ಶಿರಲೆ ಜಲಪಾತದಕ್ಕೆ ತಾತ್ಕಾಲಿಕವಾಗಿ ಪ್ರವೇಶ ನಿರ್ಭಂಧನೆ

 

ಯಲ್ಲಾಪುರ :   ತಾಲ್ಲೂಕಿನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ತಾಲ್ಲೂಕಿನ ಶಿರಲೆ ಜಲಪಾತದ ಬಳಿ ಇರುವ ಕಾಲುಸಂಕವೊಂದು ಕೊಚ್ಚಿಕೊಂಡು ಹೋಗಿರುವ ಕಾರಣ  ಮುನ್ನೆಚ್ಚರಿಕೆ ಕ್ರಮವಾಗಿ ಶಿರಲೆ ಜಲಪಾತಕ್ಕೆ 15 ದಿವಸಗಳ ಕಾಲ ಪ್ರವಾಸಿಗರಿಗೆ ತಾತ್ಕಾಲಿಕವಾಗಿ ಪ್ರವೇಶ ನಿರ್ಭಂಧಿಸಲಾಗಿದೆ.

     ಕಾಲು ಸಂಕ ಕೊಚ್ಚಕೊಂಡು ಹೋದ ಪರಿಣಾಮ ಪ್ರವಾಸೊಗರ ಓಡಾಟಕ್ಕೆ ತೊಂದರೆಯಾಗುತ್ತಿರುವ ಕಾರಣ  ಬೇರೆ ಕಾಲುಸಂಕ ನಿರ್ಮಾಣವಾಗುವವರೆಗೆ  15 ದಿವಸಗಳ ಕಾಲ ತಾತ್ಕಾಲಿಕವಾಗಿ ಪ್ರವಾಸಿಗರಿಗೆ ಪ್ರವೇಶ ನಿರ್ಭಂಧಿಸಲಾಗಿದ್ದು, ಪ್ರವಾಸಿಗರು ಸಹಕರಿಸಬೇಕೆಂದು ಆರ್ಎಫ್ಒ ಹಿಮವತಿ ಭಟ್ಟ ವಿನಂತಿಸಿದ್ದಾರೆ.