ಬಳ್ಳಾರಿ,ಸೆ.11: ಬಳ್ಳಾರಿಯ ವಿಮ್ಸ್ ನಲ್ಲಿ ಇದೇ ಮೊದಲ ಬಾರಿಗೆ ರಾಜ್ಯಮಟ್ಟದ 30ನೇ ಪ್ರಸೂತಿ ಮತ್ತು ಸ್ತ್ರೀರೋಗ ಕಾರ್ಯಾಗಾರ ಹಾಗೂ ಸಮ್ಮೇಳನವು ಇದೇ ಸೆ.13 ರಿಂದ 15ರವರೆಗೆ ಮೂರು ದಿನಗಳ ಕಾಲ ನಡೆಯಲಿದೆ.
"ಮಾತಾ ರಕ್ಷತಿ ರಕ್ಷತಃ" ಎಂಬ ಧ್ಯೇಯವಾಕ್ಯದೊಂದಿಗೆ ಈ ಸಮ್ಮೇಳನ ಜರುಗುತ್ತಿದ್ದು, ರಾಜ್ಯದ ವಿವಿಧೆಡೆಯಿಂದ ಸಾವಿರ ತಜ್ಞ ವೈದ್ಯರು ಈ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ. ದೇಶದ ವಿವಿಧೆಡೆಯಿಂದ 20 ಸಂಪನ್ಮೂಲ ತಜ್ಞ ವೈದ್ಯರು ಆಗಮಿಸಿ ಈ ಕಾರ್ಯಾಗಾರ ಮತ್ತು ಸಮ್ಮೇಳನದಲ್ಲಿ ತಮ್ಮ ವಿಷಯಗಳನ್ನು ಹಂಚಿಕೊಳ್ಳಲಿದ್ದಾರೆ. ಸ್ಪೇನ್ನ ಡಾ.ಸ್ಯಾಂಟಿಯಾಗೋ, ಅಮೆರಿಕಾದ ಡಾ.ಜಿಪ್ ಸ್ಟ್ರೀಂಜರ್ ಹಾಗೂ ಇಂಗ್ಲೆಂಡಿನ ಗ್ರಹಾಂ ಟ್ರೇಡ್ ಮೆನ್ ಅವರು ಆಗಮಿಸಿ ವೈದ್ಯಕೀಯ ಕ್ಷೇತ್ರದಲ್ಲಿ ಇತ್ತೀಚಿನ ದಿನಗಳಲ್ಲಿ ಉಂಟಾದ ಸಂಶೋಧನೆಗಳು ಹಾಗೂ ಬದಲಾವಣೆಗಳ ಕುರಿತ ವಿಷಯಗಳನ್ನು ಹಂಚಿಕೊಳ್ಳಲಿದ್ದಾರೆ ಎಂದು ಸಮ್ಮೇಳನದ ಸಂಘಟನಾ ಕಾರ್ಯದಶರ್ಿ ಡಾ.ವೀರೇಂದ್ರ ಕುಮಾರ ಅವರು ತಿಳಿಸಿದರು.
ನಗರದ ವಿಮ್ಸ್ ನಲ್ಲಿ ಬುಧವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.
ಈ ಕಾರ್ಯಾಗಾರದಲ್ಲಿ ಲ್ಯಾಪ್ರೋಸ್ಕೋಪಿ ಚಿಕಿತ್ಸಾ ಕ್ಷೇತ್ರದಲ್ಲಿ 15 ಶಸ್ತ್ರಚಿಕಿತ್ಸೆಗಳನ್ನು ಮಾಡಿ ತೊರಿಸಲಾಗುವುದು. ಸ್ತ್ರೀರೋಗ ಕ್ಷೇತ್ರದಲ್ಲಿ ಅಲ್ಟ್ರಾಸೌಂಡ್ ಬಳಕೆ, ವೈದ್ಯಕೀಯ ಕ್ಷೇತ್ರದಲ್ಲಿ ಸಂಶೋಧನಾ ವಿಧಾನಗಳ ಕುರಿತು ಕಾರ್ಯಾಗಾರದಲ್ಲಿ ಚರ್ಚಿಸಲಾಗುತ್ತದೆ ಎಂದರು.
ಸೆ.13ರಂದು ವಿಮ್ಸ್ ಬಿ.ಸಿ.ರಾಯ್ ಹಾಗೂ ಶಿಕ್ಷಕರ ಸದನದಲ್ಲಿ ಈ ಕಾರ್ಯಾಗಾರ ಜರುಗಲಿದ್ದು, ಸಂಜೆ 6:30ಕ್ಕೆ ಸಮ್ಮೇಳನದ ಉದ್ಘಾಟನಾ ಸಮಾರಂಭ ಜರುಗಲಿದೆ. ರೈಲ್ವೆ ಐಜಿಪಿ ರೂಪಾ ಮೌದ್ಗಿಲ್ ಅವರು ಚಾಲನೆ ನೀಡಲಿದ್ದು, ಡಾ.ಗುರುರಾಜ ಕರ್ಜಗಿ ಅವರು ಸಮಾಜ ಮತ್ತು ವೈದ್ಯರು ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಅತಿಥಿಗಳಾಗಿ ಆಗಮಿಸಲಿದ್ದಾರೆ.
ಸ್ತ್ರೀರೋಗ ಕ್ಷೇತ್ರದಲ್ಲಿ ಹೊಸ ಹೊಸ ಆವಿಷ್ಕಾರಗಳನ್ನು ಮತ್ತು ಸಂಶೋಧನೆಗಳನ್ನು ತಿಳಿಸುವ, ವೈದ್ಯಕೀಯ ಕ್ಷೇತ್ರದ ನೈಪುಣ್ಯತೆ ಪಸರಿಸುವ ಹಾಗೂ ಸಾಮಾಜಿಕ ಕಳಕಳಿ ಇರುವ ವಿಷಯಗಳ ಮೇಲೆ ಚಚರ್ೆಗಳನ್ನು ಈ ಸಮ್ಮೇಳನದಲ್ಲಿ ಮಾಡಲಾಗುತ್ತದೆ ಎಂದು ಅವರು ವಿವರಿಸಿದರು.
ಈ ಸಮ್ಮೇಳದಲ್ಲಿ 300 ಪ್ರಬಂಧಗಳನ್ನು ಮಂಡಿಸಲಾಗುತ್ತದೆ. 29ನೇ ಸಮ್ಮೇಳನ ಬಾಗಲಕೋಟೆಯಲ್ಲಿ ಜರುಗಿತ್ತು. 31ನೇ ಸಮ್ಮೇಳನ ದಾವಣಗೆರೆಯಲ್ಲಿ ಜರುಗಲಿದೆ ಎಂದರು. ಈ ಸಂದರ್ಭದಲ್ಲಿ ಸಮ್ಮೇಳನದ ಸಂಘಟನಾಧ್ಯಕ್ಷೆ ಡಾ.ಸುಮನ್ ಗಡ್ಡಿ, ಡಾ.ವಿಜಯ ಅರಸು, ಡಾ.ರಾಮರಾಜು, ಡಾ.ಚಂದ್ರಶೇಖರ, ಡಾ.ಶಂಕರ್, ಡಾ.ಬಿ.ಕೆ.ಅನುಪಮಾ ಇದ್ದರು.