ಗುಣಮಟ್ಟದ ಕಾಮಗಾರಿ ಕೈಗೊಂಡು ಸುಗಮ ಸಂಚಾರ ವ್ಯವಸ್ಥೆಗೆ ಕ್ರಮ : ಶಾಸಕ ಬಾಬಾಸಾಹೇಬ
Take action for smooth traffic system by carrying out quality work: MLA Babasaheb
ನೇಸರಗಿ : ಗುತ್ತಿಗೆದಾರರು ಸೇತುವೆ ನಿರ್ಮಾಣ ಮಾಡುವಾಗ ಉತ್ತಮ ಗುಣಮಟ್ಟದ ಕಾಮಗಾರಿ ಮಾಡಿ ತಮ್ಮ ಹೆಸರು ಬೆಳೆಸಿಕೊಂಡು ಸಾರ್ವಜನಿಕರಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಚನ್ನಮ್ಮನ ಕಿತ್ತೂರು ಶಾಸಕರಾದ ಬಾಬಾಸಾಹೇಬ ಪಾಟೀಲ ಹೇಳಿದರು. ಅವರು ಸಮೀಪದ ದೇಶನೂರ ಗ್ರಾಮದಿಂದ ರಾಜ್ಯ ಹೆದ್ದಾರಿಗೆ ಹೋಗುವ ರಸ್ತೆ ಮದ್ಯ ಇರುವ ಹಳ್ಳದ ಸೇತುವೆ ಶೀಥಿಲಗೊಂಡ ಪ್ರಯುಕ್ತ 2 ಕೋಟಿ ರೂಪಾಯಿಗಳ ಅನುಧಾನದಲ್ಲಿ ನಿರ್ಮಾಣ ಆಗಲಿರುವ ನೂತನ ಸೇತುವೆ ಕಾಮಗಾರಿ ಪ್ರಾರಂಭಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಇದೆ ಸಂದರ್ಭದಲ್ಲಿ ಸುತ್ತಮುತ್ತಲಿನ ಅನೇಕ ಗ್ರಾಮಸ್ಥರು ತಮ್ಮ ಅನೇಕ ಬೇಡಿಕೆಗೆ ಅಹವಾಲು ಹಿಡಿದು ಆಗಮಿಸಿ ಶಾಸಕರ ಮುಂದೆ ತಮ್ಮ ಸಮಸ್ಯೆಗಳ ಕುರಿತು ಚರ್ಚಿಸಿದರು, ಅವರ ಅನೇಕ ವಿಷಯಗಳ ಬಗ್ಗೆ ಸ್ಪಂದಿಸಿದ ಶಾಸಕರು ತಮ್ಮ ಕೆಲಸ ಕಾರ್ಯಗಳಿಗೆ ಸದಾ ಬದ್ಧ ಎಂದರು. ಈ ಸಂದರ್ಭದಲ್ಲಿ ಮಾಜಿ ಗ್ರಾ ಪಂ ಉಪಾಧ್ಯಕ್ಷ ಅಬ್ಬಾಸ ಅಲಿ ಫೀರಜಾದೆ, ಯುವ ಮುಖಂಡ ಸಚಿನ ಪಾಟೀಲ, ಅಣ್ಣಪ್ಪ ಕಡಕೋಳ, ಅಡಿವಪ್ಪ ಮಾಳಣ್ಣವರ, ಆಯುಭಖಾನ ಗಣಾಚಾರಿ, ಶ್ಯಾನ ರಾಮಣ್ಣವರ, ಪ್ರಕಾಶ ಮುಂಗರವಾಡಿ, ಗುತ್ತಿಗೆದಾರ ಆನಂದ ಕಿರಗಿ,ಸದೆಪ್ಪ ಕಮತಗಿ, ಕಲ್ಲಪ್ಪ ತಿಳಗಂಜಿ, ಮಲ್ಲಿಕಾರ್ಜುನ ಕಲ್ಲೋಳಿ, ಸುರೇಶ ಅಗಸಿಮನಿ, ಅಜ್ಜಪ್ಪ ಸತ್ತೇನ್ನವರ, ರಾಯನಗೌಡ ಪಾಟೀಲ, ದೇಶನೂರ ಮತ್ತು ಸುತ್ತಮುತ್ತಲಿನ ಗ್ರಾಮಗಳ ಮುಖಂಡರು, ಗ್ರಾಮಸ್ಥರು, ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ
ಬಿಗಿ ಭದ್ರತೆಯ ನಡುವೆ 6,200ಕ್ಕೂ ಹೆಚ್ಚು ಅಮರನಾಥ ಯಾತ್ರಿಕರು ಜಮ್ಮುವಿನಿಂದ ಪ್ರಯಾಣ ಬೆಳೆಸಿದರು
ಬೆಳಗಾವಿಯ ಜಿಮಖಾನಾ ಕ್ಲಬ್ನಲ್ಲಿ ಗುಂಡಿನ ದಾಳಿ; ವ್ಯಕ್ತಿ ಅದೃಷ್ಟವಶಾತ್ ಪಾರು
ವಾರಾಣಸಿಯ 27 ವರ್ಷದ ಯುವಕನಿಗೆ ಕೋವಿಡ್-19 ದೃಢ; ಬಿಎಚ್ಯು ಆಸ್ಪತ್ರೆಗೆ ದಾಖಲಾತಿ
ಕ್ಷುಲ್ಲಕ ಕಾರಣಕ್ಕೆ ಪಿಕಾಸಿಯಿಂದ ವ್ಯಕ್ತಿಯ ಹತ್ಯೆ : ಖಾನಾಪೂರ ತಾಲೂಕಿನಲ್ಲಿ ಘಟನೆ 