ಕಣ್ಣಿನ ಆರೋಗ್ಯ ದೃಷ್ಟಿಯಿಂದ ನಿಯಮಿತವಾಗಿ ಕಣ್ಣುಗಳ ತಪಾಸಣೆ

Regular eye check-ups for eye health

ಕಣ್ಣಿನ ಆರೋಗ್ಯ ದೃಷ್ಟಿಯಿಂದ ನಿಯಮಿತವಾಗಿ ಕಣ್ಣುಗಳ ತಪಾಸಣೆ

ಸವಣೂರು 20: ಕಣ್ಣಿನ ಆರೋಗ್ಯ ದೃಷ್ಟಿಯಿಂದ  ನಿಯಮಿತವಾಗಿ ಕಣ್ಣುಗಳ ತಪಾಸಣಾ ಮಾಡಿಸಿಕೊಳ್ಳಬೇಕಾಗಿದೆ ಎಂದು ಕಳಸೂರ ಗ್ರಾಮದ ಹಿರಿಯರಾದ ಶಿವಾಜಪ್ಪ ಪುಟ್ಟಣ್ಣನವರ ಹೇಳಿದರು.   ತಾಲ್ಲೂಕಿನ ಕಳಸೂರ ಗ್ರಾಮದ ಶ್ರೀ ಭೋಗೇಶ್ವರ ದೇವಸ್ಥಾನದಲ್ಲಿ ಶಿವಮೊಗ್ಗ ಶಂಕರ ಕಣ್ಣಿನ ಆಸ್ಪತ್ರೆ, ಅಮ್ಮಾ ಸಂಸ್ಥೆ(ರಿ) ಹಿರೇಮುಗದೂರ. ಕಳಸೂರ ಗ್ರಾಮ ಪಂಚಾಯಿತಿ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರದಲ್ಲಿ ಅವರು ಮಾತನಾಡಿದರು.ಮನುಷ್ಯನಿಗೆ ಎಲ್ಲಾ ಅಂಗಕ್ಕಿಂತ ಕಣ್ಣು ಮಹತ್ವ ಪಡೆದಿದೆ.ಗ್ರಾಮೀಣ ಭಾಗದ ಬಡವರಿಗೆ ಉಪಯೋಗವಾಗಲಿ ಎಂಬ ಉದ್ದೇಶದಿಂದ ಉಚಿತ ತಪಾಸಣಾ ಶಿಬಿರ ಮಾಡಲಾಗುತ್ತಿದ್ದು,ಇದರ ಸದುಪಯೋಗ ಪಡಿಸಿಕೊಳ್ಳಬೇಕಾಗಿದೆ ಎಂದರು.  ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಪವಿತ್ರಾ ಮಂಟಗಣಿ ಮಾತನಾಡಿ ಆರೋಗ್ಯ ಚನ್ನಾಗಿ ಇದ್ದರೆ ಅದುವೇ ನಮಗೆಲ್ಲಾ ಸಂಪತ್ತು. ಸಾರ್ವಜನಿಕರು ಇಂತಹ ಶಿಬಿರದ ಉಪಯೋಗಪಡಿಸಿಕೊಳ್ಳುವುದು ಅಗತ್ಯವಿದೆ ಎಂದರು.ಶಂಕರ ವಿಷನ್ ಸೆಂಟರ್ ವೈದ್ಯರಾದ ಡಾ. ವ್ಹಿ ಮಾಂಡ್ರೆ ಪ್ರಸ್ತುತ ಕಣ್ಣಿನ ಪೊರೆ ಬಗ್ಗೆ ಹೆಚ್ಚಿನ ಕಾಳಜಿವಹಿಸಬೇಕು. ಸಮಯಕ್ಕೆ ಸರಿಯಾಗಿ ತಪಾಸಣೆ ಹಾಗೂ ಚಿಕಿತ್ಸೆ ಮಾಡಿಸಿಕೊಳ್ಳಬೇಕು ಎಂದು ತಪಾಸಣೆಯ ಬಗ್ಗೆ ಮಾಹಿತಿ ನೀಡಿದರು.         ಊರಿನ ಹಿರಿಯರರಾದ ಹನಮಂತಗೌಡ ಪಾಟೀಲ ಹಾಗೂ ಅಮ್ಮಾ ಸಂಸ್ಥೆ(ರಿ) ಸಂಸ್ಥಾಪಕರಾದ ನಿಂಗಪ್ಪ ಎಂ ಆರೇರ ಅವರು ಉಚಿತ ತಪಾಸಣಾ ಶಿಬಿರ ಉದ್ದೇಶಿಸಿ ಮಾತನಾಡಿದರು.        ಈ ಸಂದರ್ಭದಲ್ಲಿ ಕಳಸೂರ ಗ್ರಾಪಂ ಸದಸ್ಯರಾದ ಪುಟ್ಟಪ್ಪ ಮರಗಿ,ಗ್ರಾಪಂ ಕಾರ್ಯವೃಂದದವರಾದ  ರಮೇಶ ಕ್ಯಾಲಕೊಂಡ,ಆಸ್ಪತ್ರೆಯ ಸೃಜಯ ಕೆ ಎಂ,ಪ್ರಕಾಶ ಎಸ್ ಸೇರಿದಂತೆ ಊರಿನ ಹಿರಿಯರು ಹಾಗೂ  ಗ್ರಾಮಸ್ಥರು ಭಾಗವಹಿಸಿದ್ದರು.