ಎಸ್ ಎಂ ಎನ್ ಶಿವರಾಜ್‌ರವರ ಜನ್ಮದಿನ: ವಿದ್ಯಾರ್ಥಿಗಳಿಗೆ ನೋಟು ಪುಸ್ತಕ, ಪೆನ್ನುಗಳು ವಿತರಣೆ
SMN Shivaraj's birthday: Note books, pens distributed to students
ಲೋಕದರ್ಶನ ವರದಿ
ಹೂವಿನ ಹಡಗಲಿ 28: ಪಟ್ಟಣದ ಪ್ರತಿಷ್ಠಿತ ಎಸ್ ಎಂ ಎನ್ ಜ್ಯೂಯಿಲರ್ಸ್ ಮಾಲೀಕರು ಸಮಾಜ ಸುಧಾರಕರು ಎಸ್ ಎಂ ಎನ್ ಶಿವರಾಜ್ ರವರ ಜನ್ಮದಿನಾಚರಣೆಯನ್ನು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವ ಸನ್ಮಾನ ನೆರೆವೇರಿಸುವುದರೊಂದಿಗೆ ಆಚರಿಸಿಕೊಂಡರು.
ಬೆಳಿಗ್ಗೆ ಜ್ಞಾನಗಂಗಾ ಪ್ರೌಢಶಾಲೆಯಲ್ಲಿ ಜ್ಞಾನ ಬೆಳಕು ಅಕಾಡೆಮಿ ಆಯೋಜಿಸಿರುವ ಬೇಸಿಗೆ ಶೈಕ್ಷಣಿಕ ಶಿಬಿರದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳಿಗೆ ನೋಟ್ ಪುಸ್ತಕ ಲೇಖನಿ ಉಡುಗೊರೆಯಾಗಿ ನೀಡಿದರು.ಪತ್ರಕರ್ತ ಗೋಣಿಸ್ವಾಮಿ ಮಾತನಾಡಿ ಎಸ್ ಎಂ ಎನ್ ಫೌಂಡೇಶನ್ ವತಿಯಿಂದ ಅನೇಕ ಜನಪರ ಸೇವೆ ಸಲ್ಲಿಸುತ್ತಿರುವ ಶಿವರಾಜ್ ರವರ ಕಾರ್ಯ ವೈಖರಿ ಶ್ಲಾಘಿಸಿದರು. ಆಡಂಬರ ಇಲ್ಲದ ಸರಳ ರೀತಿಯಲ್ಲಿ ಮಕ್ಕಳೆದುರು ಜನ್ಮ ದಿನಾಚರಣೆ ಆಚರಿಸುತ್ತಿರುವುದು ಸ್ತುತ್ಯಾರ್ಹ ಎಂದು ತಿಳಿಸಿದರು. ಸಂಜೆ ಪಟ್ಟಣದ ಗವಿಮಠದದಲ್ಲಿ 2025-26 ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಪಟ್ಟಣದ ಆಯ್ದ ಪ್ರತಿಭಾವಂತ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ತಮ್ಮ ಟ್ರಸ್ಟ್ ವತಿಯಿಂದ ಗೌರವ ಸನ್ಮಾನ ನೆರೆವೇರಿಸಿದರು. ಗವಿಮಠದ ಡಾ ಹಿರಿಶಾಂತವೀರ ಮಹಾಸ್ವಾಮಿಗಳು ಎಸ್ ಎಂ ಎನ್ ಫೌಂಡೇಶನ್ ಜನಮುಖಿ ಕೆಲಸಗಳನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಧಾರ್ಮಿಕ ಸೇವಾಕಾರ್ಯ ನಡೆಸುತ್ತಿರುವ ಕೆಲಸ ಅನುಕರಣೀಯ ಎಂದರು.
ಮುಖಂಡರಾದ ಪುನೀತ್ ದೊಡ್ಡಮನಿ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ? 