ಸಮಾರೋಪ ಸಮಾರಂಭದಲ್ಲಿ ಕುಲಸಚಿವ ಪ್ರೊ.ವಿ ಲೋಕೇಶ್ ಅಭಿಪ್ರಾಯ

ಸಮಾರೋಪ ಸಮಾರಂಭದಲ್ಲಿ ಕುಲಸಚಿವ ಪ್ರೊ.ವಿ ಲೋಕೇಶ್ ಅಭಿಪ್ರಾಯ  Remarks by Registrar Prof. V. Lokesh at the closing ceremony

ಬಳ್ಳಾರಿ 10: ಪ್ರಸ್ತುತ ದಿನಮಾನಗಳಲ್ಲಿ ಯುವಜನತೆ ತಮ್ಮಲ್ಲಿರುವ ಅಡಗಿರುವ ಪ್ರತಿಭೆಯನ್ನು ಜಗತ್ತಿಗೆ ಪರಿಚಯಿಸಲು ಮತ್ತು ಪ್ರದರ್ಶಿಸಲು ಸಾಮಾಜಿಕ ಮಾಧ್ಯಮಗಳು ಅತ್ಯುತ್ತಮ ವೇದಿಕೆಯಾಗಿ ಮಾರ​‍್ಪಟಟಿವೆ ಎಂದು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ವಿ ಲೋಕೇಶ್ ಅವರು ಹೇಳಿದರು. ಇಲ್ಲಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಡಾ.ಬಿ.ಆರ್ ಅಂಬೇಡ್ಕರ್ ಸಭಾಭವನದಲ್ಲಿ ದಿ.ರಮಣಿಕ ಗುಪ್ತ ಅವರ ಸ್ಮರಣಾರ್ಥ ಆಯೋಜಿಸಿರುವ 10 ದಿನಗಳ ರಾಷ್ಟ್ರೀಯ ರಂಗಭೂಮಿ ಕಾರ್ಯಾಗಾರದ ಸಮಾರೋಪ ಸಮಾರಂಭವನ್ನು ಪ್ರೊ.ಶಾಂತನಾಯ್ಕ್‌ ಅವರ ರಚಿತ ವೇರಾಳು ನಾಟಕ ದೃಶ್ಯ ಪ್ರದರ್ಶಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆಯನ್ನು ಗುರುತಿಸಿಕೊಳ್ಳಲು ಶ್ರಮವಹಿಸಬೇಕು. ವಿವಿಯ ವಿದ್ಯಾರ್ಥಿಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತಾಗಬೇಕು. ಹತ್ತು ದಿನಗಳ ಕಾರ್ಯಾಗಾರವು ಯಶಸ್ವಿಯಾಗಿರುವುದು ಸಂತಸವಾಗಿದೆ ಎಂದರು. 

ಸಮಾರೋಪ ನುಡಿಯಲ್ಲಿ ಮಾತನಾಡಿದ ವಿಜಯನಗರ ಜಿಲ್ಲೆಯ ಎನ್‌ಎಸ್‌ಡಿ ರಂಗ ನಿರ್ದೇಶಕ ಸಾಂಬಶಿವ ದಳವಾಯಿ ಅವರು, ಪ್ರತಿಯೊಬ್ಬರು ಸಾಹಿತ್ಯದ ರಸವನ್ನು ಸವಿಯುವ ಮೂಲಕ ಗುರುತಿಸಿಕೊಳ್ಳಬೇಕು. ಹತ್ತು ದಿನಗಳಲ್ಲಿ ನಾಟಕ ತರಬೇತಿ ಹಾಗೂ ನಾಟಕ ರಚನೆ ಸುಲಭದ ಮಾತಲ್ಲ. ನಾಟಕಕ್ಕೆ ನಿರ್ದಿಷ್ಟವಾದ ಸಮಯ ಬೇಕು. ಇಂತಹ ರಂಗಭೂಮಿ ಕಾರ್ಯಗಾರಗಳು ಮೈಸೂರು ಭಾಗಗಳಲ್ಲಿ ಕಾಣಿಸಿಕೊಳ್ಳುತ್ತಿದ್ದವು. ಬಳ್ಳಾರಿಯಲ್ಲಿ ಆಯೋಜಿಸಿದ್ದು ಸಂತಸಕರ ಎಂದರು.ವಿವಿಯ ಕಲಾ ನಿಕಾಯದ ಡೀನರಾದ ಪ್ರೊ.ರಾಬರ್ಟ್‌ ಜೋಸ್, ಟಿ.ಕೊಟ್ಟ್ರ​‍್ಪ ರಂಗಭೂಮಿ ಕಲಾವಿದೆ ವೀಣಾ, ರಂಗ ನಿರ್ದೇಶಕ ಮಹೇಶ್ ವೇದಿಕೆಯಲ್ಲಿದ್ದರು. ವಿಭಾಗದ ಮುಖ್ಯಸ್ಥ ಪ್ರೊ.ಶಾಂತಾನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಡಾ.ಅಣ್ಣಾಜಿ ಕೃಷ್ಣಾರೆಡ್ಡಿ ನಿರೂಪಿಸಿ, ವಂದಿಸಿದರು. ಈ ಸಂದರ್ಭದಲ್ಲಿ ಪ್ರೊ.ಶಾಂತನಾಯ್ಕ್‌ ಅವರ ರಚಿತ ವೇರಾಳು ನಾಟಕ ಪ್ರದರ್ಶನ ಮಾಡಲಾಯಿತು. ನಾಟಕ ನಿರ್ದೇಶನ, ಜನಪದ ರಂಗ, ರಂಗಭೂಮಿ ಮತ್ತು ರಂಗಶಿಕ್ಷಣ, ಬಯಲಾಟ ಮೊದಲಾದ ಮಾದರಿಯ ಹತ್ತಕ್ಕೂ ಹೆಚ್ಚು ವಿವಿಧ ಕಾರ್ಯಾಗಾರದ 10 ದಿನಗಳ ಕಾಲ ನಡೆದ 250ಕ್ಕೂ ಅಧಿಕ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಶಿಬಿರಾರ್ಥಿಗಳು ಹಾಗೂ ಕಲಾವಿದರು ಉಪಸ್ಥಿತರಿದ್ದರು.