ಮನುಕುಲದ ಸಮಾನತೆಗೆ ರೇಣುಕಾರ್ಯರ ಮಹೋನ್ನತ ಕೊಡುಗೆ: ಹೆಬ್ಬಾಳಶ್ರೀ

ಗಂಗಾವತಿ, ಮಾ. 29:ವೀರಶೈವ ಧರ್ಮ ಸಂಸ್ಥಾಪಕರಾದ ಜಗದ್ಗುರು ರೇಣುಕಾಚಾರ್ಯರು ಮನುಕುಲದ ಸಮಾತೆಗೆ ಮಹೋನ್ನತ ಕೊಡುಗೆ ನೀಡಿದ್ದಾರೆ ಎಂದು ಹೆಬ್ಬಾಳ ಮಠದ ನಾಗಭೂಷಣ ಶಿವಾಚಾರ್ಯರು ತಿಳಿಸಿದರು. 

ಆದಿ  ರೇಣುಕಾಚಾರ್ಯ ಸೇವಾ ಸಮಿತಿ ನೇತೃತ್ವದಲ್ಲಿ ಗುರುವಾರ ನಗರದ ಸಿಬಿಎಸ್ ಕಲ್ಯಾಣ ಮಂಟಪದಲ್ಲಿ ಏರಿ​‍್ಡಸಿದ್ದ ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿ ಗ್ರಂಥದಲ್ಲಿ ಸಮಾನತೆ ಬೋಧಿಸಿದ್ದಾರೆ. ಅವರು ಬೋಧಿಸಿದ ತತ್ವಗಳು, ವಿಚಾರಧಾರೆಗಳು ಇಂದಿಗೂ ಪ್ರಚಲಿತವಾಗಿವೆ ಎಂದರು. ಮಾನವ ಕುಲಕ್ಕೆ ಧರ್ಮ ಎನ್ನುವುದು ಮುಖ್ಯವಾದುದು. ಸರ್ವರೂ ಧರ್ಮದಿಂದ ನಡೆದುಕೊಂಡಾಗಲೇ ಮಾನವರಾಗಿ ಜನ್ಮ ತಾಳಿದ್ದಕ್ಕೆ ಸಾರ್ಥಕ, ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಪರಿಕಲ್ಪನೆಗಳಿಗೆ ರೇಣುಕರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ನಡೆಯೋಣ ಎಂದರು. ಗಂಗಾವತಿ ಕಲ್ಮಠ ಡಾ.ಕೊಟ್ಟೂರು ಮಹಾಸ್ವಾಮಿಗಳು ಮಾತನಾಡಿ, ರೇಣುಕಾಚಾರ್ಯ ಅವರ ಬೋಧನೆಯ ಸಾರವನ್ನು ಶಿವಯೋಗಿ ಶಿವಾಚಾರ್ಯರು ಸಿದ್ಧಾಂತ ಶಿಖಾಮಣಿ ಕೃತಿಯಲ್ಲಿ ಸಂಪಾದಿಸಿದ್ದಾರೆ. ಕಾಯಕವೇ ಕೈಲಾಸ ಎಂಬ ತತ್ವ ಈ ಕೃತಿಯಲ್ಲಿ ಅಡಕವಾಗಿದೆ ಎಂದರು.ಆದಿ  ರೇಣುಕಾಚಾರ್ಯ ಸೇವಾ ಸಮಿತಿ ಅಧ್ಯಕ್ಷ ಹಾಗೂ ತುಂಗಭದ್ರಾ ಕಾಡಾ ಮಾಜಿ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ ಮಾತನಾಡಿ, ಸಂವಿಧಾನದ ಹಕ್ಕುಗಳನ್ನು ಪಡೆಯುವಲ್ಲಿ ವಂಚಿತರಾದ ಬೇಡ ಜಂಗಮರು ಶೈಕ್ಷಣಿಕ, ಆರ್ಥಿಕ, ರಾಜಕೀಯ, ಸಾಮಾಜಿಕವಾಗಿ ಬೆಳೆಯಲು ಮತ್ತು ಸಮಾಜದ ಮಕ್ಕಳಿಗೆ ಸರ್ಕಾರಿ ಉದ್ಯೋಗ ಸೇರಿದಂತೆ ಇತರ ಕ್ಷೇತ್ರಗಳಲ್ಲಿ ಸಂವಿಧಾನತ್ಮಕ ಮೀಸಲಾತಿ ಪಡೆಯಲು ಸಾಂಘಿಕ ಹೋರಾಟ ಅನೀವಾರ್ಯವಾಗಿದೆ ಎಂದರು. 

ಇದಕ್ಕೂ ಮುಂಚೆ ನಗರದ ಕಲ್ಲಠದಿಂದ ಬಸವಣ್ಣ, ಗಾಂಧಿ ವೃತ್ತ ಸೇರಿ ವಿವಿಧ ಮಾರ್ಗಗಳಮೂಲಕ ಸಿಬಿಎಸ್ ಕಲ್ಯಾಣ ಮಂಟಪದವರೆಗೆ 108 ಕುಂಭ, ಕಳಸ ಹಾಗೂ ಸಕಲ ವಾದ್ಯ-ಮೇಳಗಳೊಂದಿಗೆ ರೇಣುಕಾಚಾರ್ಯ ಕಂಚಿನ ಪುತ್ಥಳಿ ಅದ್ದೂರಿ ಮೆರವಣಿಗೆ ನಡೆಯಿತು. ಶ್ರೀಕಲ್ಮಠದ ಡಾ. ಕೊಟ್ಟೂರು ಮಹಾದ್ವಾಮಿಗಳು ಚಾಲನೆ ನೀಡಿದರು.ವಿವಿಧ ಮಠಾಧೀಶರು, ಜಿ.ಪಂ. ಮಾಜಿ ಸದಸ್ಯ ಸಿದ್ದರಾಮಯ್ಯ ಸ್ವಾಮಿ, ನಗರಸಭೆ ಸದಸ್ಯರಾದ ಮನೋಹಸ್ವಾಮಿ ಹಿರೇಮಠ, ವಾಸುದೇವರಾವ್ ನವಲಿ, ಲಯನ್ಸ್‌ ಕ್ಲಬ್ ಅಧ್ಯಕ್ಷ ಡಾ. ಅಮರೇಶ ಪಾಟೀಲ್, ಸಮಾಜದ ಮುಖಂಡರಾದ ಶರಭಯ್ಯಾಸ್ವಾಮಿ ಹಿರೇಮಠ, ಮಹಾತೇಶ ಶಾಸ್ತ್ರಿಮಠ, ಬಸವರಾಜ ಮುದೇನೂರುಮಠ, ಶ್ರೀಕಾಂತ್, ಸಾಗರ್, ರೋಹಿತ್, ವೀರಮಹೇಶ್ವರ ಜಂಗಮ ಸಮಾಜ ಅಧ್ಯಕ್ಷ ಶಂಕ್ರಯ್ಯಸ್ವಾಮಿ ಹಿರೇಮಠ,ಉಪಾಧ್ಯಕ್ಷ ಎಸ್‌.ಬಿ.ಹಿರೇಮಠ, ಕಾರ್ಯದರ್ಶಿ ಆದಯ್ಯ ಸ್ವಾಮಿ, ಜಂಗಮ ಸಮಾಜದಮುಖಂಡರಾದ ಬಸವರಾಜ ಮಳೇಮಠ, ಉಮಾ ಮಹೇಶ್ವರಸ್ವಾಮಿ, ಎಂ.ಸಿ. ಹಿರೇಮಠ, ವಾಗೀಶಸ್ವಾಮಿ, ವಿರುಪಾಕಯ್ಯಸ್ವಾಮಿ, ಶಾಂತಮಲ್ಲಯ್ಯ, ಮಹಾಂತೇಶ ಸ್ವಾಮಿ, ಪ್ರತಾಪ್ ಶಾಸ್ತ್ರಿ, ನಾಗರಾಜ ಸ್ವಾಮಿ, ಹೆಚ್‌.ಎಂ.ಮಲ್ಲಯ್ಯ, ಸಂಗಯ್ಯಸ್ವಾಮಿ ಸಂಶಿಮಠ, ಸಂಗಮ್ಮ ಮದ್ಯಾನಮಠ, ಸಹನಾ ಹಿರೇಮಠ, ಲಕ್ಷ್ಮೀ ಪಾಟೀಲ್, ಲಕ್ಷ್ಮೀದೇವಿ, ಲಿಂಗಮ್ಮ ಹಿರೇಮಠ, ಪದ್ಮಾ ಹಿರೇಮಠ ಹಾಗೂ ವಿವಿಧ ಸಮಾಜದ ಮುಖಂಡರಾದ ಸುರಾನಾ ಸೇಶ್, ಜೋಗದ ನಾರಾಯಣಪ್ಪ ಜೋಗದ ಹನುಮಂತಪ್ಪ ನಾಯಕ, ನಾಗಲಿಂಗಪ್ಪ ಪತ್ತಾರ್, ನಾರಾಯಣಪ್ಪ, ಮಂಜುನಾಥ ಕುಂಬಾರ್ ಸೇರಿದಂತೆ ಇತರರು ಇದ್ದರು