ಲೋಕದರ್ಶನ ವರದಿ
ಶೇಡಬಾಳ 31: ಶಿವಾನಂದ ಮಹಾವಿದ್ಯಾಲಯದ ಆಯ್.ಕ್ಯೂ.ಎ.ಸಿ., ವಿದ್ಯಾರ್ಥಿನಿಯರ ಸಂಘ, ಧಾರವಾಡದ ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಳಗಾವಿ ಇವರ ಸಹಯೋಗದಲ್ಲಿ ಬೇಂದ್ರೆಯವರ 125ನೆಯ ಜನ್ಮದಿನಾಚರಣೆಯ ಅಂಗವಾಗಿ 'ಬೇಂದ್ರೆ ಕಾವ್ಯಾನುಸಂಧಾನ' ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕು. ಮಹಾನಂದಾ ಗೋಸಾವಿಯವರು ಬೇಂದ್ರೆ ಭಾವಗೀತೆಗಳನ್ನು ಪ್ರಸ್ತುತ ಪಡಿಸಿದರು. ಪ್ರಮೋದಾ ಉಪಾಧ್ಯಾಯಯವರು ತಮ್ಮ ತಂಡದ ಮೂಲಕ ಅಭೂತಪೂರ್ವ ನೃತ್ಯ ಪ್ರದಶರ್ಿಸಿದರು. ಕಿರುತೆರೆ ಹಾಗೂ ಚಲನಚಿತ್ರ ಕಲಾವಿದರಾದ ಅನಂತ ದೇಶಪಾಂಡೆಯವರು ಬೇಂದ್ರೆಯವರ ದರ್ಶನ ಮಾಡಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕನ್ನಡ ಕೋಗಿಲೆ ಸಿಜನ್-2ರ ವಿಜೇತರಾದ ಖಾಸಿಂ ಅಲಿ ಮಾತನಾಡಿ ಜೀವನದಲ್ಲಿ ಅನುಭವಿಸಿದ ಸೋಲೆ ಗೆಲುವಿಗೆ ಸೋಪಾನವಾಗುತ್ತದೆ. ಸೋತಾಗ ಎದೆಗುಂದಿದರೆ ಅಥವಾ ಅಧೈರ್ಯವಾದರೆ, ಖಂಡಿತ ಗೆಲುವಿನತ್ತ ದಾಪುಗಾಲು ಹಾಕುವುದಕ್ಕೆ ಸಾಧ್ಯವಾಗುವುದಿಲ್ಲ. ಯಾಕೆಂದರೆ ಸೋತಾಗ ಮನಸ್ಸು ನಮ್ಮ ಹಿಡಿತದಲ್ಲಿರಲು ಸಾಧ್ಯವಿಲ್ಲ, ಅದನ್ನು ಮೀರಿ ಯಶಸ್ಸು ಕಾಣಬೇಕಾಗುತ್ತದೆ. ನಮಗೆ ಆತ್ಮವಿಶ್ವಾಸವೇ ದೇವರಾಗಿರಬೇಕು. ಆತ್ಮಸಾಕ್ಷಿಯ ವಿರುದ್ಧವಾಗಿ ಯಾವುದೇ ಕೆಲಸವನ್ನು ಮಾಡಿದರೂ ಅದು ನಿರರ್ಥಕವಾಗುತ್ತದೆಂದು ಹೇಳಿದರು.
ವಿದ್ಯಾರ್ಥಿನಿಯರ ಸಂಘದ ಕಾರ್ಯಧ್ಯಕ್ಷರಾದ ಡಾ.ಡಿ.ಡಿ.ನಗರಕರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ವಿದ್ಯಾರ್ಥಿನಿಯರ ಸಂಘ ಕಳೆದ ಹಲವು ವರ್ಷಗಳಿಂದ ಈ ರೀತಿಯ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ. ಬೇಂದ್ರೆಯವರ ಕಾವ್ಯವನ್ನು ಇವತ್ತೀನ ಪೀಳಿಗೆಗೆ ಬೇರೆ ಬೇರೆ ರೀತಿಯಲ್ಲಿ ತೋರಿಸುವ ಅನಿವಾರ್ಯವಿದ್ದು ಈ ನಿಟ್ಟಿನಲ್ಲಿ ಬೇಂದ್ರೆ ಕಾವ್ಯಾನುಸಂಧಾನದಂತಹ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎಸ್.ಓ.ಹಲಸಗಿಯವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರ ಸಹಯೋಗದಲ್ಲಿ ಇಂತಹ ವಿಧಾಯಕ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದು ಸಂತಸ ತಂದಿದೆ. ಬೇಂದ್ರೆಯವರನ್ನು ವಿದ್ಯಾರ್ಥಿಗಳು ಮತ್ತಷ್ಟು ಅರ್ಥಮಾಡಿಕೊಳ್ಳಲು ಈ ರೀತಿಯ ಕಾರ್ಯಕ್ರಮಗಳು ಪ್ರಯೋಜನಕಾರಿಯಾಗಿದಿಯೆಂದರು. ಸಾನಿಧ್ಯವಹಿಸಿದ ಸಂಸ್ಥೆಯ ಏಕನ್ಯಾಸಧಾರಿಗಳಾದ ಪ.ಪೂ.ಶ್ರೀ.ಯತೀಶ್ವರಾನಂದ ಸ್ವಾಮೀಜಿಯವರು ಸಾಧನಕೇರಿಯ ಬೇಂದ್ರೆಯವರು ಗಡಿಭಾಗದ ತಾಲೂಕಿನ ಕಾಗವಾಡಕ್ಕೆ ಬಂದಿದ್ದು ನಮಗೆಲ್ಲ ಸಂತಸ ತಂದಿದೆಯೆಂದರು.
ಸನ್ಮಾನ ಗೌರವವನ್ನು ಪ್ರೊ. ಜೆ.ಕೆ.ಪಾಟೀಲ ನಡೆಸಿಕೊಟ್ಟರು ಪ್ರೊ.(ಮಿಸ್) ಎಸ್.ಡಿ.ಮಗದುಮ್ಮ ಮತ್ತು ಪ್ರೊ.(ಮಿಸ್). ಎ.ಆಯ್.ಜಂಗಮಶೆಟ್ಟಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯವರು ಮತ್ತು ವಿದ್ಯಾಥರ್ಿಗಳು ಉಪಸ್ಥಿತರಿದ್ದರು. ಡಾ.ಎಸ್.ಪಿ.ತಳವಾರ ಸ್ವಾಗತಿಸಿದರು. ಪ್ರೊ. ಆನಂದ ಎಂ. ಜಕ್ಕಣ್ಣವರ ಪರಿಚಯಿಸಿದರು. ಡಾ. ಆರ್.ಎಸ್.ಕಲ್ಲೋಳಿಕರ ವಂದಿಸಿದರು.