ರಜತ ಮಹೋತ್ಸವ: ಶಾಲೆ ಮತ್ತು ಶಿಕ್ಷಕರನ್ನು ಎಂದಿಗೂ ಮರೆಯಬಾರದು-ಪಾಟೀಲ್
ಕುಕನೂರು 04: ತಾಲ್ಲೂಕಿನ ಸೋಂಪೂರ ಗ್ರಾಮದ ಶ್ರೀಶರಣಬಸವೇಶ್ವರ ಪ್ರೌಢಶಾಲೆಯಲ್ಲಿ 2003-04 ನೇ ಸಾಲಿನ ಹತ್ತನೇಯ ತರಗತಿ ವಿದ್ಯಾರ್ಥಿಗಳಿಂದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನದ ರಜತ ಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸೋಮಶೇಖರ್ ಪಾಟೀಲ್ ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿ ಕಲಿತ ಶಾಲೆ ಮತ್ತು ಕಲಿಸಿದ ಶಿಕ್ಷಕರನ್ನು ಎಂದಿಗೂ ಮರೆಯಬಾರದು. ಶಿಕ್ಷಣ ಕ್ಷೇತ್ರದಲ್ಲಿ ಸೇವೆಸಲ್ಲಿಸಲು ಪುಣ್ಯ ಮಾಡಿರಬೇಕು. ನವ ಸಮಾಜವನ್ನು ನಿರ್ಮಾಣ ಮಾಡುವ ಶಕ್ತಿ ಇರುವುದು ಶಿಕ್ಷಕರಿಗೆ ಮಾತ್ರ. ಅಕ್ಷರ ನೀಡಿದ ಶಿಕ್ಷಕರಿಗೆ ಗುರುವಂದನೆ ಸಲ್ಲಿಸುವುದು ಶ್ಲಾಘನೀಯ ಕಾರ್ಯ ಎಂದರು.
ನಿವೃತ್ತ ಶಿಕ್ಷಕರಾದ ಕೆ ವಿ ಉಣಚಗೇರಿ ಮಾತನಾಡಿ ಗ್ರಾಮೀಣ ಭಾಗದಲ್ಲಿ ಶಿಕ್ಷಣವನ್ನು ಜನಸಾಮಾನ್ಯರಿಗೂ ನೀಡಿ ಸಮಾಜದಲ್ಲಿ ಗೌರವವನ್ನು ಹೆಚ್ಚಿಸಲು ಶ್ರೀ ಶರಣಬಸವೇಶ್ವರ ಪ್ರೌಢ ಶಾಲೆಯು 45 ವರ್ಷಗಳಿಂದ ಶೈಕ್ಷಣಿಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸಿದೆ. ಯುವ ಪೀಳಿಗೆಗೆ ಉತ್ತೇಜನ ನೀಡುವಲ್ಲಿ ಶ್ರಮಿಸೋಣ ಬದುಕಿನಲ್ಲಿ ಕಳೆದ ದಿನಗಳನ್ನು ನಾವು ಮರೆಯಬಾರದು ಶಿಕ್ಷಕನಾಗಿ ಸೇವೆ ಸಲ್ಲಿಸಿದ್ದು ನನ್ನ ಸೌಭಾಗ್ಯ ಎಂದರು. ಗುರುವಂದನಾ ಮತ್ತು ಸ್ನೇಹ ಸಮ್ಮಿಲನ ರಜತ ಮಹೋತ್ಸವದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯರಾದ ಶ್ರೀ ಟಿ ಎಫ್ ನೂರಭಾಷ್ ಅವರು ವಹಿಸಿಕೊಂಡಿದ್ದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಆರ್ ಬಿ ಅಬ್ಬಿಗೇರಿ,ಜಗದೀಶ ಕುಂಬಾರ,ಕೆವಿ ಉಣಚಗೇರಿ,ಅಶೋಕ ಸಂಗನಾಳ,ಅನಿಲ್ ಪೂಜಾರಿ್ಶವಣ್ಣ ಗುಳಗಣ್ಣನವರ,ಎಸ್ ವಿ ಲಮಾಣಿ,ನಿಂಗಪ್ಪ ಕರೆಬಾಲಪ್ಪನವರ,ಹನುಮಂತಪ್ಪ ಕವಲೂರು ಇವರನ್ನು ಸನ್ಮಾನಿಸುವ ಮೂಲಕ ಗುರುವಂದನೆ ಸಲ್ಲಿಸಿದರು.ಇದೇ ವೇಳೆ ಗ್ರಾಮದ ನಿವೃತ್ತ ಶಿಕ್ಷಕರಿಗೆ ಮತ್ತು ಪ್ರತಿಭಾ ಪುರಸ್ಕಾರದ ಮೂಲಕ ಗ್ರಾಮದ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.ಹಳೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕ ಬಳಗವು ಹಳೆಯ ನೆನಪುಗಳೊಂದಿಗೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.ಕಾರ್ಯಕ್ರಮದಲ್ಲಿ ವಲಯ ಮೇಲ್ವಿಚಾರಕ ಖಾದರಭಾಷಾ,ಗವಿಸಿದ್ದಯ್ಯ ಬೆಣಕಲ್ಲಮಠ 2003 4 ನೇ ಸಾಲಿನ ಹಳೆಯ ವಿದ್ಯಾರ್ಥಿಗಳು ಉಪಸ್ಥಿತಿ ಇದ್ದರು ಜಗದೀಶ್ ಸಿಂದೋಗಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.ಸನ್ಮಾನ ಹೊಂದಿದ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹಳೆಯ ನೆನಪುಗಳನ್ನು ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಶರಣಪ್ಪ ಗಟ್ಟೆರಟಾಳ, ಹಳೆಯ ವಿದ್ಯಾರ್ಥಿಗಳಾದ ವಿಜಯಕುಮಾರ ಹೂಗಾರ, ಬಸವರಾಜ ನಿಟ್ಟಾಲಿ, ಎಸ್ ಜಿ ಪಾಟೀಲ, ಮಾಬುಸಾಬ ಬಡಿಗೇರ, ರಮೇಶ್ ಬಟಪ್ಪನಹಳ್ಳಿ, ಮಹೇಶ್ ಹೈದ್ರಿ, ಶಾಂತ ಗೊರಲೆಕೊಪ್ಪ, ಅನ್ನಪೂರ್ಣ ಚಿಕ್ಕನಗೌಡ್ರು, ವಿಜಯಲಕ್ಷ್ಮಿ ಹಿರೇಗೌಡ್ರು, ರೇಖಾ ಹಿರೇಮಠ, ರಮೇಶ್ ಮೈನಹಳ್ಳಿ, ಶಂಕರ್ ಹೂಗಾರ, ಹಾಗೂ ಅನೇಕ ವಿದ್ಯಾರ್ಥಿಗಳು ಗ್ರಾಮದ ಗುರು ಹಿರಿಯರು ಇತರರು ಇದ್ದರು.ವರದಿ ಚೆನ್ನಯ್ಯ ಹಿರೇಮಠ ಕುಕನೂರು