ಬೆಂಗಳೂರು, ಆ 9 ರಾಜ್ಯದಲ್ಲಿ ಪ್ರವಾಹ ಸಂತ್ರಸ್ತರ ಆಕ್ರಂದನ ಮುಗಿಲು ಮುಟ್ಟಿದ್ದು, ಶ್ರೀಮಠದ ಶಿಷ್ಯರು, ಭಕ್ತರು ಹಾಗೂ ಅಭಿಮಾನಿಗಳು ರಕ್ಷಣಾ ಹಾಗೂ ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಶ್ರೀರಾಮಚಂದ್ರಾಪುರಮಠದ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಕರೆ ನೀಡಿದ್ದಾರೆ.
ಇದು ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯಕ್ಕೆ ಧುಮುಕಬೇಕಾದ ಸಮಯ, ನೊಂದವರ ಬದುಕನ್ನು ಕಟ್ಟಿಕೊಡಲು, ನಮ್ಮ ಸಂಪಾದನೆಯ ಒಂದಿಷ್ಟು ಮೊತ್ತವನ್ನು ಸಮಪರ್ಿಸಬೇಕಾದ ಹೊತ್ತು. ಆದ್ದರಿಂದ ಶ್ರೀಮಠದ ಶಿಷ್ಯಭಕ್ತರೆಲ್ಲರೂ ತಮ್ಮಲ್ಲಿರುವುದನ್ನು ಸಮಪರ್ಿಸಿ ಮಾನವೀಯತೆ ಮೆರೆಯಬೇಕು ಎಂದು ಶಿಷ್ಯಕೋಟಿಗೆ ಕರೆ ನೀಡಿದ್ದಾರೆ.
ಸಂಕಷ್ಟಕ್ಕೆ ಒಳಗಾದವರಿಗೆ ಸಾಂತ್ವನ ಹೇಳುವ ಮೂಲಕ ನಿಮ್ಮೊಂದಿಗೆ ನಾವೆಲ್ಲ ಇದ್ದೇವೆ ಎಂಬ ಭರವಸೆ ನೀಡಬೇಕು. ಅವರು ಮತ್ತೆ ನಲಿವಿನ ಬೆಳಕು ಕಾಣುವಂತೆ ಮಾಡಬೇಕು ಎಂದು ಸ್ವಾಮೀಜಿ ತಿಳಿಸಿದ್ದಾರೆ.
ಪ್ರಕೃತಿ ಮುನಿದಿದ್ದಾಳೆ. ಅವರ ರೌದ್ರ ನರ್ತನಕ್ಕೆ ಜೀವಸಂಕುಲ ನಲುಗಿದೆ. ಸಹಜೀವಿಗಳು ಬದುಕು ಕಳೆದುಕೊಂಡು ದಿಕ್ಕು ಕಾಣದಾಗಿದ್ದಾರೆ. ಬೆಳೆದ ಬೆಳೆ ನೀರುಪಾಲಾಗಿದೆ. ಎಷ್ಟೋ ಮನೆಗಳು ಕೊಚ್ಚಿಕೊಂಡು ಹೋಗಿವೆ. ಜೀವನಾವಶ್ಯಕ ವಸ್ತುಗಳು ತೇಲಿ ಹೋಗಿವೆ. ಸಾಕು ಪ್ರಾಣಿಗಳನ್ನು ರಕ್ಷಿಸಿಕೊಳ್ಳಲಾಗಿಲ್ಲ. ಕೆಲವೆಡೆ ಪ್ರಾಣಾಪಾಯವೂ ಆಗಿದೆ. ಮೂಲಭೂತ ವ್ಯವಸ್ಥೆಗಳು ಸಂಪೂರ್ಣ ನೆಲಗಚ್ಚಿವೆ. ನಮ್ಮ ಜನ ಕರುಣಾಮಯ ಯಾತನೆಗೆ ಗುರಿಯಾಗಿದ್ದಾರೆ. ಆದ್ದರಿಂದ ಸಾರ್ವಜನಿಕರು ತಮ್ಮ ಕೈಲಾದ ನೆರವು ನೀಡಿ ಸಂತ್ರಸ್ತರಿಗೆ ಧೈರ್ಯ ತುಂಬಬೇಕು ಎಂದು ಪ್ರಕಟಣೆಯಲ್ಲಿ ಸ್ವಾಮೀಜಿ ಮನವಿ ಮಾಡಿದ್ದಾರೆ.