ಲೋಕದರ್ಶನವರದಿ
ಮಹಾಲಿಂಗಪುರ: ಕಾಲೇಜು ವಿದ್ಯಾಥರ್ಿಗಳು ಸಾಮಾಜಿಕ ಜಾಗೃತಿ ಮೂಡಿಸುವ ರಾಯಭಾರಿಗಳಂತೆ ಕರ್ತವ್ಯ ನಿಭಾಯಿಸಬೇಕು ಎಂದು ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಸವದಿ ಹೇಳಿದರು.
ಸಮೀಪದ ಕೆಸರಕೊಪ್ಪ ಗ್ರಾಪಂ ವ್ಯಾಪ್ತಿಯ ಬಿಸನಾಳ ಗ್ರಾಮದಲ್ಲಿ ಕೆಎಲ್ಇ ಸಂಸ್ಥೆಯ ಎಸ್ಸಿಪಿ ಪಪೂ ಕಾಲೇಜಿನ ಎನ್ನೆಸ್ಸೆಸ್ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಸೇವೆಯೆಂದರೆ ಕೇವಲ ನೌಕರಿಯಲ್ಲ, ಪ್ರತಿಫಲಾಪೇಕ್ಷೆ ಇಲ್ಲದೇ ಎನ್ನೆಸ್ಸೆಸ್ ಸೇವಾಥರ್ಿಗಳು ಶ್ರಮದಾನ ಮತ್ತು ಅಭಿಯಾನದ ಮೂಲಕ ಗ್ರಾಮೀಣ ಭಾಗದ ಜನರಲ್ಲಿ ಸ್ವಚ್ಚತೆ, ಸಾಕ್ಷರತೆ, ಮತ್ತು ಸಾಮಾಜಿಕ ಬದ್ಧತೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಕೂಡ ಶ್ರೇಷ್ಠ ಸೇವೆ ಎಂದರು.
ಠಾಣಾಧಿಕಾರಿ ಆರ್.ವೈ.ಬೀಳಗಿ ಮಾತನಾಡಿ ಎನ್ನೆಸ್ಸೆಸ್ ಸೇವಾಥರ್ಿಗಳು ಗ್ರಾಮೀಣ ಜನತೆಯಲ್ಲಿ ಕಾನೂನು ಪಾಲನೆ, ಜೀವ ರಕ್ಷಣೆ ಬಗ್ಗೆ ಅರಿವು ಮೂಡಿಸಬೇಕು ಎಂದರು.
ಕಾನಿಪ ಅಧ್ಯಕ್ಷ ಜಯರಾಂ ಶೆಟ್ಟಿ ಮಾತನಾಡಿ ಎನ್ನೆಸ್ಸೆಸ್ ಶಿಬಿರ ಯುವಕರಲ್ಲಿ ಶಿಸ್ತು, ನಾಯಕತ್ವ ಗುಣ, ಜವಾಬ್ದಾರಿ, ಅಭಿವ್ಯಕ್ತಿ ಕಲೆ ಒಡಮೂಡಿಸುತ್ತದೆ ಎಂದರು.
ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿ ಎಸ್.ಎಚ್.ಮೆಳವಂಕಿ ಮಾತನಾಡಿ ಶಿಬಿರದ ಉದ್ದೇಶ ಮತ್ತು ಯೋಜನೆ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಗಣ್ಯರನ್ನು ಸನ್ಮಾನಿಸಲಾಯಿತು. ಕೆಸರಕೊಪ್ಪ ಗ್ರಾಪಂ ಅಧ್ಯಕ್ಷ ಬಸವರಾಜ ಶಿರೋಳ ಅಧ್ಯಕ್ಷತೆ ವಹಿಸಿದ್ದರು.
ಪಿಕೆಪಿಎಸ್ ಅಧ್ಯಕ್ಷ ಬಸನಗೌಡ ಪಾಟೀಲ, ಪುರಸಭೆ ಸದಸ್ಯ ಬಸವರಾಜ ಹಿಟ್ಟಿನಮಠ, ಕೆಎಲ್ಇ ಸ್ಥಾನಿಕ ಆಡಳಿತ ಮಂಡಳಿ ಸದಸ್ಯರಾದ ಅಶೋಕ ಅಂಗಡಿ, ಸಂತೋಷ ಹುದ್ದಾರ, ಆರ್.ಎನ್.ಪಟ್ಟಣಶೆಟ್ಟಿ, ಸ್ಥಳೀಯರಾದ ಸಂಗಪ್ಪ ಹಲ್ಲಿ, ದುಂಡಪ್ಪ ಜಾಧವ, ಬಾಳಪ್ಪ ಜಗದಾಳ, ಮಾರುತಿ ಕರೋಶಿ, ಮಹಾಲಿಂಗ ಶಿರೋಳ, ಬಸಪ್ಪ ಚನ್ನಾಳ, ಸಿದ್ದಪ್ಪ ಶಿರೋಳ, ಮಲ್ಲಪ್ಪ ಭದ್ರಶೆಟ್ಟಿ, ಸಿ.ಆರ್.ಚೆನ್ನಾಳ, ಬಿ.ಬಿ.ಯಲ್ಲಟ್ಟಿ ಇದ್ದರು. ಪ್ರಾಚಾರ್ಯ ಡಿ.ಬಿ.ಕೋಳಿ ಸ್ವಾಗತಿಸಿದರು. ಸಹಾಯಕ ಕಾರ್ಯಕ್ರಮಾಧಿಕಾರಿ ಬಿ.ಆರ್.ತಾಂಬಡೆ ಎನ್ನೆಸ್ಸೆಸ್ ಗೀತೆ ಹಾಡಿದರು. ಸುರೇಖಾ ಪೋತದಾರ ಮತ್ತು ಸಾಕ್ಷಿ ಕೆಸರಕೊಪ್ಪ ಪ್ರಾರ್ಥನಾ ಗೀತೆ ಹಾಡಿದರು. ಆರ್.ಎಸ್.ಕಲ್ಲೋಳಿ ನಿರೂಪಿಸಿದರು. ಬಿ.ಬಿ.ಹಂದಿಗುಂದ ವಂದಿಸಿದರು.