ಮಹಾಲಿಂಗಪುರ: ಅಭ್ಯಾಸ ಬಲದಿಂದ ವೈರಾಗ್ಯ ಬಲದಿಂದ ಚಂಚಲವಾದ ಮನಸ್ಸನ್ನು ಹಿಡಿದಿಡಬಹುದು. ಶುದ್ಧವಾದ ಮನಸ್ಸೇ ಶುಭ ತೀರ್ಥ ಎಂದು ಕಂಕನವಾಡಿಯ ಮಾರುತಿ ಶರಣರು ಹೇಳಿದರು.
ಶ್ರಾವಣ ಮಾಸದ ನಿಮಿತ್ತ ಇಲ್ಲಿಯ ಬುದ್ನಿ ಪಿಡಿ ಯ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ರವಿವಾರದಂದು ನಿಜಗುಣ ಶಿವಯೋಗಿಗಳ ವಚನ "ಮನಸ್ಸಿಗೆ ಬಂದಂತೆ ನಡೆಯದಿರು ಇಹದಲ್ಲಿಎಂಬ ವಿಷಯಾದ ಮೇಲೆ ಪ್ರವಚನ ನೀಡುತ್ತಿದ್ದ ಅವರು ಮಂಗನಂತಿರುವ ಮನಸ್ಸು ಪಾಪ ಮಾಡತಾದ ಶರೀರ ಏಟ ತಿನ್ನತದ.ಮನೆಯ ಮುಂದೆ ಭಾವಿಯ ತೋಡಿ ಕಾಲು ಜಾರಿದರೆ ಕೈಲಾಸ,ಮನಸ್ಸು ಜಾರಿದರೆ ವನವಾಸ. ಶರೀರ ಶುದ್ಧಿಗೆ ಸ್ನಾನ ಮಾಡುವ ಹಾಘೆ ಮನಸ್ಸು ಶುದ್ಧಿಗೆ ವೇದಾಂತ ಅಗತ್ಯ.ಶುದ್ಧವಿಲ್ಲದ ಕಣ್ಣು, ಮನಸ್ಸು, ನಾಲಿಗೆ ಬೇರೆಯರನ್ನು ಕೊಲ್ಲುವದಿಲ್ಲ ತನ್ನನ್ನೆ ಕೊಲ್ಲುತ್ತವೆ. ಕಾರಣ ಫಕೀರನಾಗಬೇಕಾದರೆ ಮನಸ್ಸಿನ ವಿಕಾರ ಕಳಿಬೇಕು. ಅಲಗಿನ ಮನೆ ಏರಬಹುದು.ಹುಲಿಯ ಗುಹೆ ಹೊಗಬಹುದು. ಸಿಂಹದ ಕೊರಳಲ್ಲಿ ನೇತಾಡಬಹುದು ಆದರೆ ಚಂಚಲು ಮನಸ್ಸುನ್ನು ಹಿಡಿಯುವದು ಬಹು ಕಷ್ಟ. ಕೂಡಲ ಸಂಗನ ಶರಣರ ಅನುಭಾವ ಗೋಷ್ಠಿ ಮನಸ್ಸನ್ನು ಶುದ್ಧಗೊಳಿಸುತ್ತದೆ ಎಂದು ಅನೇಕ ಶರಣರ ವಚನ ಹಾಗೂ ದಾಸರ ಪದಗಳ ಉದಾಹರಿಸಿ ಪ್ರವಚನ ನೀಡಿದರು.
ಶಿಕ್ಷಕ ಭೀಮಶಿ ನೆಗಿನಾಳ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು.ಲಕ್ಷ್ಮಣ ಕಿಶೋರಿ ನಿರೂಪಿಸಿ ವಂದಿಸಿದರು.ಶಿವಯ್ಯ ಮಠಪತಿ,ಎಸ.ಎಮ್.ಉಳ್ಳಾಗಡ್ಡಿ,ಗೊಲೇಶ ಅಮ್ಮನಗಿ, ಉದ್ದಪ್ಪ ನಿಲಾರಿ ಮುಂತಾದವರು ಇದ್ದರು.