ಹಾವೇರಿ 14 : ಮೊಬೈಲ್ ಬಳಕೆ ಹೆಚ್ಚಾಗಿರುವುದರಿಂದ ಮಕ್ಕಳಲ್ಲಿ ಪಠ್ಯೇತರ ಚಟುವಟಿಕೆಗಳ ಕುರಿತು ಆಸಕ್ತಿ ಕಡಿಮೆಯಾಗಿದೆ. ಮಕ್ಕಳಲ್ಲಿ ಮೊಬೈಲ್ ಗೀಳು ಕಡಿಮೆ ಮಾಡಲು ಪಠ್ಯೇತರ ಚಟುವಟಿಕೆ ಆಸಕ್ತಿ ಮೂಡಿಸಲು ಬೇಸಿಗೆ ಶಿಬಿರ ಸಹಕಾರಿಯಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀನಿವಾಸ ಆಲದರ್ತಿ ಹೇಳಿದರು.
ಹಾವೇರಿ ನಗರದ ಜಿಲ್ಲಾ ಬಾಲಭವನದಲ್ಲಿ ಮಂಗಳವಾರ ಬೆಂಗಳೂರು ಬಾಲಭವನ ಸೊಸೈಟಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾವೇರಿ ಹಾಗೂ ಶಾಲಾ ಶಿಕ್ಷಣ ಇಲಾಖೆ ಜಿಲ್ಲಾ ಬಾಲಭವನ ಸೊಸೈಟಿ ಸಹಯೋಗದಲ್ಲಿ ಆಯೋಜಿಸಲಾದ ಜಿಲ್ಲಾ ಮಟ್ಟದ ಮಕ್ಕಳ ಉಚಿತ ಬೇಸಿಗೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಬಾಲಭವನದಲ್ಲಿ 15 ದಿನಗಳ ಕಾಲ ಯಾವುದೇ ಶುಲ್ಕವಿಲ್ಲದೆ ಉಚಿತವಾಗಿ ಮಕ್ಕಳಿಗೆ ಸೃಜನಾತ್ಮಕ ಹಾಗೂ ಕ್ರೀಯಾತ್ಮಕ ಚಟುವಟಿಕೆಗಳನ್ನು ಆಯೋಜಿಸಲಾಗಿದೆ. ಮಕ್ಕಳು ಶಿಬಿರಕ್ಕೆ ಸಮಯಕ್ಕೆ ಸರಿಯಾಗಿ ಬರಬೇಕು ಹಾಗೂ ಜಿಲ್ಲೆಯ ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ಶಿಲ್ಪಾ ಶಿದ್ದಮ್ಮನವರ ಮಾತನಾಡಿ, ಶಿಬಿರದಲ್ಲಿ ಯೋಗ, ನೃತ್ಯ, ಚಿತ್ರಕಲೆ, ಕರಕುಶಲ ಕಲೆ, ಕಸದಿಂದ ರಸ, ಸಮೂಹ ಸಂಗೀತ ,ಸಮೂಹ ನೃತ್ಯ ಇತ್ಯಾದಿ ಚಟುವಟಿಕೆಗಳನ್ನು ಆಯೋಜಿಸಲಾಗುವುದು ಹಾಗೂ ಕಲಿಕಾ ಸಾಮಗ್ರಿಗಳನ್ನು ಉಚಿತವಾಗಿ ನೀಡಲಾಗುವುದು. ಎಲ್ಲಾ ಮಕ್ಕಳು ಆಸಕ್ತಿಯಿಂದ ಕಲಿತು ಶಿಬಿರದ ಸಮಾರೋಪ ಸಮಾರಂಭದಲ್ಲಿ ಕಲಿತ ಚಟುವಟಿಕೆಗಳನ್ನು ಪ್ರದರ್ಶನ ಮಾಡಬೇಕು ಎಂದು ಹೇಳಿದರು.
ಜಿಲ್ಲಾ ಪರೀವಿಕ್ಷಣಾಧಿಕಾರಿ ಮುನಿಶ್ವರ ಹೆಚ್ ಚೂರಿ, ಶಿಬಿರದ ಸಂಪನ್ಮೂಲ ವ್ಯಕ್ತಿಗಳಾಗಿ ಸುಂದರ ಕುಲಕರ್ಣಿ, ಪ್ರಕಾಶಗೌಡ ಬಿ ಜಿ, ಮಾರುತಿ ತಳವಾರ, ಶ್ರೀಮತಿ ರಂಜನಾ ಭಟ್, ಶ್ರೀಮತಿ ಶ್ವೇತಾ ತರಿಕೇರಿ ಭಾಗವಹಿಸಿದ್ದರು.
ಕಾರ್ಯಕ್ರಮ ಸಂಯೋಜಕರು ಸೋಮನಗೌಡ ಗಾಳಿಗೌಡ್ರ ಕಾರ್ಯಕ್ರಮ ನಿರೂಪಿಸಿದರು. ರಾಮು ಪಾಟೀಲ್ ಸ್ವಾಗತಿಸಿ, ವಂದಿಸಿದರು.
ಸರ್ಕಾರಿ ಶಾಲೆಗಳಲ್ಲಿ ದಾಖಲೆ ಹೆಚ್ಚಿಸುವುದು “ನಮ್ಮ ಶಾಲೆ ನಮ್ಮ ಜವಾಬ್ದಾರಿ” ಕಾರ್ಯಕ್ರಮದ ಉದ್ದೇಶ
ಹಾವೇರಿ 14 : ಸರ್ಕಾರಿ ಶಾಲೆಗಳಲ್ಲಿ ದಾಖಲಾತಿಯನ್ನು ಹೆಚ್ಚಿಸುವುದು “ನಮ್ಮ ಶಾಲೆ ನಮ್ಮಜವಾಬ್ದಾರಿ” ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.ಪಾಟೀಲ ಹೇಳಿದರು.
ಹಾವೇರಿ ನಗರದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ನಂ.2 ರಲ್ಲಿ ಮಂಗಳವಾರ “ನಮ್ಮ ಶಾಲೆ ನಮ್ಮ ಜವಾಬ್ದಾರಿ”ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಆರ್.ಟಿ.ಇ. ಕಾಯಿದೆ ಅಡಿಯಲ್ಲಿ ಉಚಿತ ಶಿಕ್ಷಣ (ಖಖಿಇ ಂಛಿಣ ಹಿ ಖರಣ ಣಠ ಇಜಣಛಿಚಿಣಠ), ಸರ್ಕಾರಿ ಶಾಲೆಗಳ 1ನೇ ತರಗತಿಯಿಂದ 10ನೇ ತರಗತಿಯವರೆಗಿನ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಣೆ ಮಾಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಏಕರೂಪ ಶಿಕ್ಷಣದ ಅವಕಾಶ ಕಲ್ಪಿಸಲು ಹಾಗೂ ಕುಟುಂಬಗಳ ಮೇಲೆ ಆರ್ಥಿಕಭಾರ ತಗ್ಗಿಸಲು ಉಚಿತ ಪಠ್ಯಪುಸ್ತಕಗಳನ್ನು ವಿತರಿಸಲಾಗುತ್ತಿದೆ. ವಿದ್ಯಾರ್ಥಿಗಳ ಹಾಜರಾತಿ ಹೆಚ್ಚಿಸಲು, ಶಾರೀರಿಕ ಹಾಗೂ ಮಾನಸಿಕ ಬೆಳವಣಿಗೆಗೆ ಸಹಾಯ ಮಾಡಲು ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ 1 ರಿಂದ 10ನೇ ತರಗತಿಯ ಮಕ್ಕಳಿಗೆ ಮಧ್ಯಾಹ್ನ ಉಚಿತ ಪೌಷ್ಟಿಕ ಆಹಾರ ಒದಗಿಸಲಾಗುತ್ತಿದೆ. ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ಶಿಷ್ಯವೇತನ ನೀಡಲಾಗುತ್ತಿದೆ ಹಾಗೂ ವಿಕಲಚೇತನ ಮಕ್ಕಳಿಗೆ ಸಮನ್ವಯ ಶಿಕ್ಷಣ ಯೋಜನೆ ಮೂಲಕ ಮುಖ್ಯವಾಹಿನಿಗೆ ತರಲಾಗುತ್ತಿದೆ ಎಂದು ಹೇಳಿದರು.
ಅಟಲ್ ಟಿಂಕರಿಂಗ್ ಲ್ಯಾಬ್ : ಇದು ಅಟಲ್ ಇನೋವೆಷನ್ ಮಿಷನ್ (ಂಋ) ಎಂಬ ಕೇಂದ್ರ ಸರ್ಕಾರದ ಯೋಜನೆಯ ಭಾಗವಾಗಿದ್ದು, ವಿದ್ಯಾರ್ಥಿಗಳಲ್ಲಿ ಆವಿಷ್ಕಾರಶೀಲತೆ, ವಿಜ್ಞಾನಾಭಿವೃದ್ಧಿ ಮತ್ತು ಡಿಜಿಟಲ್ ಯುಗದ ಕೌಶಲ್ಯಗಳನ್ನು ಬೆಳೆಸಲು ಸಹಾಯಕವಾಗಿರುವ ಪ್ರಮುಖ ಯೋಜನೆಯಾಗಿದೆ ಎಂದರು.
ಮರು ಸಿಂಚನ ಕಾರ್ಯಕ್ರಮ ವಿದ್ಯಾರ್ಥಿಗಳ ಶಾಲಾ ಪಾಠಗಳನ್ನು ಅರ್ಥಮಾಡಿಕೊಳ್ಳದೆ ಹಿಂದಿಳಿದಿದ್ದು ನೀರೀಕ್ಷಿತ ಗುರಿ ತಲುಪಿಸಲು ರೂಪಿಸಿರುವ ಪೂರಕ ಶಿಕ್ಷಣ ಕಾರ್ಯಕ್ರಮವಾಗಿದೆ. ಆದರ್ಶ, ಶಾಲೆಗಳು, ಕಸ್ತೂರಿ ಬಾ ಶಾಲೆಗಳು ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳ ಮೂಲಕ ಉತ್ತಮ ಶಿಕ್ಷಣ ನೀಡಲಾಗುತ್ತಿದೆ ಎಂದು ತಿಳಿಸಿದರು.
ಈ ಬಾರಿಯ ಯುಪಿಎಸ್ಸಿ ಪರೀಕ್ಷೆಯಲ್ಲಿ ಸರ್ಕಾರಿ ಶಾಲೆಯಲ್ಲಿ ಓದಿದ ರಾಣೆಬೆನ್ನೂರಿನ ಅಬುಸಾಲಿಯಾಖಾನ್ ಕುಲಕರ್ಣಿ ಪಾಸಗಿದ್ದಾರೆ. ಸರ್ಕಾರಿ ಶಾಲೆಗಳು ಮಕ್ಕಳಿಗೆ ಹೆಚ್ಚಿನ ಜೀವನ ಅನುಭವಗಳನ್ನು ನೀಡುತ್ತವೆ ಎಂದು ಹೇಳಿದರು.
ಡಯಟ್ ಉಪ ಪ್ರಾಚಾರ್ಯ ಝಡ್.ಎಂ ಖಾಜಿ ಮಾತನಾಡಿ, ಇನ್ಸ್‌ಪೈರ್ ಅವಾರ್ಡ್ (INSPIRE Award – MANAK Scheme), ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ಆಖಖಿ) ವತಿಯಿಂದ ನಡೆಸಲಾಗುವ ವಿಜ್ಞಾನ ಪ್ರತಿಭೆಗಳ ಅಭಿವೃದ್ದಿಗಾಗಿ ರೂಪಿಸಲಾದ ರಾಷ್ಟ್ರೀಯ ಮಟ್ಟದಯೋಜನೆ ಋಖಕಋಇ ಎಂದರೆ: ""Innovation in Science Pursuit for Inspired Research (Million Minds Augmenting National Aspiration and Knowledge) ಶಾಲಾ ಮಕ್ಕಳಲ್ಲಿ ವೈಜ್ಞಾನಿಕ ಯೋಚನೆ, ನಾವೀನ್ಯತೆ ಮತ್ತುಸಂಶೋಧನಾ ಚಟುವಟಿಕೆ ಉತ್ತೇಜನ ಮಾಡುವುದು.
ಪ್ರತಿ ಮಗುವಿಗೂ ತಾಯಿ ಮುಖ್ಯ ಪಾತ್ರವನ್ನು ವಹಿಸುತ್ತಾಳೆ. ತನ್ನ ಮಗುವಿಗೆ ಯಾವ ರೀತಿಯಾಗಿ ಪ್ರೋತ್ಸಾಹಿಸಬಹುದು ಎಂದು ಉದಾಹರಣೆಗಳೊಂದಿಗೆ ವಿವರಿಸಿದರು.
“ ಜ್ಞಾನದೀಪ್ತಿ” ಅಂದರೆ ಎಲ್ಲಾ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆಂಗ್ಲ ಮಾಧ್ಯಮ ಆರಂಭಿಸುವುದಾಗಿದೆ. “ ಜ್ಞಾನಸುಧಾ” ಕಾರ್ಯಕ್ರಮದಲ್ಲಿ ಆಯ್ದ 100 ಶಾಲೆಗಳಿಗೆ ತಲಾ 10 ಕಂಪ್ಯೂಟರ್ ನೀಡಲಾಗುತ್ತಿದೆ ಎಂದು ಹೇಳಿದರು.
ಶಿಕ್ಷಣ ಪ್ರೇಮಿ ನಿಜಲಿಂಗಣ್ಣ ಬಶಗಣ್ಣಿ ಅವರು ಮಾತನಾಡಿ, ಮಕ್ಕಳ ಸವಾಂರ್ಗಿಣ ಬೆಳವಣಿಗೆ ಆಗಬೇಕಾದರೆ ಪೋಷಕರು ಶಾಲೆಗೆ ಬಂದು ತಮ್ಮ ಮಕ್ಕಳ ಕಲಿಕೆ ಹೇಗಿದೆ ಎಂದು ಖುದ್ದಾಗಿ ತಿಳಿದಾಗ ಮಾತ್ರ ಕಲಿಕೆ ಸಾಧ್ಯ. ಜೊತೆಗೆ ಶಿಕ್ಷಕರು ಕಾಳಜಿಯಿಂದ ಮಕ್ಕಳ ಶಿಕ್ಷಣ ನೀಡಬೇಕು ಎಂದರು.
ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷೆ ಕವಿತಾ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣಾಧಿಕಾರಿಗಳ ಸಂಘದ ಜಿಲ್ಲಾ ಕಾರ್ಯದರ್ಶಿ ಬಿ.ಎಂ. ಬೇವಿನಮರದ, ನಗರಸಭೆ ಸದಸ್ಯರು, ಚ ಒ ಖಾಜಿಸರ್, ರಮೇಶ ಪೂಜಾರ, ಶ್ರೀಮತಿ ರೇಖಾ ತೋಟಗೇರ ವಿವಿಧ ಇಲಾಖೆ ಅಧಿಕಾರಿಗಳು, ಹಳೆ ವಿದ್ಯಾರ್ಥಿಗಳ ಸಂಘದವರು, ಶಿಕ್ಷಕರು, ಸಿ.ಆರ್.ಪಿ., ಪೋಷಕರು ಇತರರು ಉಪಸ್ಥಿತರಿದ್ದರು. ಶಿಲ್ಪ ಉಜ್ಜಮ್ಮನವರ ಕಾರ್ಯಕ್ರಮ ನಿರೂಪಿಸಿದರು. ಎಂ.ಡಿ.ಮಾದರ ಸ್ವಾಗತಿಸಿದರು.