ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯಾವಳಿಗೆ ಆಯ್ಕೆ

ಗದಗ:  ದಿ. 7 ರಿಂದ 9ರವರಗೆ ಚಿಕ್ಕಮಂಗಳೂರಲ್ಲಿ ನಡೆದ ರಾಜ್ಯ ಮಟ್ಟದ ಶಾಲಾ ಕುಸ್ತಿಯಲ್ಲಿ 17ವಯೋಮಿತಿಯೋಳಗಿನ 43ಕೆಜಿ ವಿಭಾಗದಲ್ಲಿ ಶ್ವೇತಾ ಜಾಧವ ಪ್ರಥಮ ಸ್ಥಾನ ಗಳಿಸಿದ್ದಾರೆ.ಇವಳು ಇದೆ ತಿಂಗಳ 20ರಿಂದ28ರವರಗೆ ದೆಹಲಿಯಲ್ಲಿ ನಡೆಯುವ ರಾಷ್ಟ್ರ ಮಟ್ಟದ ಕುಸ್ತಿಯಲ್ಲಿ ಭಾಗವಯಿಸಲಿದ್ದಾರೆ.

ದಿನಾಂಕ 2ರಿಂದ 4ರವರಗೆ ಡಾವಣಗೇರಿಯಲ್ಲಿ ನಡೆದ ರಾಜ್ಯ ಮಟ್ಟದ ಕಾಲೇಜಕುಸ್ತಿಯ 55ಕೆಜಿ ವಿಭಾಗದಲ್ಲಿ ಸೋನಿಯಾ ಜಾಧವ ಪ್ರಥಮ ಸ್ಥಾನಗಳಿಸಿ ಡಿಸೆಂಬರ್ ನಲ್ಲಿ ಮಹಾರಾಷ್ಟ್ರದ ಕೋಲ್ಹಾಪುರದಲ್ಲಿ ನಡೆಯುವ ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಕನರ್ಾಟಕದಿಂದ ಪ್ರತಿನಿಧಿಸಲಿದ್ದಾರೆ.

ದಿನಾಂಕ 8 ರಿಂದ 11 ರವರಗೆ ನಡೆದ ತಮಿಳುನಾಡಿನ ನಂಕ್ಕಳನಲ್ಲಿ ನಡೆದ ಸೌತಝೋನ ಸಿನಿಯರ್ ಚಾಂಪಿಯನ್ ಶಿಪ್ನಲ್ಲಿ ಪ್ರಶಾಂತ ಬೇಲೇರಿ, ಪ್ರೇಮಾ ಹುಚ್ಚಣ್ಣವರ, ಬಶೀರಾ ವಕಾರದ, ಶಾಹೀದಾಬೇಗಂ ಬಳಿಗಾರ, ಶ್ವೇತಾ ಬೆಳಗಟ್ಟಿ, ಇವರು ಬಂಗಾರದ ಪದಕ ಗಳಿಸುವದರೊಂದಿಗೆ ಕರ್ನಾಟಕ ರಾಜ್ಯ ಚಾಂಪಿಯನ್ ತನ್ನದಾಗಿಸಿಕೋಡಿದೆ. ಕುಸ್ತಿಪಟುಗಳು ದಿ. 29ರಿಂದ ಡಿಸೆಂಬರ್ 1 ರವರಗೆ ಪಂಜಾಬದ ಜಲಂದರ್ ನಲ್ಲಿ ನಡೆಯುವ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ. ಎಲ್ಲಾ ಕುಸ್ತಿಪಟುಗಳು ಜಿಲ್ಲಾ ಕ್ರೀಡಾಂಗಣದ ಕುಸ್ತಿ ಮನೆಯಲ್ಲಿ ತರಬೇತಿ ಪಡೆಯುತಿದ್ದಾರೆ. ಕುಸ್ತಿಪಟುಗಳು ಜಿಲ್ಲೆ ಹಾಗೂ ರಾಜ್ಯದ ಕೀರ್ತಿ ತಂದಿರುವ ಕ್ರೀಡಾಪಟುಗಳಿಗೆ ಗದಗ ಜಿ.ಪಂ.ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಆನಂದ.ಕೆ. ಐ.ಪಿ.ಎಸ್, ಗದಗ ಜಿ.ಪಂ. ಉಪಕಾರ್ಯದರ್ಶಿ ಹೇಲ್ಮೇಶ್ ಹಾಗೂ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಬಿ.ವಿಶ್ವನಾಥ ತರಬೇತುದಾರರಾದ ಶರಣಗೌಡ ಬೇಲೇರಿ, ಗಿರೀಶ ಬಳೂರ ಅಭಿನಂದಿಸಿ ಶುಭ ಕೊರಿದ್ದಾರೆ.