ಮಾಂಜರಿವಾಡಿಯಲ್ಲಿ ಸಂತ ನಾಮದೇವ : ಸಾವತಾ ಮಹಾರಾಜರ ಸಮಾಧಿ ಉತ್ಸವ ಭಕ್ತಿಭಾವದಿಂದ; ರಿಂಗಣಕ್ಕೆ ಮೆರುಗು
Saint Namdev at Manjariwadi: Savata Maharaj's Samadhi festival celebrated with devotion; added splen
ಲೋಕದರ್ಶನ ವರದಿ
ಮಾಂಜರಿ 12 : ಜಯ ಹನುಮಾನ್ ಸಾರ್ವಜನಿಕ ಯುವಕ ಮಂಡಳದ ಮತ್ತು ಗ್ರಾಮಸ್ಥರ ಸಂಯೋಗದಿಂದ ಚಿಕ್ಕೋಡಿ ತಾಲೂಕಿನ ಮಾಂತ್ರಿವಾಡಿ ಗ್ರಾಮದಲ್ಲಿ ಸಂತ ನಾಮದೇವ ಮಹಾರಾಜ ಹಾಗೂ ಸಂತ ಸಾವತಾ ಮಹಾರಾಜರ ಸಮಾಧಿ ಉತ್ಸವವನ್ನು 17ನೇ ವರ್ಷವೂ ಭಕ್ತಿಭಾವ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ಉತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಭಜನೆ, ಕೀರ್ತನೆ, ಪ್ರವಚನ, ಪಾಲಕಿ ಮೆರವಣಿಗೆ, ರಿಂಗಣ ಹಾಗೂ ಮಹಾಪ್ರಸಾದದಿಂದ ಮಾಂಜರಿವಾಡಿ ಗ್ರಾಮವು ಭಕ್ತಿಮಯ ವಾತಾವರಣದಿಂದ ಕಂಗೊಳಿಸಿತು.
ಉತ್ಸವದ ಅವಧಿಯಲ್ಲಿ ಪ್ರತಿದಿನ ಬೆಳಗಿನ 4 ಗಂಟೆಗೆ ಕಾಕಡ ಆರತಿ, ಸಂಜೆ 4 ಗಂಟೆಗೆ ದೀಪಪೂಜೆ, ಸಂಜೆ 4.30ರಿಂದ 6.30ರವರೆಗೆ ಪ್ರವಚನ ಹಾಗೂ ರಾತ್ರಿ 7ರಿಂದ 9ರವರೆಗೆ ಕೀರ್ತನೆ ಆಯೋಜಿಸಲಾಗಿತ್ತು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಧಾರ್ಮಿಕ ಕಾರ್ಯಕ್ರಮಗಳ ಸದುಪಯೋಗ ಪಡೆದರು. ಮಂಗಳವಾರ ಶ್ರೀಮಂತ ಉರ್ಜಿತಸಿಂಹರಾಜೆ ಶಿತೋಳೆ ಸರ್ಕಾರ ಅವರ ಹಸ್ತದಿಂದ ವಿಧಿವತ್ತಾಗಿ ವೀಣಾಪೂಜೆ ನೆರವೇರಿಸುವ ಮೂಲಕ ಉತ್ಸವಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಶಿಪ್ಪೂರಿನ ಹ.ಭ.ಪ. ಅರ್ಜುನ ಮಹಾರಾಜ ಜಾಧವ ಅವರ ಕೀರ್ತನೆ ನಡೆಯಿತು. ಸಂತ ಪರಂಪರೆಯ ಮಹತ್ವವನ್ನು ತಿಳಿಸಿದ ಅವರು ಸಂತ ನಾಮದೇವ ಮಹಾರಾಜ ಹಾಗೂ ಸಂತ ಸಾವತಾ ಮಹಾರಾಜರ ಕಾರ್ಯವನ್ನು ಸ್ಮರಿಸಿದರು.
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ
ಇಂಗ್ಲೆಂಡ್ನ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ 