ಶಿಕ್ಷಕರ ಸಂಘಟನೆ ಶಾಲಾಭಿವೃದ್ಧಿಗೂ ಶ್ರಮಿಸಲಿ

 ಶಿಕ್ಷಕರ ಸಂಘಟನೆ ಶಾಲಾಭಿವೃದ್ಧಿಗೂ ಶ್ರಮಿಸಲಿ Teachers' associations should also strive for school development

ಲೋಕದರ್ಶನ ವರದಿ 

ಧಾರವಾಡ 19: ತಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟ ಮಾಡುವ ಶಿಕ್ಷಕರ ಸಂಘಟನೆಗಳು ಶಾಲಾಭಿವೃದ್ಧಿಗೂ ವಿಶೇಷವಾಗಿ ಶ್ರಮಿಸಬೇಕೆಂದು ಗ್ರಾಮೀಣ ತಾಲೂಕಾ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣ ಸದಲಗಿ ಕರೆ ನೀಡಿದರು. ಅವರು ನಗರದ ಗುರುಭವನದಲ್ಲಿ ಶನಿವಾರ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗ್ರಾಮೀಣ ತಾಲೂಕ ಘಟಕಕ್ಕೆ 2026 ರಿಂದ 2031ರವರೆಗಿನ ಅವಧಿಗೆ ನೂತನವಾಗಿ ಆಯ್ಕೆಯಾದ ಚುನಾಯಿತ ಪ್ರತಿನಿಧಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು. ಶಾಲಾ ತರಗತಿಗಳಲ್ಲಿ ವಿದ್ಯಾರ್ಥಿಗಳ ಕಲಿವಿನಫಲ ಸಂವರ್ಧನೆಗೂ ಶಿಕ್ಷಕ-ಶಿಕ್ಷಕಿಯರ ಚಿಂತನೆ ನಿರಂತರವಾಗಿರಬೇಕು ಎಂದರು.  

ಅಖಿಲ ಭಾರತ ಪ್ರಾಥಮಿಕ ಶಿಕ್ಷಕ ಮಹಾಮಂಡಳ(ಎಐಪಿಟಿಎಫ್) ಅಧ್ಯಕ್ಷ ಬಸವರಾಜ ಗುರಿಕಾರ ಅಧ್ಯಕ್ಷತೆವಹಿಸಿದ್ದರು. ಶಿಕ್ಷಕ ಸಂಘದ ರಾಜ್ಯ ಕೋಶಾಧ್ಯಕ್ಷ ರಾಜಶೇಖರ ಹೊನ್ನಪ್ಪನವರ, ಕ್ಷೇತ್ರ ಸಮನ್ವಯ ಅಧಿಕಾರಿ ಕುಮಾರ್ ಎಸ್‌.ಎಫ್‌., ದೈಹಿಕ ಶಿಕ್ಷಣ ಪರೀವೀಕ್ಷಕ ಈಶ್ವರ ಆಯಟ್ಟಿ, ಬಿಇಓ ಕಚೇರಿ ಪತ್ರಾಂಕಿತ ವ್ಯವಸ್ಥಾಪಕಿ ಪ್ರತಿಭಾ ಶಿರಗುಪ್ಪಿ, ಶಿಕ್ಷಕ ಸಂಘದ ಜಿಲ್ಲಾಧ್ಯಕ್ಷ ವಿ.ಎಫ್‌. ಚುಳಕಿ, ಪ್ರಧಾನ ಕಾರ್ಯದರ್ಶಿ ಅಜಿತಕುಮಾರ್ ದೇಸಾಯಿ, ಉಪಾಧ್ಯಕ್ಷೆ ಶಾಂತಾ ಶೀಲವಂತ, ಕೋಶಾಧ್ಯಕ್ಷ ಶಂಕರ ಘಟ್ಟಿ, ಗೌರವಾಧ್ಯಕ್ಷ ರಮೇಶ ಲಿಂಗದಾಳ ಅತಿಥಿಗಳಾಗಿ ಪಾಲ್ಗೊಂಡಿದ್ದರು. 

ಪದಗ್ರಹಣ : ಶಿಕ್ಷಕರ ಸಂಘದ  ಧಾರವಾಡ ಗ್ರಾಮೀಣ ತಾಲೂಕ ಘಟಕದ ನೂತನ ಅಧ್ಯಕ್ಷ ಕೃಷ್ಣಾ ಬೊಂಗಾಳೆ, ಪ್ರಧಾನ ಕಾರ್ಯದರ್ಶಿ ಎನ್‌.ಎಸ್‌.ಕಮ್ಮಾರ, ಕೋಶಾಧ್ಯಕ್ಷ ರಾಜು ಮಾಳವಾಡ, ಉಪಾಧ್ಯಕ್ಷರುಗಳಾದ ಭಾರತಿ ಮನ್ನಿಕೆರಿ,  ಎಸ್‌.ಎನ್‌.ಸಾವಳಗಿ, ಸಹ ಕಾರ್ಯದರ್ಶಿಗಳಾದ ಶಿವಾನಂದ ಕೆಲಗೇರಿ, ವಿಜಯಲಕ್ಷ್ಮಿ ತೇಗೂರ ಸಂಘಟನಾ ಕಾರ್ಯದರ್ಶಿಗಳಾದ ಎ. ಎ. ಕಿತ್ತೂರ, ಶೋಭಾ ಶಿರಿಯಣ್ಣವರ, ಇತರೇ ಪದಾಧಿಕಾರಿಗಳಾದ ಎಚ್‌. ಡಿ. ಚಲವಾದಿ, ಶಿವಲೀಲಾ ಪೂಜಾರ ಹಾಗೂ ಗೌರವಾಧ್ಯಕ್ಷ ಎನ್‌. ಜಿ. ಗುರುಪುತ್ರನವರ, ಕಾರ್ಯಾಧ್ಯಕ್ಷ ಶೌಕತ್‌ಅಲಿ ಮೆಣಸಗಿ, ಆಂತರಿಕ  ಲೆಕ್ಕ ಪರಿಶೋಧಕ ಚಂದ್ರು ತಿಗಡಿ ಪದಗ್ರಹಣ ಮಾಡಿದರು. ಜಿಲ್ಲೆಯ ವಿವಿಧ ತಾಲೂಕುಗಳ ಎಲ್ಲಾ ಹಂತದ ಪದಾಧಿಕಾರಿಗಳು ಉಪಸ್ಥಿತರಿದ್ದರು.