ಹೆಣ್ಣು ಮಗಳನ್ನು ಕೊಂದ ರಾಕ್ಷಸನಿಗೆ ಗಲ್ಲಿಗೇರಿಸಲು ಆಗ್ರಹಿಸಿ ಪ್ರತಿಭಟನೆ

ಸಿಂದಗಿ 22; ಹುಬ್ಬಳ್ಳಿಯಲ್ಲಿ ನಡೆದ ಸಹೋದರಿ ನೇಹಾ ಹಿರೇಮಠ ಅವಳ ಬರ್ಬರ್ ಹತ್ಯೆ ಖಂಡಿಸಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಬಿಜೆಪಿ ಯುವ ಮೋರ್ಚಾ ಹಾಗೂ ಮಹಿಳಾ ಮೋರ್ಚಾದ ವತಿಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಟೈರ್‌ಗೆ ಬೆಂಕಿ ಹಚ್ಚಿ ಆರೋಪಿಗೆ ಗಲ್ಲು ಶಿಕ್ಷೆಯನ್ನು ನೀಡಬೇಕು ಎಂದು ತಹಶೀಲ್ದಾರ ಕಾರ್ಯಾಲಯದ ಶಿರಸ್ತೆದಾರ ಇಂದ್ರಾಬಾಯಿ ಬಳಗಾನೂರ ಅವರಿಗೆ ಮನವಿ ಸಲ್ಲಿಸಿದರು.  

ಭಾಜಪ ಮಂಡಲ ಅಧ್ಯಕ್ಷ ಸಂತೋಷ ಪಾಟೀಲ ಡಂಬಳ ಮಾತನಾಡಿ, ಪ್ರೀತಿಯನ್ನು ತಿರಸ್ಕರಿಸಿದ್ದಕ್ಕೆ ಯುವತಿಯನ್ನು 9 ಬಾರಿ ಚಾಕುವಿನಿಂದ ಇರಿದು ಬರ್ಬರವಾಗಿ ಕೊಂದು ಹಾಕಿದ ಲವ್ ಜಿಹಾದಿ ಫಯಾಜ್‌ಗೆ ಸಾರ್ವಜನಿಕವಾಗಿ ಗಲ್ಲಿಗೆ ಹಾಕಬೇಕು ಅಂದ್ರೆ ಮುಂದೆ ಇಂತಹ ಪ್ರಮಾದ ಆಗುವುದಿಲ್ಲ ಕಾರಣ ಗ್ರಹ ಇಲಾಖೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸಿದ್ದು ಇನ್ನೂ ಕೆಲ ಆರೋಪಿಗಳು ತಲೆ ಮರೆಸಿಕೊಂಡಿದ್ದು ಅವರನ್ನು ಬಂಧಿಸಿ ಹೆಡೆಮುರಿ ಕಟ್ಟಬೇಕು ಅವರನ್ನು ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.   

ಲಿಂಬೆ ಅಭಿವೃದ್ಧಿ ಮಂಡಳಿಯ ಮಾಜಿ ಅಧ್ಯಕ್ಷ ಅಶೋಕ ಅಲ್ಲಾಪುರ, ಗುರು ತಳವಾರ, ಸಿದ್ರಾಮ ಆನಗೋಂಡ ಮಹಿಳಾ ಮಂಡಲ ಅಧ್ಯಕ್ಷೆ ನೀಲಮ್ಮ ಯಡ್ರಾಮಿ, ಜಿಲ್ಲಾ ಪ್ರಧನ ಕಾರ್ಯದರ್ಶಿ ಶಿಲ್ಪಾ ಕುದರಗೊಂಡ, ಎಸ್ ಆರ್ ಪಾಟೀಲ್, ಅಶೋಕ ನಾರಾಯಣಪುರ, ಬಸನಗೌಡ ಪಾಟೀಲ, ಶ್ರೀಶೈಲಗೌಡ ಬಿರಾದಾರ, ಜಂಗಮ ಸಮಾಜದ ಅಧ್ಯಕ್ಷ ಶಂಕ್ರಯ್ಯ ಹಿರೇಮಠ ಮಾತನಾಡಿ ಈ ನೆಲದಲ್ಲಿ ಹೆಣ್ಣು ಮಕ್ಕಳನ್ನು ಹತ್ಯೆ ಮಾಡಿದರೇ, ಮುಟ್ಟಿದರೂ ಕೂಡ ಅಂತವರ ಆಸ್ತಿ ಜಪ್ತಿ ಮಾಡಬೇಕು ಎಂದು ಆಗ್ರಹಿಸಿದರು 

ಈ ಸಂದರ್ಭದಲ್ಲಿ ಚೇತನ ರಾಂಪೂರ, ಸಿದ್ದಲಿಂಗಯ್ಯ ಹಿರೇಮಠ, ಪರಸುರಾಮ ಗೂಳೂರ ಸೇರಿದಂತೆ ನೂರಾರು ಕಾರ್ಯಕರ್ತರು ಮಹಿಳೆಯರು ಹಾಗೂ ನಾಗರಿಕರು ಹಾಜರಿದ್ದರು