಕಿಯಿದೆ ಎಂದಾಗ ಜಿಲ್ಲಾಧಿಕಾರಿ ನನಗೆ ನಿಮ್ಮ ಪರ್ಸoಟ್   ಕೆಲಸದ ಲೆಕ್ಕ ಬೇಕಿಲ್ಲಾ. ಎರಡು ದಿನದೊಳಗೆ ಪೂತರ್ಿಯಾಗಿ ಕೆಲಸ ಮುಗಿಸಿ, ಟ್ರೇನ್ ಹೋದ ನಂತರ ಟಿಕೇಟ್ ತೆಗೆದುಕೊಂಡರೆ ಏನು ಪ್ರಯೋಜನ ಎಂದು ಗರಂ ಆಗಿ ಕೇಳಿದರು. 

ಕಂದಾಯ ಮತ್ತು ಉಸ್ತುವಾರಿ ಸಚಿವರ ಸೂಚನೆ ಮೇರೆಗೆ ಅಂಕೋಲಾಕ್ಕೆ ಭೇಟಿ ನೀಡಿ ಪರಿಶೀಲಿಸಿರು ವುದಾಗಿ ತಿಳಿಸಿದ ಜಿಲ್ಲಾಧಿಕಾರಿ ತಹಶೀಲ್ದಾರ ಕಾರ್ಯಾ ಲಯದಲ್ಲಿ ತಾಲೂಕಾಡಳಿತದಿಂದ ಮಳೆಗಾಲದಲ್ಲಿ ಕೈಗೊಳ್ಳಬೇಕಾದ ಮುಂಜಾಗೃತೆ ಕ್ರಮಗಳ ಕುರಿತು ತಿಳಿಸಿ, ಎನ್ಡಿಆರ್ಎಫ್ ಮತ್ತು ಎಸ್ಡಿಆರ್ಎಫ್ ಪರಿಹಾರದ ಕುರಿತು ಚಚರ್ಿಸಿದರು. ಯಾವುದೇ ತುತರ್ು ಸಂದರ್ಭವನ್ನು ಎದುರಿಸಲು ಸಿದ್ಧರಾಗಿರುವಂತೆ ತಿಳಿಸಿ ತಾಲೂಕಾಡಳಿತ ಈವರೆಗೆ ಕೈಗೊಂಡ ಕ್ರಮದ ಕುರಿತು ಮುಕ್ತ ಪ್ರಶಂಸೆ ವ್ಯಕ್ತಪಡಿಸಿದರು. ಅವಶ್ಯಕ ತೆಯಿದ್ದಲ್ಲಿ ಜಿಲ್ಲಾಡಳಿತದ ಪೂರ್ಣ ನೆರವು ಪಡೆಯುವಂತೆ ತಹಶೀಲ್ದಾರ ವಿವೇಕ ಶೇಣ್ವಿ ಅವರಿಗೆ ತಿಳಿ ಸಿದರು.

ನದಿಭಾಗಕ್ಕೆ ಭೇಟಿ : ಬೊಬ್ರುವಾಡ ಗ್ರಾ.ಪಂ. ವ್ಯಾಪ್ತಿಯ ನದಿಭಾಗದ ಪೂಜಗೇರಿ ಹಳ್ಳ ಮತ್ತು ಸಮುದ್ರ ಸೇರುವ ಪ್ರದೇಶದಲ್ಲಿ ನೈಸರ್ಗಿಕವಾಗಿ ಉಸುಕು ತುಂಬಿ ಹಳ್ಳದ ನೀರು ಸಮುದ್ರ ಸೇರದೆ ಅಕ್ಕಪಕ್ಕದ ಜಮೀನು ಜಲಾವೃತವಾಗುತ್ತದೆ. ಪ್ರತಿ ವರ್ಷ ಸ್ಥಳೀಯರೇ ಶ್ರಮವಹಿಸಿ ನೀರು ಹರಿದು ಹೋಗುವಂತೆ ಕೋಡಿ ಕಡಿಯುವ ಕೆಲಸ ನಿರ್ವಹಿಸಿಕೊಂಡು ಬಂದಿದ್ದು, ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಸ್ಥಳೀಯರು ಸುಮಾರು 80 ಕುಟುಂಬಗಳಿಗೆ ಅನುಕೂಲವಾಗುವಂತೆ ರಸ್ತೆ ನಿರ್ಮಾಣ  ಮತ್ತು ಕೋಡಿ ಕಡಿಯಲು ಸಂಬಂಧಿಸಿದ ವಂದಿಗೆ, ಶೆಟಗೇರಿ, ಬೆಳಾಂಬರ ಪಂಚಾಯತಗಳಿಂದಲ್ಲೂ ಸಂಪೂರ್ಣ ಸಹಕಾರ ದೊರಕುವಂತೆ ಮಾಡಿಕೊಡಿ ಎಂದು ವಿನಂತಿಸಿದರು. ಸ್ಥಳೀಯ ಸಮಸ್ಯೆಗಳನ್ನು ಆಲಿಸಿದ ಜಿಲ್ಲಾಧಿಕಾರಿಗಳು ಸೂಕ್ರ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. 

ಈ ಸಂಧರ್ಭದಲ್ಲಿ ಭಟ್ಕಳ ಉಪವಿಭಾಗಧಿಕಾರಿ ಸಾಜೀದ ಮುಲ್ಲಾ, ತಹಶೀಲ್ದಾರ ವಿವೇಕ ಶೇಣ್ವಿ, ಕಂದಾ ಯ ನಿರೀಕ್ಷಕರಾದ ಅಮರ ನಾಯ್ಕ, ರಾಘವೇಂದ್ರ ಜನ್ನು, ಗ್ರಾಮ ಲೆಕ್ಕಿಗ ಭಾರ್ಗವ ನಾಯಕ, ಗ್ರಾ.ಪಂ. ಅಧ್ಯಕ್ಷ ಮೋಹನ ನಾಯ್ಕ, ಪ್ರಮುಖರಾದ ಚಂದ್ರಕಾಂತ ನಾಯ್ಕ, ಅರುಣ ನಾಯ್ಕ, ರವಿ ನಾಯ್ಕ, ನಾಗರಾಜ ನಾಯ್ಕ ಸೇರಿದಂತೆ ಸ್ಥಳೀಯರು ಉಪಸ್ಥಿತರಿದ್ದರು.