ಶಾಹೀನ ಕಿಡ್ಜ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಲನ

ಹುಕ್ಕೇರಿ 22: ನಗರದ ಪ್ರತಿಷ್ಠಿತ ಶಾಹೀನ ಕಿಡ್ಜ ಆಂಗ್ಲ ಮಾದ್ಯಮ ಶಾಲೆಯ ಸನ್ 2023-24 ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಲನ ಶಾಲೆಯ ಅಧ್ಯಕ್ಷರಾದ ಅಬ್ದುಲಕರೀಮ ಮಕಾನದಾರ ಇವರ ಅಧ್ಯಕ್ಷತೆಯಲ್ಲಿ ಅದ್ಧೂರಿಯಾಗಿ ಜರುಗಿತು. ವೇದಿಕೆಯ ಮೇಲಿನ ಗಣ್ಯರು ಜ್ಯೋತಿ ಬೆಳಗಿಸುವರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 

ಮುಖ್ಯ ಅತಿಥಿಗಳಾಗಿ ಆಗಮಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರತಿಭಾ ಪಾಟೀಲ ಮಾತನಾಡಿ ವಿದ್ಯೆಯಿಲ್ಲದವ ಹದ್ದಿಗಿಂತ ಕಡೆ ಕಾರಣ ಸರಕಾರ ಇಂದು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ ಮಕ್ಕಳಿಗೆ ಹಲವಾರು  ಕೊಡುಗೆ ನೀಡುವದರ ಜೊತೆಗೆ ಉಚಿತ ಶಿಕ್ಷಣವನ್ನು ನೀಡುತ್ತಿದೆ. ಅದಾಗ್ಯೂ ಕೂಡ ಪಾಲಕರು ತಮ್ಮ ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣ ನೀಡಲು ಖಾಸಗಿ ಸಂಸ್ಥೆಗಳತ್ತ ಆಕರ್ಷಿತರಾಗುತ್ತಿದ್ದಾರೆ. ನಗರದಲ್ಲಿ ಹಲವಾರು ಖಾಸಗಿ ಸಂಸ್ಥೆಗಳಿದ್ದು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿವೆ. ಅವುಗಳಲ್ಲಿ ಮರಿಯಾಮ ಎಜ್ಯುಕೇಶನಲ್ ಆಂಡ ವೇಲಫೇರ ಸೊಸೈಟಿಯ ಶಾಹೀನ ಕಿಡ್ಜ ಒಂದಾಗಿದೆ. ಒಳ್ಳೇ ಗುಣ ಮಟ್ಟದ ಶಿಕ್ಷಣ ಜೊತೆಗೆ ಮಕ್ಕಳು ಸಮರ್ಥ ನಾಯಕರಾಗಿ ಹೊರ ಹೊರ ಹೊಮ್ಮಬೇಕು. ಮಕ್ಕಳನ್ನು ಶಾಲೆಗೆ ಕಳುಹಿಸಿದರೆ ಮಾತ್ರ ಪಾಲಕರ ಜವಾಬ್ದಾರಿಯಾಗದೆ ಶಾಲೆಯಿಂದ ಬಂದ ಬಳಿಕ ಅವರು ಮಾಡುತ್ತಿರುವ ಅಭ್ಯಾಸದತ್ತ ಗಮನ ಹರಿಸಬೇಕು. ಶಿಕ್ಷಣ ಸಂಸ್ಥೆಗಳು ಮಾರುಕಟ್ಟೆಗಳಾಗದೆ ಮಕ್ಕಳ ಪ್ರತಿಭೆಗಳನ್ನು ಗುರುತಿಸಿ ಶಿಕ್ಷಣ ನೀಡಲು ಶಿಕ್ಷಕ ವೃಂದಕ್ಕೆ ಕರೆ ನೀಡಿದರು. 

ಇನ್ನೋರ್ವ ಅತಿಥಿಗಳಾದ ಕೇಂದ್ರ ಸಮನ್ವಯ ಅಧಿಕಾರಿ ಎ.ಎಸ್‌.ಪದಮಣ್ಣವರ ಮಾತನಾಡಿ ಮಕ್ಕಳ ಬಗ್ಗೆ ಚಿಂತನೆ ಮಾಡಿದರೆ ಮಾತ್ರ ದೇಶದ ಸಂಪತ್ತು ಮಾಡಲು ಇಂತಹ ವೇದಿಕೆಗಳಿಂದ ಸಾಧ್ಯ ಮಕ್ಕಳು ಶಾಲೆಗೆ ಸರಿಯಾಗಿ ಬರದೇ ಹೋದಲ್ಲಿ ಸಮರ್ಥ ವ್ಯಕ್ತಿ ಆಗಲು ಅಸಾಧ್ಯ. ತಾಯಂದಿರು ಮಕ್ಕಳ ಮುಂದೆ ಟಿ.ವ್ಹಿ ನೋಡದೆ ಮೋಬಾಯಿಲದಿಂದ ಮಕ್ಕಳನ್ನು ದೂರವಿಡಲು ಕಿವಿ ಮಾತು ಹೇಳಿದರು. ಮಕ್ಕಳಲ್ಲಿ ಮಾನವೀಯ ಮೌಲ್ಯ ಹಾಗೂ ಆತ್ಮವಿಸ್ವಾಸ ಮೂಡಿಸಬೇಕು. ಇಂದಿನ ಸ್ಫಧಾತ್ಮಕ ಯುಗದಲ್ಲಿ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಿದರೆ ಅವರೇ ನಿಜವಾದ ಶ್ರೀಮಂತರೆಂದರು. 

ಶಾಲೆಯ ವತಿಯಿಂದ ಪ್ರತಿಭಾ ಪಾಟೀಲ ಹಾಗೂ ಎ.ಎಸ್‌.ಪದ್ಮಣ್ಣವರ ಅವರನ್ನು ಸತ್ಕರಿಸಿ ಗೌರವಿಸಲಾಯಿತು. ಪಾಲಕರು ಶಿಕ್ಷಣ ಸಂಸ್ಥೆ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿದರು. ವೇದಿಕೆಯ ಮೇಲೆ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರತಿಭಾ ಪಾಟೀಲ, ಕೇಂದ್ರ ಸಮನ್ವಯಾಧಿಕಾರಿ ಎ.ಎಸ್‌.ಪದ್ಮಣ್ಣವರ, ನಜೀರದಾದಾ ಮೋಮಿನ, ಸಂಸ್ಥೆಯ ಕಾರ್ಯದರ್ಶಿ ಸಿಕಂದರ ಕಳಾವಂತ, ಸಂಸ್ಥಾಪಕರಾದ ಇಕ್ಬಾಲಅಹ್ಮದ ಮುಲ್ಲಾ, ಉಪಸ್ಥಿತರಿದ್ದರು. ನಂತರ ನಡೆದ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಪಾಲಕರ ಹಾಗೂ ಪ್ರೇಕ್ಷಕರ ಗಮನ ಸೆಳೆದವು.