ಕತ್ತಿ ಸಹೋದರ ಹಿಟ್ಲರ್‌ರ ಆಡಳಿತಕ್ಕೆ ಬೇಸತ್ತು ರಾಜೀನಾಮೆ: ನಿರ್ದೇಶಕರ ಆರೋಪ

Resigns after getting tired of Katti brother Hitler's rule: Director's allegations

ಎಂ.ಬಿ. ಘಸ್ತಿ 

ಸಂಕೇಶ್ವರ 10: ದಿ. ಹುಕ್ಕೇರಿ ತಾಲೂಕಾ ಗ್ರಾಮೀಣ ವಿದ್ಯುಚ್ಛಕ್ತಿ ಸಹಕಾರಿ ಸಂಘವು ಕಳೆದ 30 ವರ್ಷಗಳಿಂದ ಕತ್ತಿ ಸಹೋದರರ ಹಿಟ್ಲರ್‌ರ ಏಕಪಕ್ಷೀಯ ಆಡಳಿತಕ್ಕೆ ಬೇಸತ್ತು ಕತ್ತಿ ಸಹೋದರರಿಗೆ ಗುಡ್ ಬೈ ಹೇಳಿದ್ದಾರೆ. 

ಈ ವಿಷಯವನ್ನು ಇಂದು ರಹಸ್ಯಮಯ ಸ್ಥಳದಲ್ಲಿ ಕರೆದ ಪತ್ರಿಕಾ ಗೋಷ್ಟಿಯಲ್ಲಿ ಕಳೆದ 30 ವರ್ಷಗಳಿಂದ ಸಂಚಾಲಕ ಹಾಗೂ ಚೇರಮನ್ ರೈತರ ಕೆಲಸಗಳನ್ನು ತಾವು  ಮಾಡುತ್ತಿದ್ದೇವೆಂದು ಶಶಿರಾಜ ಪಾಟೀಲ ಮತ್ತು ಹುಕ್ಕೇರಿಯ ಜಯಗೌಡಾ ಪಾಟೀಲ, ರವೀಂದ್ರ ಹಿಡಕಲ್ ಇವರು ನೇರವಾಗಿ ಆರೋಪಿಸಿದಲ್ಲದೇ ಎಷ್ಟೋ ಬಾರಿ ರೈತರ ಕೆಲಸಗಳನ್ನು ಹೇಳುತ್ತಾ ಬಂದಿದ್ದರು. ನಿರ್ದೇಶಕರ ಮಾತಿಗೆ ಕವಡೆ ಕಿಮ್ಮತ್ತಿನ ಬೆಲೆಯಿಲ್ಲ ಮತ್ತು ತೋಟದ ಮನೆಗಳಿಗೆ ಸರ್ಕಾರದ ನಿರಂತರ ಜ್ಯೋತಿ ಯೋಜನೆಯಡಿಯಲ್ಲಿ ಗ್ರಾಮೀಣದ ತೋಟಪಟ್ಟಿ ರೈತರಿಗೆ 24 ಗಂಟೆ ವಿದ್ಯುತ ಕಲ್ಪಿಸಿಕೊಡಬೇಕೆಂದು ಹೇಳಿದರೂ ಸಹ ಕತ್ತಿಯವರು ಕ್ಯಾರೆ ಎನ್ನಲಿಲ್ಲ. ಇದಕ್ಕೆಲ್ಲ ಬೇಸತ್ತು ಕರ್ನಾಟಕ ಸರ್ಕಾರದ ಲೋಕೊಪಯೋಗಿ ಇಲಾಖೆ ಸಚಿವರ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹಾಗೂ ರೈತರ ಹಿತಾಚಿಂತಕ ಚಿಕ್ಕೋಡಿಯ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಮತ್ತು ಅರಭಾಂವಿ ಕ್ಷೇತ್ರದ ಸಹಕಾರಿ ರಂಗದ ಪ್ರಭುತ್ವ ಹೊಂದಿದ ಬಾಲಚಂದ್ರ ಜಾರಕಿಹೊಳಿ ಈ ಮೂವರು ಪ್ರಭಾವ ವ್ಯಕ್ತಿಗಳಿಗೆ ತಾವೆಲ್ಲ ಭೆಟ್ಟಿ ನೀಡಿ ಈ ಸಂಘದಿಂದ ಅನ್ಯಾಯವಾಗುತ್ತಿರುವ ಬಗ್ಗೆ ಎಲ್ಲ ಮಾಹಿತಿಯನ್ನು ಅವರಿಗೆ ನೀಡಿದ ನಂತರ ರೈತರಿಗೆ 24 ಗಂಟೆ ವಿದ್ಯುತ ಮತ್ತು ಸುಟ್ಟ ಟಿಸಿಗಳು ವಿದ್ಯುತ್ ಕಂಬ ಮುರಿದರೆ ರೈತರ ಕಡೆಯಿಂದ ಬಹಳಷ್ಟು ಹಣ ವಸೂಲಿ ಮಾಡಲಾಗುತ್ತಿತ್ತು. ಈ ಎಲ್ಲ ಅಂಶಗಳನ್ನು ನಾವು 11 ಜನ ನಿರ್ದೇಶಕರು ಹುಕ್ಕೇರಿ ತಾಲೂಕಿನ ರೈತಾಪಿ ವರ್ಗದವರಿಗೆ ಯಾವುದೇ ರೀತಿ ಅನಾನುಕೂಲತೆ ಆಗದಂತೆ ನೋಡಿಕೊಳ್ಳುವ ಮತ್ತು ತಕ್ಷಣ ರೈತರ ಕೆಲಸಗಳನ್ನು ಮಾಡುವುದಾಗಿ ಪತ್ರಿಕಾ ಗೋಷ್ಟಿಯಲ್ಲಿ ಮತ್ತೊಮ್ಮೆ ಈ ವಿಷಯವನ್ನು ಪುನರುಚ್ಛಿಸಿದರು. 

ಸರ್ಕಾರದವರು ಮೇ 23ರಂದು ಸಂಘದ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆಯ ದಿನಾಂಕವನ್ನು ನಿಗದಿಪಡಿಸಿದ್ದಾರೆ. ಕೆಲವು ಪಟ್ಟಬದ್ಧ ಹಿತಾಸಕ್ತಿಗಳು ಕೆಲವು ಜನ ಅಪಪ್ರಚಾರ ಮಾಡುತ್ತಿದ್ದವರನ್ನು ನಂಬಬಾರದೆಂದು ಪತ್ರಿಕಾ ಗೋಷ್ಟಿಯಲ್ಲಿ ತಿಳಿಸಿದರು, ಪತ್ರಿಕಾ ಗೋಷ್ಟಿಯಲ್ಲಿ 11 ಜನ ನಿರ್ದೇಶಕರಾದ ವ್ಹಿ.ಬಿ. ರೇಡೆಕರ, ಜಯಗೌಡಾ ಪಾಟೀಲ, ಶಶಿರಾಜ ಪಾಟೀಲ, ರವಿಂದ್ರ ಹಿಡಕಲ್, ಬಸಗೌಡಾ ಮಗೆನ್ನವರ, ಸೋಮಲಿಂಗ ಪಾಟೀಲ, ಅಶೋಕ ಚಂದಪ್ಪಗೋಳ, ಕುನಾಲ ಪಾಟೀಲ, ಈರಾ​‍್ಪ ಬಂಜಿರಾಮ ಇವರೆಲ್ಲರೂ ಪತ್ರಿಕಾ ಗೋಷ್ಟಿಯಲ್ಲಿ ಹಾಜರರಿದ್ದರು.