ಹಳೆ ಪಿಂಚಣಿ ಯೋಜನೆ ಜಾರಿಗೆ ಆಗ್ರಹಿಸಿ ಶಿಕ್ಷಕರ ಧರಣಿ

ಹಳೆ ಪಿಂಚಣಿ ಯೋಜನೆ ಜಾರಿಗೆ ಆಗ್ರಹಿಸಿ ಶಿಕ್ಷಕರ ಧರಣಿ  Teachers' protest demanding implementation of the Old Pension Scheme

 ಬೆಳಗಾವಿ 20 : ಶನಿವಾರ ದಿನಾಂಕ 18 ರಂದು ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘ ಜಿಲ್ಲಾ ಘಟಕ ಬೆಳಗಾವಿ ಹಾಗೂ ಶೈಕ್ಷಣಿಕ ಜಿಲ್ಲಾ ಘಟಕ ಚಿಕ್ಕೋಡಿ ವತಿಯಿಂದ ಒಂದು ದಿನದ ಧರಣಿ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.  ಮನವಿಯನ್ನು ಸಲ್ಲಿಸುವದಕ್ಕಿಂತ ಪೂರ್ವದಲ್ಲಿ ಧರಣಿ ನಿರತ ಶಿಕ್ಷಕರನ್ನು ಉದ್ದೇಶಿಸಿ ಮಾತನಾಡಿದ ಸಂಘದ ಗೌರವ ಅಧ್ಯಕ್ಷ ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ಎಸ್‌. ಐ. ಸಂಬಾಳ ನಮ್ಮ ಸಂಘ ಪ್ರಾರಂಭವಾಗಿ 50 ವರ್ಷಗಳಾದವು  ನಮ್ಮ ಬೇಡಿಕೆಗಳಲ್ಲಿ ಕೆಲವು ಬೇಡಿಕೆಗಳನ್ನು ಇಡೆರಿಸುತ್ತಾರೆ, ಮತ್ತೆ ಕೆಲವು ಬೇಡಿಕೆಗಳು ಹೆಚ್ಚಾಗುತ್ತವೆ.

ಇವುಗಳನ್ನು ನಾವು ಪಡೆದುಕೊಳ್ಳಬೇಕಾದರೆ ಹೋರಾಟ ಮಾಡಲೇಬೇಕು. 2006ರ ನಂತರ ನಿವೃತ್ತಿಯಾದ ಶಿಕ್ಷಕರಿಗೆ ಪಿಂಚಣಿ ಸೌಲಭ್ಯವಿಲ್ಲದೆ ನಿವೃತ್ತಿ ಜೀವನ ಸಾಗಿಸುವುದು ಕಷ್ಟಕರವಾಗಿದ್ದು ಹಳೆ ಪಿಂಚಣಿ ಯೋಜನೆಯನ್ನು ( ಒ.ಪಿ.ಎಸ್ ) ಜಾರಿಗೆಯಾಗುವವರೆಗೂ ನಮ್ಮ ಹೋರಾಟ ಅನಿವಾರ್ಯವಾಗುತ್ತದೆ. ಮಾನ್ಯ ಘನ ಸರ್ಕಾರವು ನಮ್ಮ ಬೇಡಿಕೆಗಳಿಗೆ ಸಕಾರಾತ್ಮಕ ಪ್ರತಿಕ್ರಿಯೆ ನೀಡುತ್ತದೆ ಎಂದು ಭಾವಿಸಿದ್ದೇವೆ ಎಂದು ಹೇಳಿದರು. ಬೆಳಗಾವಿ ಜಿಲ್ಲೆಯ ಪ್ರಧಾನ ಕಾರ್ಯದರ್ಶಿಗಳಾದ ಬಿ.ಪಿ. ಲಮಾಣಿಯವರು ಮಾತನಾಡಿ ಸರಕಾರಿ ಶಾಲೆಗಳಿಗೂ ಅನುದಾನಿತ ಶಾಲೆಗಳಿಗೂ ಯಾವುದೇ ವಿಷಯದಲ್ಲಿ ಮಲತಾಯಿ ಧೋರಣೆ ಇರಬಾರದೆಂದು ಹೇಳಿದರು.

ನಂತರ ಆರ್‌.ಆಯ್‌. ಬಡಿಗೇರ್ ಮಾತನಾಡಿ ಇಳಿವಯಸ್ಸಿನಲ್ಲಿ ನಿವೃತ್ತ ಶಿಕ್ಷಕರಿಗೆ ತೊಂದರೆ ಅನುಭವಿಸ ಬಾರದೆಂದು ಹೇಳಿದರು. ಎಂ ಎಸ್ ಹಂದಿಗುಂದ ಮುಂದಿನ ಹೋರಾಟದ ರೂಪುರೇಷೆಗಳನ್ನು ತಿಳಿಸಿದರು, ಸಂಘದ ಸಂಚಾಲಕ ಎಸ್ ಎಸ್‌. ಗಡದವರ, ಮಹಿಳಾ ಪ್ರತಿನಿಧಿ ಎಂ.ಜಿ.ಚಿಕ್ಕಮಠ ಮಾತನಾಡಿದರು.  ಮನವಿ ಸಲ್ಲಿಸುವ ಸಂದರ್ಭದಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ಎಸ್ ಐ ಸಂಬಾಳ, ಚಿಕ್ಕೋಡಿ ಜಿಲ್ಲಾ ಘಟಕದ ಅಧ್ಯಕ್ಷರಾದ ಎಸ್ ಎಸ್ ಅಂಗಡಿ ಬೆಳಗಾವಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಬಿ.ಪಿ.ಲಮಾಣಿ ಜಿಲ್ಲಾ ಸಂಚಾರಿಕರಾದ ಎಸ್ ಎಸ್ ಗಡದವರ,

ಎನ್‌.ಎಫ್‌. ಉಪ್ಪಿನ ನಗರ ಘಟಕದ ಅಧ್ಯಕ್ಷರಾದ ಎಂ ಎಸ್ ದೊಡಮನಿ ಕಾರ್ಯದರ್ಶಿ ಎಸ್‌.ಎಸ್‌. ಕಾಂಬಳೆ, ವ್ಹಿ. ಬಿ. ದಿಗ್ಗಾಯಿ, ಎಸ್ ಆರ್ ಪಾವಸೆ, ಎಸ್ ಜಿ ಪಾಟೀಲ, ರಾಜು ಲಂಬೂಗೋಳ,  ವ್ಹಿ ಡಿ ಜಾದವ, ಆರ್ ಸಿ ಕುಂಬಾರ, ಎಸ್ ಎಂ ಮೊಘಲೆ  ಕಾರ್ಯಕಾರಣಿ ಸದಸ್ಯರಾದ ಬಿ. ಎಸ್ ನಾಗನೂರಿ, ಅನ್ನಪೂರ್ಣ ಗುಡ್ಡೆದ, ಮಹದೇವ ಬರಗಾಲಿ, ಬಸವರಾಜ ತಳವಾರ ಎಸ್ ಜೆ ಕುಪ್ಪಾನಟ್ಟಿ, ಎಂ.ಐ ಚಿಕ್ಕಮಠ ವಿವಿಧ ತಾಲೂಕಿನ ಅಧ್ಯಕ್ಷರು, ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಹಾಗೂ ಪದಾಧಿಕಾರಿಗಳು, ಸಂಘದ ಸದಸ್ಯರು ಉಪಸ್ಥಿತರಿದ್ದರು