ಲೋಕದರ್ಶನ ವರದಿ
ಸಿಂದಗಿ 22: ಪಟ್ಟಣದ ಪುರಸಭೆ ಹಾಗೂ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ಸರಕಾರಿ ಖುಲ್ಲಾ ಜಾಗೆಗಳಲ್ಲಿ ಅತಿಕ್ರಮಣಕಾರರಿಂದ ಅನಧಿಕೃತವಾಗಿ ನಿರ್ಮಾಣವಾದ ಅಂಗಡಿ (ಶೆಡ್)ಗಳಿಗೆ ವಿದ್ಯುತ್ ಪೂರೈಕೆ ಮಾಡುವುದರ ಮೂಲಕ ಅತಿಕ್ರಮಣಕಾರರಿಗೆ ಹೆಸ್ಕಾಂ ಇಲಾಖೆ ಪ್ರೋತ್ಸಾಹಿಸುತ್ತಿದ್ದು ಇದರಿಂದಾಗಿ ಪಟ್ಟಣದಲ್ಲಿ ಸರಕಾರಿ ರಸ್ತೆಗಳು ಒತ್ತುವರಿಯಾಗಿ ಟ್ರಾಫಿಕ್ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂದು ಪ್ರಜ್ಞಾವಂತ ನಾಗರೀಕರು ಆರೋಪಿಸುತ್ತಾರೆ.
ಹೆಸ್ಕಾಂನಿಂದ ಯಾವುದೇ ಹೊಸ ಮೀಟರ್ ಪಡೆಯಬೇಕೆಂದರೆ ಅರ್ಜಿದಾರರು ಕಡ್ಡಾಯವಾಗಿ ಯಾವ ಜಾಗಕ್ಕೆ ಮೀಟರ್ ಪಡೆಯುತ್ತಾರೋ ಆ ಜಾಗಾವು ಅಜರ್ಿದಾರರ ಹೆಸರಿನಲ್ಲಿರಬೇಕು. ಪುರಸಭೆಯಿಂದ ಜಾಗಾದ ಉತಾರೆ, ನೀರಾಕ್ಷೇಪಣಾ (ಎನ್ಓಸಿ) ಪ್ರಮಾಣಪತ್ರ, ರೂ.200 ಮೌಲ್ಯದ ಛಾಪಾ ಕಾಗದ, ಆಧಾರ ಕಾಡರ್್ ಝರಾಕ್ಸ್ ನಕಲು ಪ್ರತಿ. ಅಜರ್ಿದಾರರ ಭಾವಚಿತ್ರ ಅಜರ್ಿಯೊಂದಿಗೆ ಲಗತ್ತಿಸಬೇಕು ಹಾಗೂ ಹೆಸ್ಕಾಂ ವಿಭಾಗಾಧಿಕಾರಿಗಳು ಕಡ್ಡಾಯವಾಗಿ ಸ್ಥಾನಿಕವಾಗಿ ಸ್ಥಳ ಪರಿಶೀಲನೆ (ಚೌಕಾಸಿ) ಮಾಡುವುದರ ಮೂಲಕ ನೂತನ ಮೀಟರ್ ನೀಡಬೇಕು ಎನ್ನುವ ನಿಯಮಗಳಿವೆ. ಆದರೆ ಇದೆಲ್ಲವನ್ನೂ ಗಾಳಿಗೆ ತೂರಿರುವ ಇಲ್ಲಿಯ ಹೆಸ್ಕಾಂ ಅಧಿಕಾರಿಗಳು ಹೆಚ್ಚಿನ ದುಡ್ಡು ಪಡೆಯವ ಮೂಲಕ ಸರಕಾರಿ ಜಾಗೆಗಳ ಅತಿಕ್ರಮಣಕಾರರಿಗೆ ಅನಧಿಕೃತವಾಗಿ ವಿದ್ಯುತ್ ಮೀಟರ್ ನೀಡುತ್ತಿದ್ದಾರೆ.
ಇದಕ್ಕೆ ಪುಷ್ಠಿ ಎನ್ನುವಂತೆ ಪಟ್ಟಣದ ಮಿನಿ ವಿಧಾನಸೌಧದ ಕಂಪೌಂಡ್ ಗೊಡೆಗೆ ಹೊಂದಿಕೊಂಡಿರುವ ಕಾಲೇಜ್ ರೋಡ್, ಹೆಸ್ಕಾಂ ಕಚೇರಿ ಮುಂಭಾಗದ ವಿಜಯಪುರ ಮುಖ್ಯ ರಸ್ತೆ, ಸಂಗಮಬಾರ್ ಎದುರಿಗಿನ ರಸ್ತೆ, ವಿವೇಕಾನಂದ ವೃತ್ತದಲ್ಲಿರುವ ಪೊಲೀಸ್ ಕ್ವಾಟರ್ಸ ಎದುರಿಗಿನ ರಸ್ತೆ, ಗಾಂಧಿ ಸರ್ಕಲ್, ತಅಂಬೇಡ್ಕರ್ ಸರ್ಕಲ್ ಎದುರಿಗಡೆ ಇರುವ ರಸ್ತೆ ಇಕ್ಕೇಲಗಳಲ್ಲಿ ಪುರಸಭೆ ಹಾಗೂ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ಸರಕಾರಿ ಜಾಗೆಗಳನ್ನು ಕೆಲವರು ಅತಿಕ್ರಮಣ ಮಾಡಿಕೊಂಡಿದ್ದು ಈ ಜಾಗಗಳಿಗೆ ಕಾನೂನಿನ ಪ್ರಕಾರ ವಿದ್ಯುತ್ ಮೀಟರ್ ನೀಡಲು ಬರುವುದಿಲ್ಲ. ಆದರೂ ಸಹ ಈ ಅತಿಕ್ರಮಣ ಜಾಗಗಳಿಗೆ ಅನಧಿಕೃತವಾಗಿ ವಿದ್ಯುತ್ ಮೀಟರ್ ನೀಡಲಾಗಿದೆ. ಇದನ್ನೇ ಮೂಲ ಬಂಡವಾಳ ಮಾಡಿಕೊಂಡಿರುವ ಕೆಲವರು ಸರಕಾರಿ ಜಾಗಾಗಳನ್ನು ಅತಿಕ್ರಮಣ ಮಾಡಿಕೊಂಡು ಅಲ್ಲಿ ವಾಣಿಜ್ಯ ಉಪಯೋಗಕ್ಕೆ ಬರುವಂತಹ ಅಂಗಡಿಗಳನ್ನು ನಿಮರ್ಿಸಿ ಅದಕ್ಕೆ ಹೆಸ್ಕಾಂ ಇಲಾಖೆ ಅಧಿಕಾರಿಗಳಿಗೆ ಲಂಚ ರೂಪದಲ್ಲಿ ದುಡ್ಡುಕೊಟ್ಟು ಹೊಸ ಮೀಟರ್ಗಳನ್ನು ಅನಧಿಕೃತವಾಗಿ ಅಳವಡಿಸಿ ಬೇರೊಬ್ಬರಿಗೆ ಬೇನಾಮಿಯಾಗಿ ಸುಮಾರು ರೂ.1 ಲಕ್ಷದಿಂದ ರೂ.2ಲಕ್ಷಗಳಿಗೆ ಮಾರಾಟ ಮಾಡಿದರೆ, ಇನ್ನೂ ಕೆಲವರು ರೂ.3ಸಾವಿರದಿಂದ ರೂ.4ಸಾವಿರಗಳಿಗೆ ತಿಂಗಳ ಬಾಡಿಗೆ ಪಡಯುವುದು ಸವರ್ೆ ಸಾಮಾನ್ಯವಾಗಿಬಿಟ್ಟಿದೆ ಎಂದು ಪ್ರಜ್ಞಾವಂತರು ದೂರುತ್ತಾರೆ.
ಇದರಿಂದ ಪಟ್ಟಣದ ವಿಜಯಪುರ ಮುಖ್ಯ ರಸ್ತೆ, ಕಾಲೇಜ್ ರೋಡ್, ಅಂಬೇಡ್ಕರ್ ಸರ್ಕಲ್ ಸೇರಿದಂತೆ ಪ್ರಮುಖ ರಸ್ತೆಗಳು ಅತಿಕ್ರಮಣಕಾರರಿಂದ ತುಂಬಿ ಹೋಗಿದ್ದು ಇಲ್ಲಿ ದಿನನಿತ್ಯ ಟ್ರಾಫಿಕ್ ಸಮಸ್ಯೆ ಹೇಳತೀರದಾಗಿದೆ. ಇದರಿಂದಾಗಿ ಈ ರಸ್ತೆಗಳಲ್ಲಿ ವಾಹನಗಳು ಸಂಚರಿಸಲು ಸಾಕಷ್ಟು ಹರಸಾಹಸ ಪಡಬೇಕಾದ ಪರಿಸ್ಥಿತಿ ನಿಮಾರ್ಣವಾಗಿದೆ. ಕಾರಣ ಅತಿಕ್ರಮಣಕಾರರಿಗೆ ನೀಡಲಾಗಿರುವ ಅನಧಿಕೃತ ವಿದ್ಯುತ್ ಮೀಟರ್ಗಳನ್ನು ಹೆಸ್ಕಾಂ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಳ್ಳಬೇಕು. ಪುರಸಭೆ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸಹ ಅತಿಕ್ರಮಣ ತೆರವಿಗೆ ಮುಂದಾಗಬೇಕೆಂದು ಕನರ್ಾಟಕ ರಣಧೀರ ಪಡೆ ರಾಜ್ಯ ಉಪಾಧ್ಯಕ್ಷ ನಿಂಗರಾಜ್ ಅತನೂರ ಆಗ್ರಹಿಸುತ್ತಾರೆ.
ಹೆಸ್ಕಾಂ ಎಇಇ ಮಂಜುನಾಥ ನಾಯಕ ಅವರನ್ನು ಪ್ರಶ್ನಿಸಿದರೆ, ನಿಯಮ ಬಾಹೀರ ವಿದ್ಯುತ್ ಮೀಟರ್ ಅಳವಡಿಕೆಗೂ ತಮಗೂ ಯಾವುದೇ ರೀತಿ ಸಂಬಂಧವಿಲ್ಲ ಎನ್ನುವ ರೀತಿ ಹಾರಿಕೆ ಉತ್ತರ ನೀಡುವ ಮೂಲಕ ತಮ್ಮ ಹೊಣೆಗೇಡಿತನವನ್ನು ಪ್ರದರ್ಶಿಸಿದರು.
ಒಟ್ಟಾರೆ ಹೆಸ್ಕಾಂ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಸದ್ಯ ಪಟ್ಟಣದ ವಾಹನ ಸವಾರರು, ಪಾದಚಾರಿಗಳು ಮಾತ್ರ ಟ್ರಾಫಿಕ್ ಸಮಸ್ಯೆ ಸಿಲುಕಿ ನಲುಗುವಂತಾಗಿದೆ. ಇನ್ನಾದರೂ ಹೆಸ್ಕಾ ಇಲಾಖೆಯ ಉನ್ನತಾಧಿಕಾರಿಗಳು ಎಚ್ಚೆತ್ತುಕ್ಕೊಂಡು ಸಿಂದಗಿ ಹೆಸ್ಕಾಂ ಕಚೇರಿಯ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುತ್ತಾರಾ? ಅನಧಿಕೃತ ಮೀಟರ್ಗಳನ್ನು ವಶಕ್ಕೆ ಪಡೆಯುತ್ತಾರಾ ಕಾದು ನೋಡಬೇಕಾಗಿದೆ.