ವಾಟಾಳ್ ಹೋರಾಟಕ್ಕೆ ರೇಲ್ವೆ ಸಮಿತಿ ಬೆಂಬಲ

ಲೋಕದರ್ಶನ ವರದಿ 

ಅಂಕೋಲಾ 16: ಅಂಕೋಲಾ-ಹುಬ್ಬಳ್ಳಿ ರೈಲು ಮಾರ್ಗ ನಿಮರ್ಾಣಕ್ಕೆ ಕಳೆದ 15 ವರ್ಷಗಳಿಂದ ಹೋರಾ ಡುತ್ತಲೇ ಬಂದಿದ್ದರೂ ಇನ್ನುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಕೆಲವರು ಪರಿಸರವಾದಿಗಳ ವೇಷದಲ್ಲಿ ಈ ಯೋಜನೆ ಅನುಷ್ಠಾನಗೊಳ್ಳಲು ಬಿಡುತ್ತಿಲ್ಲ. ಪರಿಸರವಾದಿಗಳಿಗೆ ನಿಜಕ್ಕೂ ವಾಸ್ತವದ ಅರಿವಿಲ್ಲದೆ ವಿರೋಧ ಮಾಡುತ್ತಿದ್ದಾರೆ ಎಂದು ಅಂಕೋಲಾ-ಹುಬ್ಬಳ್ಳಿ ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ ರಮಾನಂದ ನಾಯಕ ಹೇಳಿದರು. 

   ಮಂಗಳವಾರ ಪಟ್ಟಣದಲ್ಲಿ ಹಮ್ಮಿಕೊಂಡ ಹೋರಾಟದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿ, ಮಾಜಿ ಶಾಸಕ, ಹೋರಾಟಗಾರ ವಾಟಾಳ್ ನಾಗರಾಜ ಅವರು ಕಾರವಾರದಲ್ಲಿ ಜ.17ರಂದು ಹಮ್ಮಿ ಕೊಂಡಿರುವ ಹೋರಾಟಕ್ಕೆ ನಮ್ಮ ಸಮಿತಿಯವರು ಸಂಪೂರ್ಣ ಬೆಂಬಲ ನೀಡುತ್ತಿದ್ದೇವೆ. 

   1864ರಲ್ಲಿ ಬ್ರಿಟೀಷರು ಹುಬ್ಬಳ್ಳಿ-ಕಾರವಾರ ರೈಲು ಮಾರ್ಗದ ಯೋಜನೆ ರೂಪಿಸಿದ್ದರು. ಆ ಸಂದರ್ಭ ದಲ್ಲಿ ಕೊಂಕಣ ರೈಲ್ವೆ ಇರದಿರುವುದರಿಂದ ಈ ಹೆಸರು ಇಡಲಾಗಿತ್ತು. ಈಗ ಅಂಕೋಲಾ-ಹುಬ್ಬಳ್ಳಿ ರೈಲು ಮಾರ್ಗವಾಗಿ ಮಾರ್ಪಟ್ಟಿದೆ. ಉತ್ತರ ಕನರ್ಾಟಕ ಮತ್ತು ಕರಾವಳಿ ಭಾಗದಲ್ಲಿ ಸಾಕಷ್ಟು ಉದ್ಯೋಗ ಸೃಷ್ಟಿ ಯಾಗುವ ಮತ್ತು ವಹಿವಾಟಿಗೆ ಸುಲಭವಾಗಲಿದೆ ಎಂದು ಬ್ರಿಟೀಷರೇ ಅಂದು ತೀಮರ್ಾನಿಸಿದ್ದರು ಎಂದರು.

  ಸಾಹಿತಿ ವಿಷ್ಣು ನಾಯ್ಕ ಮಾತನಾಡಿ, ದಿನಕರ ದೇಸಾಯಿಯವರು 1967ರಲ್ಲಿ ಸಂಸದರಾದಾಗ ಲೋಕ ಸಭೆಯಲ್ಲಿ ಈ ಯೋಜನೆ ಕುರಿತು ಧ್ವನಿ ಎತ್ತಿದ್ದರು. ರಾಮಚಂದ್ರನ್ ನೇತೃತ್ವದ ವಿಜ್ಞಾನಿಗಳ ತಂಡ ಸ್ಥಳಕ್ಕೆ ಆಗಮಿಸಿ 6 ತಿಂಗಳವರೆಗೆ ಅಧ್ಯಯನ ನಡೆಸಿ ಆನೆ ಕಾರಿಡಾರ್ ಸೇರಿದಂತೆ ಎಲ್ಲವುಗಳಿಗೂ ಅನುಕೂ ಲಕರ ವರದಿಯನ್ನು ನೀಡಿದ್ದರು. ಜಗತ್ತಿನ ಯಾವುದೇ ಮರವೂ 5 ಮೀಟರಗಿಂತ ಭೂಮಿಯ ಆಳಕ್ಕೆ ಬೇರು ಹೋಗುವುದಿಲ್ಲ. ಹೀಗಾಗಿ ಆನೆ ಕಾರಿಡಾರ್ಗೆ ಯಾವುದೇ ಸಮಸ್ಯೆಯಾಗದಂತೆ 10 ಮೀಟರ್ ಆಳದಲ್ಲಿ ಸುರಂಗ ಮಾರ್ಗ ನಿಮರ್ಿಸಲು ವರದಿ ಸಲ್ಲಿಸಿದ್ದರು. ನಂತರ ಸುಪ್ರೀಂ ಕೋಟರ್್ನ ಹಸಿರು ಪೀಠ ಅವಕಾಶ ಕಲ್ಪಿಸಿತ್ತು. ಈಗ ಮತ್ತೆ ಪರಿಸರವಾದಿಗಳು ಖ್ಯಾತೆ ತೆಗೆಯುತ್ತಿರುವುದು ಖಂಡನಾರ್ಯ ಎಂದರು. 

  ಸಭೆಯಲ್ಲಿ ಪ್ರಮುಖರಾದ ಉಮೇಶ ಎನ್. ನಾಯ್ಕ, ಭಾಸ್ಕರ ನಾವರ್ೇಕರ, ರಾಘು ಕಾಕರಮಠ, ಆರ್.ಟಿ. ಮಿರಾಶಿ, ಡಿ.ಎನ್. ನಾಯಕ, ಹನುಮಂತ ಬೊಮ್ಮು ಗೌಡ, ಪಾಂಡುರಂಗ ಗೌಡ, ರಾಜೇಂದ್ರ ನಾಯ್ಕ,  ವಿನೋದ ನಾಯಕ, ವಿಜಯಕುಮರ ವಾಯ್. ನಾಯ್ಕ, ರಾಘು ನಾಯ್ಕ ಕಾರವಾರ, ಮೋಹಿನಿ ನಾಯ್ಕ, ಪುರುಷೋತ್ತಮ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು