ರವಿ ಮಾಮನ ಬರ್ತ್ ಡೇ : ಶುಭ ಕೋರಿದ ಸ್ಯಾಂಡಲ್ ವುಡ್

ಬೆಂಗಳೂರು, ಮೇ 30,ಕನ್ನಡ ಚಿತ್ರರಂಗದ ಖ್ಯಾತ ನಟ ರವಿಚಂದ್ರನ್ ಅವರ 59ನೇ ಹುಟ್ಟು ಹಬ್ಬಕ್ಕೆ ಸ್ಯಾಂಡಲ್ ವುಡ್ ನ ಎಲ್ಲ ತಾರೆಯರೂ ಶುಭ ಕೋರಿದ್ದಾರೆ. ನಟ ಶಿವರಾಜ್ ಕುಮಾರ್, “ನಾನು ನಿಮ್ಮನ್ನು ಆಗಾಗ ಭೇಟಿಯಾಗೋದಿಲ್ಲ, ಫೋನ್ ನಲ್ಲಿ ನಿತ್ಯ ಮಾತಾಡೋದಿಲ್ಲ.  ಆದ್ರೂ ನಮ್ಮಿಬ್ಬರ ಸ್ನೇಹ ಎಂದಿಗೂ ಕಮ್ಮಿ ಆಗೋಲ್ಲ” ಎಂದು ಹೇಳುವ ಮೂಲಕ ಇನ್ ಸ್ಟಾಗ್ರಾಮ್ ಹಾಗೂ ಟ್ವಿಟರ್ ನಲ್ಲಿ ರವಿಚಂದ್ರನ್ ಗೆ ಜನ್ಮದಿನದ ಶುಭಾಶಯಗಳನ್ನು ತಿಳಿಸಿದ್ದಾರೆ.ಗೋಲ್ಡನ್ ಸ್ಟಾರ್ ಗಣೇಶ್, “ಕನಸುಗಾರ ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು” ಎಂದು ಟ್ವೀಟ್ ಮಾಡಿದ್ದಾರೆ.
  ನವರಸನಾಯಕ ಜಗ್ಗೇಶ್, “ನಾನು ರವಿಸಾರ್ ಬೇಟಿಯಾಗಿದ್ದು 1985. ಪ್ರಳಯಾಂತಕ ಚಿತ್ರಕ್ಕೆ ವೀರಾಸ್ವಾಮಿ ರವರು ಕರೆಸಿದರು! ನನ್ನ ಅವಕಾಶ ವಿಜಯಕಾಶಿ ಹೋಯಿತು!ನಂತರ 1987ರಣಧೀರ ನಟಿಸಿದೆ!ಅಲ್ಲಿಂದ ಇಂದಿಗು ಸಹೋದರರಂತೆ ಇದ್ದೇವೆ!ಒಟ್ಟಿಗೆ ಅನೇಕ ಚಿತ್ರನಟಿಸಿದೆವು!ನನಗಿಂತ 2ವರ್ಷ ಹಿರಿಯರು!ಹೃದಯದಿಂದ ಹರಸುವೆ ಅವರ ಹುಟ್ಟುಹಬ್ಬಕ್ಕೆ!ನೂರ್ಕಾಲ ಸುಖವಾಗಿ ಬಾಳಿ ಸಹೋದರ.. ಶುಭದಿನ” ಎಂದಿದ್ದಾರೆ.ಸತೀಶ್ ನೀನಾಸಂ, “ನಿಮ್ಮ ಅದೆಷ್ಟೋ ಸಿನಿಮಾಗಳನ್ನು ನೋಡುತ್ತಾ, ನಿಮ್ಮಂತೆ ಸಿನಿಮಾ ಮಾಡಬೇಕು, ಅಂದು ಕೊಂಡವರಲ್ಲಿ ನಾನು ಕೂಡ ಒಬ್ಬ. ನಿಮ್ಮ ಎಲ್ಲಾ ಕೆಲಸಗಳು ಚಿತ್ರರಂಗ ಇರುವವರೆಗೂ ಅಮರ. ಹ್ಯಾಪಿ ಬರ್ತಡೇ ಕ್ರೇಜಿಸ್ಟಾರ್ ರವಿಚಂದ್ರನ್ ಸರ್” ಎಂದು ಟ್ವೀಟ್ ಮಾಡಿದ್ದಾರೆ.