ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

ತಾಂಬಾ 06:  ಜ್ಞಾನದ ದೀವಿಗೆ ಬೇಳಗುವ ಶಿಕ್ಷಕ ಜ್ಞಾನಯೋಗಿ ದಾರ್ಶನಿಕ ಶಿಕ್ಷಕ, ಲೇಖಕ ಮತ್ತು ರಾಜಕಾರಣಿಯಾಗಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರು ಭಾರತಕ್ಕೆ ನೀಡಿದ ಕೋಡುಗೆ ಅಪಾರವಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಎನ್‌.ಜಿ.ಚೌಧರಿ ಹೇಳಿದರು. 

ಗ್ರಾಮದ ಶ್ರೀ ಸ್ವಾಮಿ ವಿವೇಕಾನಂದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡ ಶಿಕ್ಷಕರ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಶಿಸ್ತು, ಕ್ಷೇಮೆ ಮತ್ತು ಕರುಣೆ ಎಂಬ ತ್ರೀ ರತ್ನಗಳನ್ನು ಒಳಗೊಂಡ ಮೂರು ಅಕ್ಷರದ ಶಿಕ್ಷಕರನ್ನ ಸ್ಮರಿಸುವ ಇಂದಿನ ದಿನ ನಿಜಕ್ಕೂ ಅದ್ಬುತವಾಗಿದ್ದು ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರು ತೋರಿದ ಶಿಕ್ಷಣದ ಮೇಲಿನ ಪ್ರಭಾವ ಮತ್ತು ಯುವ ಮನಸ್ಸುಗಳ ಬೇಳವಣಿಗೆಯನ್ನು ಉತ್ತೆಜಿಸುವಲ್ಲಿ ಅವರ ಅಚಲವಾದ ಬದ್ದತೆಯು ರಾಷ್ಟ್ರದ ಮೇಲೆ ಅಳಿಸಲಾಗದ ಹೇಜ್ಜೆಗುರುತ್ತು ಇಂದಿಗೂ ಶಾಶ್ವತವಾಗಿದೆ ಎಂದರು. 

ಕಾರ್ಯಕ್ರಮದಲ್ಲಿ ರಾಮಕೃಷ್ಣ ಭಾಣದ, ಎಸ್‌.ಎಮ್‌.ರೇವಶೆಟ್ಟಿ, ಎಮ್‌.ಎಮ್‌.ಗಡೆದ,  ಜಿ.ಎಸ್‌.ವಿಜಾಪೂರ, ಎಲ್‌.ಎಸ್‌.ಹವಿನಾಳ, ಪಿ.ಎಸ್ ಗಬಸಾವಳಗಿ, ಎಸ್‌.ಎಸ್‌.ಜಳಕೋಟಿ, ಸಿ.ಎನ್‌.ಚೌಧರಿ, ಆರ್‌.ಡಿ.ಯಡ್ರಾಮಿ ಸೇರಿದಂತೆ ಮತ್ತಿತರರು ಇದ್ದರು.