ಲೋಕದರ್ಶನ ವರದಿ
ಮೋಳೆ 20: ಕಾಗವಾಡ ಪಟ್ಟಣದ ಜೈನ ಸಮೂದಾಯದವರು ಬುಧವಾರ ಸಭೆ ಸೇರಿ ಕಾಗವಾಡ ಮತಕ್ಷೇತ್ರದ ಕಾಂಗ್ರಸ್ ಅಭ್ಯರ್ಥಿಗೆ ಜೈನ ಸಮಾಜದ ವತಿಯಿಂದ ಉಪಚುನಾವಣೆಯಲ್ಲಿ ಬೆಂಬಲ ನೀಡುವುದಾಗಿ ಘೋಷಿಸಿದರು.
ಬುಧವಾರ ದಿ.20 ರಂದು ಕಾಗವಾಡ ಗ್ರಾಮದಲ್ಲಿ ಜೈನ ಸಮಾಜದ ನೂರಾರು ಬಾಂಧವರು ಸಭೆ ಸೇರಿ ಕಾಂಗ್ರೆಸ್ ಅಭ್ಯರ್ಥಿ ರಾಜು ಕಾಗೆಯವರ ಸಮ್ಮುಖದಲ್ಲಿ ಈ ನಿರ್ಣಯ ಘೋಷಿಸಿದರು. ರಾಜು ಕಾಗೆಯವರು ಕಳೆದ 20 ವರ್ಷಗಳಿಂದ 4 ಬಾರಿ ಶಾಸಕರಾಗಿದ್ದಾಗ ಎಂದೂ ಜಾತೀಯ ರಾಜಕಾರಣ, ಧರ್ಮದ ,ದುರ್ಧೈವ ರಾಜಕಾರ ಮಾಡಿಲ್ಲ. ನಾವು ಕಾಂಗ್ರಸ್ ಪಕ್ಷದಲ್ಲಿದ್ದರೂ ನಮ್ಮ ಹಲವಾರು ಕೆಲಸಗಳನ್ನು ಮಾಡಿರುತ್ತಾರೆ.ರಾಜು ಕಾಗೆಯವರ 20 ವರ್ಷದ ರಾಜಕಾರಣ ಹಾಗೂ ಶ್ರೀಮಂತ ಪಾಟೀಲರ 14 ತಿಂಗಳುಗಳ ಅಧಿಕಾರಾವಧಿಯಲ್ಲಿ ನಡೆದುಕೊಂಡ ರೀತಿಯನ್ನು ತುಲನೆ ಮಾಡಿ ನೋಡಿದ್ದೇವೆ.ಅದಕ್ಕಾಗಿ ನಾವು ನೇರ ನುಡಿಯ ವ್ಯಕ್ಯಿಗೆ ಬೆಂಬಲಿಸುವುದಾಗಿ ನಿರ್ಧರಿಸಲಾಗಿದೆ ಎಂದು ಅಜೀತ ಕರವ, ಮಹಾವೀರ ಬಿಂದಗೆ, ಕುಮಾರ ಖೋತ ಪಿರುಜೈನ ಸೇರಿದಂತೆ ಅನೇಕ ಜೈನ ಮುಖಂಡರು ಮಾತನಾಡಿದರು.
ಈ ವೇಳೆ ಕಾಂಗ್ರಸ್ ಅಭ್ಯರ್ಥಿ ರಾಜು ಕಾಗೆ ಮಾತನಾಡಿ ಕಳೆದ 4 ಬಾರಿ ಶಾಸಕರಾಗಿ ಕಳೆದ 20 ವರ್ಷಗಳಲ್ಲಿ ಹಲವಾರು ಜನಪರ ಕಾರ್ಯಗಳನ್ನು ಮಾಡಿದ್ದೇನೆ. ಆದರೆ ಕಳೆದ ಚುನಾವಣೆಯಲ್ಲಿ ಹಣದ ಹೊಳೆ ಹರಿದ ಪರಿಣಾಮ ನನಗೆ ಸೋಲಾಯಿತು. ನನ್ನನ್ನು ಸೋಲಿಸಿವರಿಗೆ ಈಗ ಪಶ್ಚಾತಾಪವಾಗಿದೆ. ಅವರೇ ಈಗ ಬಂದು ನನಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಹಣದ ಆಮೀಷಕ್ಕೆ ಬಲಿಯಾದೆ ಅಭಿವೃದ್ದಿಗೆ ಬೆಂಬಲ ನೀಡುವಂತೆ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಜೈನ ಸಮಾಜದ ಮುಖಂಡರಾದ ಗಜಾನನ ಯರಂಡೋಲಿ, ಅಜೀತ ಅಕಿವಾಟೆ, ಶ್ರೀಕಾಂತ ಪಾಟೀಲ,ರಾಜು ಕುಸನಾಳೆ, ರಾವಸಾಬ ಚೌಗುಲೆ, ಸುಧೀರ ಹುದ್ದಾರ,ಅಣ್ಣಾಸಾಬ ಖಟಾರೆ, ತಾತ್ಯಾಸಾಬ ಧೋತ್ರೆ, ಕುಮಾರ ಕವಟಗೆ, ಶಾಂತಿನಾಥ ಕರವ, ಧನಪಾಲ ಕರವ, ರಾಜು ಕವಟಗೆ, ಅಪ್ಪಾಸಾಬ ಗೋಬಾಳೆ, ಆಧೀನಾಥ ಕರವ, ಸುಧೀರ ಕರವ, ರಾಜು ಮಗದುಮ್, ಬಾಬಾಸಾಬ ಕವಟಗೆ ಸೇರಿದಂತೆ ನೂರಾರು ಜೈನ ಮುಖಂಡರು ಇದ್ದರು,