ಕ್ವಿಟ್ ಇಂಡಿಯಾ ದಿನ: ಕ್ರಾಂತಿಜ್ಯೋತಿ ಕಾರ್ಯಕ್ರಮ

ಕ್ವಿಟ್ ಇಂಡಿಯಾ ದಿನ: ಕ್ರಾಂತಿಜ್ಯೋತಿ ಕಾರ್ಯಕ್ರಮ  Quit India Day: 'Krantijyothi' Programme

ಬಳ್ಳಾರಿ 10:  ಕ್ವಿಟ್ ಇಂಡಿಯಾ ಚಳವಳಿಯ ಸ್ಮರಣಾರ್ಥ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ‘ಕ್ರಾಂತಿಜ್ಯೋತಿ’ ಕಾರ್ಯಕ್ರಮ ನಡೆಯಿತು.  ಕಾರ್ಯಕ್ರಮದಲ್ಲಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ, 1942ರ ಆಗಸ್ಟ್‌ 9ರಂದು ಮಹಾತ್ಮ ಗಾಂಧೀಜಿ ನೀಡಿದ (ಮಾಡು ಇಲ್ಲವೇ ಮಡಿ) ಘೋಷಣೆ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ಚೈತನ್ಯ ನೀಡಿತು ಎಂದು ಹೇಳಿದರು. ಬ್ರಿಟಿಷರ ವಿರುದ್ಧದ ‘ಭಾರತ ಬಿಟ್ಟು ತೊಲಗಿ’ ಚಳವಳಿಯಲ್ಲಿ ಹೋರಾಡಿದ ಎಲ್ಲ ಮಹನೀಯರನ್ನು ಸ್ಮರಿಸುವುದು ನಮ್ಮ ಕರ್ತವ್ಯ ಎಂದರು.  

ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಲ್ಲಂ ಪ್ರಶಾಂತ್, ಬುಡಾ ಅಧ್ಯಕ್ಷ ಅಂಜಿನೇಯುಲು, ಲಿಡ್ಕರ್ ಅಧ್ಯಕ್ಷ ಮುಂಡ್ರಿಗಿ ನಾಗರಾಜ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹುಮಾಯೂನ್ ಖಾನ್, ಮಹಾಪೌರ ಪಿ. ಗಾದೆಪ್ಪ, ಮಾಜಿ ಡಿಸಿಸಿ ಅಧ್ಯಕ್ಷ ಜೆ.ಎಸ್‌. ಮಹಮ್ಮದ್ ರಫೀಕ್, ಡಿಸಿಸಿ ಕಾರ್ಯಾಧ್ಯಕ್ಷ ಬೋಯಪಾಟಿ ವಿಷ್ಣುವರ್ಧನ್, ಉಪಾಧ್ಯಕ್ಷ ಕೆ. ಶ್ರೀನಿವಾಸುಲು, ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿದರು.