ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ: ಎ.ಬಿ.ಸಾಲಕ್ಕಿ ಪ್ರೌಢಶಾಲೆ ಬಾಲೆಯರೇ ಟಾಪರ್ಸ
ದೇವರಹಿಪ್ಪರಗಿ 05: ಪ್ರಸಕ್ತ 2024-25 ನೇ ಶೈಕ್ಷಣಿಕ ವರ್ಷದ ಎಸ್. ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆ-1 ಫಲಿತಾಂಶ ಪ್ರಕಟಗೊಂಡಿದ್ದು ಪಟ್ಟಣದ ಬಿ.ಎಲ್.ಡಿ.ಈ ಸಂಸ್ಥೆಯ ಎ.ಬಿ.ಸಾಲಕ್ಕಿ ಪ್ರೌಢಶಾಲೆಗೆ ಅತ್ಯುತ್ತಮ ಫಲಿತಾಂಶ ಲಭಿಸಿದ್ದು ಬಾಲಕಿಯರೇ ಟಾಪರ್ ಆಗಿ ಮಿಂಚಿದ್ದಾರೆ.ಪರೀಕ್ಷೆಯಲ್ಲಿ ಗಮನಾರ್ಹ ಫಲಿತಾಂಶ ಪಡೆಯುವದರೊಂದಿಗೆ ಬಾಲಕಿಯರು ಮೇಲುಗೈ ಸಾಧಿಸಿ ಮಿನುಗಿದ್ದು ಇಲ್ಲಿ ವಿಶೇಷ, ಭಾಗ್ಯಶ್ರೀ ಪ್ಯಾಟಿ (604) ವಿಜ್ಞಾನ ವಿಷಯದಲ್ಲಿ 100ಕ್ಕೆ 100 ಪಡೆಯುವ ಮೂಲಕ ಶಾಲೆಗೆ ಟಾಪರ್ ಆಗಿ ಮೊದಲ ಸ್ಥಾನ ಪಡೆದಿದ್ದಾಳೆ. ಸಾವಿತ್ರಿ ಬಾಗೇವಾಡಿ (595), ಕನ್ನಡ 125 ಕ್ಕೆ 125, ಅಂಕದೊಂದಿಗೆ ಪಾಸಾಗಿ ದ್ವೀತಿಯ ಸ್ಥಾನ ಪಡೆದರೆ, ಸುಶ್ಮಿತಾ ಸೌದಿ (548) ಕನ್ನಡ 125ಕ್ಕೆ 125 ಹಾಗೂ ಸ. ವಿಜ್ಞಾನ 100ಕ್ಕೆ 100 ಅಂಕಗಳಿಸುವ ಮೂಲಕ ತೃತೀಯ ಸ್ಥಾನ ತಮ್ಮದಾಗಿಸಿಕೊಂಡಿದ್ದಾಳೆ. ನಂತರ ಸ್ಥಾನದಲ್ಲಿ ಶೀಲಾ ಚವ್ಹಾಣ (546), ಅಲ್ಫಿಯಾ ಮುಜಾವಾರ (545), ತಮನ್ನ ಪಿಂಜಾರ (529), ಭಾಗ್ಯಶ್ರೀ ಮಧಬಾವಿ (528), ಸಾನಿಯಾ ಬಾಗವಾನ (514), ಛಾಯ ಬೂದಿಹಾಳ (502), ಆಶಾಭಿ ಮುಲ್ಲಾ ಹಿಂದಿ 100ಕ್ಕೆ 100, ಪಡೆದು ಸಾಧನೆ ಮೆರೆದಿದ್ದಾರೆ. ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಯೊಂದಿಗೆ ತೇರ್ಗಡೆಯಾಗಿ ಶಾಲೆಗೆ ಸಂಸ್ಥೆಗೆ ಕೀತಿ ತಂದಿರುವ ಸಾಧಕ ಮಕ್ಕಳಿಗೆ ಸಂಸ್ಥೆಯ ಅಧ್ಯಕ್ಷರು, ಪದಾಧಿಕಾರಿಗಳು, ಬೋಧಕ ಬೋಧಕೇತರ ಸಿಬ್ಬಂದಿ ವರ್ಗ ಅಭಿನಂದಿಸಿ ಶುಭ ಹಾರೈಸಿದ್ದಾರೆ.
2024-25 ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಎ.ಬಿ.ಸಾಲಕ್ಕಿ ಪ್ರೌಢಶಾಲೆಯ ಮಕ್ಕಳು ಗಣನೀಯವಾಗಿ ಸಾಧನೆ ತೋರಿದ್ದಾರೆ. ಅದರಲ್ಲೂ ಬಾಲೆಯರು ಅಪ್ರತಿಮ ಸಾಧನೆಗೈದು ಉತ್ತೀರ್ಣರಾಗಿ ಮೇಲುಗೈ ಸಾಧಿಸಿರುವುದು ಸಂತಸ ತಂದಿದೆ. ಶ್ರದ್ಧೆಯಿಂದ ಓದಿ ಅಭ್ಯಾಸ ಮಾಡಿದರೆ ಖಂಡಿತ ಅದಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ ಎಂಬುದಕ್ಕೆ ಇಲ್ಲಿ ಬಾಲೆಯರು ಟಾಪರ್ ಆಗಿದ್ದು ಸಾಕ್ಷಿ. ಆ ನಿಟ್ಟಿನಲ್ಲಿ ಬಾಲಕರು ಸಹ ಅಧ್ಯಯನದಲ್ಲಿ ನಿರಂತರ ನಿರತರಾಗಬೇಕು. ಇದು ನೇರ ವೆಬ್ ಸೈಟ್ ವ್ಯವಸ್ಥೆಯ ಪರೀಕ್ಷಾ ಕಾಲ ಎಂಬುದನ್ನು ಮನಗಾಣಬೇಕು. ಜಿಲ್ಲೆಯಲ್ಲಿ ನಕಲು ಮುಕ್ತ ಪರೀಕ್ಷೆ ಸಾಗಿದೆ. ಪರೀಕ್ಷಾ ವಿದ್ಯಮಾನಗಳನ್ನು ಅರಿತು ಸಕಲ ಸಿದ್ದತೆಯೊಂದಿಗೆ ಆತ್ಮವಿಶ್ವಾಸದಿಂದ ಪರೀಕ್ಷಾ ಅಕ್ಷರ ಬರವಣಿಗೆ ಹಬ್ಬದಲ್ಲಿ ಮಿಂದ ಮಕ್ಕಳು ಅಂಕಗಳ ಫಲವಂತಿಕೆಯ ಫಲಶೃತಿ ಕಂಡಿದ್ದಾರೆ.
ವ್ಹಿ.ಎಂ.ಪಾಟೀಲ
ಮುಖ್ಯ ಶಿಕ್ಷಕರು ಎ.ಬಿ.ಸಾಲಕ್ಕಿ ಪ್ರೌಢಶಾಲೆ ದೇವರಹಿಪ್ಪರಗಿ.