ದುಶಾಂಬೆ, ನ 7: ಸೇನಾ ತಪಾಸಣಾ ಠಾಣೆಯ ಮೇಲೆ ಇಸ್ಲಾಮಿಕ್ ಸ್ಟೇಟ್ ಉಗ್ರರು ನಡೆಸಿದ ದಾಳಿಯಲ್ಲಿ 17 ಮಂದಿ ಸಾವನ್ನಪ್ಪಿದ್ದಾರೆ ಎಂದು ತಜಕಿಸ್ತಾನ್ ಸರ್ಕಾರ ದೂರಿದೆ. ಬುಧವಾರ ನಡೆದ ಭಾರಿ ಪ್ರಮಾಣದ ಗುಂಡಿನ ಕಾಳಗದಲ್ಲಿ ಹದಿನೈದು ಇಸ್ಲಾಮಿಕ್ ಸ್ಟೇಟ್ ಉಗ್ರರನ್ನು ಹತ್ಯೆಮಾಡಲಾಗಿದೆ. ಮಹಿಳೆ ಸೇರಿದಂತೆ ಐವರನ್ನು ಸೆರೆಹಿಡಿಯಲಾಗಿದೆ. ಗುಂಡಿನ ಚಕಮಕಿಯಲ್ಲಿ ಇಬ್ಬರು ತಜಿಕಿಸ್ತಾನ್ ಯೋಧರು ಹತರಾಗಿದ್ದಾರೆ. ದಾಳಿಯಲ್ಲಿ ತಾನು ಭಾಗಿಯಾಗಿರುವುದನ್ನು ಇಸ್ಲಾಮಿಕ್ ಸ್ಟೇಟ್ ಇನ್ನೂ ದೃಢಪಡಿಸಿಲ್ಲ. ಉಜ್ಬೆಕಿಸ್ತಾನ್ - ತಜಕಿಸ್ತಾನ್ ಗಡಿಯ ಸೇನಾ ತಪಾಸಣಾ ಕೇಂದ್ರ ಮೇಲೆ ಬೆಳಗಿನ ಜಾವ 3.30ರಲ್ಲಿ 20 ಮಂದಿ ಇಸ್ಲಾಮಿಕ್ ಸ್ಟೇಟ್ ಉಗ್ರರು ದಾಳಿ ನಡೆಸಿ, ಗಡಿರಕ್ಷಣಾ ಯೋಧ ಹಾಗೂ ಓರ್ವ ಪೊಲೀಸ್ ಅಧಿಕಾರಿಯನ್ನು ಹತ್ಯೆ ನಡೆಸಿದ್ದು, ನಂತರ ನಡೆದ ಭಾರಿ ಗುಂಡಿನ ಕಾಳಗದಲ್ಲಿ ತನ್ನ 15 ಮಂದಿಯನ್ನು ತಜಕಿಸ್ತಾನ್ ಸೇನೆ ಹತ್ಯೆ ನಡೆಸಿದೆ. ನವೆಂಬರ್ 3 ರಂದು ಇಬ್ಬರು ದಾಳಿಕೋರರು ಅಪ್ಘಾನಿಸ್ತಾನದಿಂದ ದೇಶದ ಗಡಿ ಪ್ರವೇಶಿಸಿದ್ದರು ಎಂದು ಸರ್ಕಾರಿ ಖೋವರ್ ನ್ಯೂಸ್ ಏಜೆನ್ಸಿ ತಿಳಿಸಿದೆ.