ಲೋಕದರ್ಶನ ವರದಿ
ವಿದ್ಯಾರ್ಥಿಗಳ ಶಿಷ್ಯ ವೇತನ ಸಮಾರಂಭಕ್ಕೆ ಹಾಜರಾಗದ ಕನ್ನಡ ಶಾಲೆಗಳ ಶಿಕ್ಷಕ ಶಿಕ್ಷಕಿಯರು
ಯಮಕನಮರಡಿ, 16 : ಸ್ಥಳೀಯ ಸುಕ್ಷೇತ್ರ ಹರಿಮಂದಿರವು ಪ್ರತಿ ವರ್ಷ ಕನ್ನಡ ಶಾಲೆ ಬಡ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನಿಡಿತ್ತಾ ಬಂದಿರುವುದೊಂದು ಸಂಪ್ರದಾಯ ಶ್ರೀ ಮಠದ ಹಿಂದಿನ ಪೂಜ್ಯರಾದ ಶ್ರೀ ಏಕನಾಥ ದಾದಾ ಮಹಾರಾಜರ ಪುಣ್ಯತಿಥಿ ಅಂಗವಾಗಿ ಯಮಕನಮರಡಿ ಕ್ಲಸ್ಟರ್ ಮಟ್ಟದಲ್ಲಿ ಎಲ್ಲ ಕನ್ನಡ ಶಾಲೆಗಳ 7 ನೇ ತರಗತಿ 10 ನೇ ತರಗತಿ ಹಾಗೂ ಕಾಲೇಜಿನ ಬಡ ವಿದ್ಯಾರ್ಥಿಗಳನ್ನು ಗುರುತಿಸಿ ಅಂತಃ ಮಕ್ಕಳ ಉಜ್ವಲ ಭವಿಷ್ಯ ರೂಪಿಸಲು ಪ್ರತಿ ವರ್ಷವೂ ಶಿಷ್ಯವೇತನ ನಿಡುವ ಕಾರ್ಯಕ್ರಮ ಹಮ್ಮಿಕೊಂಡು ಪ್ರತಿ ವಿದ್ಯಾರ್ಥಿಗಳಿಗೆ ನಗದು ಹಣ ಪ್ರಮಾಣ ಪತ್ರ ಮತ್ತು ಭಗವದ್ಗಿತಾ ಗೃಂಥ ಸೇರಿದಂತೆ ಪಠ್ಯೇತರ ವಸ್ತುಗಳನ್ನು ವಿದ್ಯಾರ್ಥಿಗಳಿಗೆ ವಿತರಿಸುತ್ತಾ ಬಂದಿರುವ ಪ್ರತಿ ವರ್ಷದ ಪದ್ದತಿಯಂತೆ ಈ ವರ್ಷವೂ ಕಾರ್ಯಕ್ರಮಕ್ಕೆ ಹುಕ್ಕೇರಿ ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ಭಾಗವಹಿಸಿ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಕಿಟ್ಟುಗಳನ್ನು ವಿತರಿಸಿದರು ಇಂತಹ ಪುಣ್ಯ ಸಮಾರಂಭದಲ್ಲಿ ಕನ್ನಡ ಮತ್ತು ಊರ್ದು ಶಾಲೆ ಕಾಲೇಜಿನ ಶಿಕ್ಷಕ ಶಿಕ್ಷಕಿಯರು ಹಾಜರಾಗದೇ ಇರುವುದನ್ನು ಗಮನಿಸಿದರೆ ಇದು ಒಂದು ದುರದೃಷ್ಠಕರ ಸಂಗತಿ ಎನಿಸುತ್ತದೆ.
ಇದೇ ತಿಂಗಳು ದಿ 13 ರಂದು ಆಯೋಜಿಸಲಾಗಿದ್ದ ವಿದ್ಯಾರ್ಥಿಗಳ ಶಿಷ್ಯ ವೇತನ ಸಮಾರಂಭಕ್ಕೆ ಗಡಿ ಮಹಾರಾಷ್ಟ್ರದ ಸಾಹಿತಿಗಳು ಮತ್ತು ವೈದ್ಯರು ಉಪಸ್ಥಿತರಿದ್ದು ಹುಕ್ಕೇರಿ ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಪ್ರಭಾವತಿ ಪಾಟೀಲ ರವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು ಅದರ ಜೋತೆಗೆ ಅತಿಥಿಗಳಾಗಿ ಸ್ಥಳಿಯ ಪೋಲಿಸ್ ಠಾಣಾ ಸಿ ಪಿ ಐ ಜಾವೇದ ಮುಸಾಪಿರಿ ಪೋಲಿಸ ಅಧಿಕಾರಿಗಳು ಉಪಸ್ಥಿತರಿದ್ದರು ಆದರೇ ಸದರಿ ಕಾರ್ಯಕ್ರಮಕ್ಕೆ ಸ್ಥಳಿಯ ಕನ್ನಡ ಶಾಲೆಗಳ ಶಿಕ್ಷಕ ಶಿಕ್ಷಕಿಯರು ಬಾರದೇ ಇರುವುದೊಂದು ನೋವಿನ ಸಂಗತಿಯಾಗಿದೆ. ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಶಿಕ್ಷಕರೆ ಇಂತಹ ಸಮಾರಂಭಗಳಲ್ಲಿ ಭಾಗವಹಿಸದೇ ಇರುವುದನ್ನು ಗಮನಿಸಿದರೆ ಈ ಶಿಕ್ಷಕರಿಗೆ ಅಧಿಕಾರಿಗಳ ಬೆಲೆ ಇಲ್ಲದಂತಾಗಿದೆ ಎಂದು ಹೆಳಲು ತಪ್ಪಾಗಲಾರದು. ಪ್ರತಿ ಶಾಲೆಗೂ ಆಯೋಜಕರು ಬೆಟ್ಟಿ ನಿಡಿ ಆಯ್ಕೆಯಾದ ವಿದ್ಯಾರ್ಥಿಗಳ ಪಟ್ಟಿಯನ್ನು ಸಲ್ಲಸಲಾಗಿತ್ತು ವಿದ್ಯಾರ್ಥಿಗಳ ಜೋತೆಗೆ ಪಾಲಕರು ಶಿಕ್ಷಕರು ಬರುವಂತೆ ಶಾಲೆಗಳಿಗೆ ಪತ್ರ ನಿಡಲಾಗಿತ್ತು ಆದರೆ ಸದರಿ ಪತ್ರಕ್ಕೆ ಬೆಲೆ ಇಲ್ಲದಂತಾಗಿದೆ. ಇಂರಹ ಶಿಕ್ಷಕರು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಬಹುದೇ ಎಂಬುದನ್ನು ಸಾರ್ವಜನಿಕರೆ ವಿಚಾರಿಸಬಹುದು. ಸಮಾರಂಭದಲ್ಲಿ ಗಡಿ ಮಹಾರಾಷ್ಟ್ರದ ವಿದ್ಯಾರ್ಥಿಗಳ ಸಂಖ್ಯೆಯೆ ಹೆಚ್ಚಾಗಿತ್ತು ಕನ್ನಡ ಶಾಲೆ ವಿದ್ಯಾರ್ಥಿಗಳ ಸಂಖ್ಯೇ ಕೆವಲ 30 ರಷ್ಟು ದಾಖಲಾಗಿತ್ತು ಇದರಿಂದಾಗಿ ಕನ್ನಡದ ಬಗ್ಗೆ ಶಿಕ್ಷಕರಲ್ಲಿ ಎಷ್ಟು ಅಭಿಮಾನ ವಿದೆ ಎಂದು ಕನ್ನಡಾಭಿಮಾನಿಗಳು ಗಮನಿಸಬೇಕಾಗಿದೆ.