ಸಾತಪ್ಪ ಟೋಪಣ್ಣವರ ಅವರ ಹೋರಾಟ ಅವಿಸ್ಮರಣೀಯ - ಆನಂದ ಪಾಟೀಲ
Satappa Topannavar's struggle is unforgettable - Anand Patil
ಸಾತಪ್ಪ ಟೋಪಣ್ಣವರ ಅವರ ಹೋರಾಟ ಅವಿಸ್ಮರಣೀಯ - ಆನಂದ ಪಾಟೀಲ
ಯರಗಟ್ಟಿ 10: ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಶಿವಾಪುರದ ಸಾತಪ್ಪ ಟೋಪಣ್ಣವರ ಅವರ ಹೋರಾಟ ಅವಿಸ್ಮರಣೀಯವಾದುದು ಎಂದು ಧಾರವಾಡದ ಹಿರಿಯ ಮಕ್ಕಳ ಸಾಹಿತಿ ಆನಂದ ಪಾಟೀಲ ಅವರು ಹೇಳಿದರು.ಸರಕಾರಿ ಪ್ರೌಢಶಾಲೆಯಲ್ಲಿ ಡಾ. ರಾಜಶೇಖರ ಬಿರಾದಾರ ಅವರು ರಚಿಸಿದ 'ಸಾತಪ್ಪ ಟೋಪಣ್ಣವರ' ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ಸ್ಥಳೀಯ ಹೋರಾಟಗಾರರ ಚರಿತ್ರೆಯನ್ನು ಕೆದಕಿ ಮರುಸೃಷ್ಟಿಸುವುದು ಅಗತ್ಯವಾಗಿದೆ ಎಂದರು.ಪುಸ್ತಕ ಪ್ರಕಟಿಸಿದ ಅಭಿನವ ಪ್ರಕಾಶನದ ರವಿಕುಮಾರ ಅವರು ಮಾತನಾಡಿ, ಮಕ್ಕಳು ಬಾಲ್ಯದಿಂದಲೇ ಪಠ್ಯದೊಂದಿಗೆ ನಮ್ಮ ಸುತ್ತಲಿನ ಹೋರಾಟಗಾರರ ಚರಿತ್ರೆಯನ್ನು ಓದಬೇಕು ಎಂದು ಹೇಳಿದರು.ಲೇಖಕ ಡಾ. ರಾಜಶೇಖರ ಬಿರಾದಾರ ಅವರು ಮಾತನಾಡಿ, ಪುಸ್ತಕ ರೂಪುಗೊಂಡ ಬಗೆಯನ್ನು ವಿವರಿಸಿದರು.ಗ್ರಾಮ ಪಂಚಾಯತ ಅಧ್ಯಕ್ಷರಾದ ತವನಪ್ಪ ಟೋಪಣ್ಣವರ, ಪ್ರಗತಿಪರ ರೈತರಾದ ಮಹಾಂತೇಶ ತೋಟಗಿ, ಶಿವಲಿಂಗಯ್ಯ ಮಠಪತಿಯವರು ಮಾತನಾಡಿದರು. ಶಾಲೆಯ ಮುಖ್ಯೋಪಾಧ್ಯಾಯರಾದ ವಿಜಯ ಪಡಿಯವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗ್ರಾಮದ ಪಾಯಪ್ಪ ಟೋಪಣ್ಣವರ ಸೇರಿದಂತೆ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಜೋಡಿ ಕೊಲೆ : ಗ್ರಾಮದಲ್ಲಿ ತ್ವೇಷಮಯ ವಾತಾವರಣ
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ 