ಬೆಲೆ ಏರಿಕೆಯೇ ಬಿಜೆಪಿ ಅಜೆಂಡಾ: ಕೋನರಡ್ಡಿ


ನವಲಗುಂದ : ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪದೇ ಪದೇ ಅಡುಗೆ ಅನೀಲ ದರ (ಗ್ಯಾಸ್ ಸಿಲೆಂಡರ್) ಹೆಚ್ಚಿಸಿದ್ದರಿಂದ ಸಾರ್ವಜನಿಕರಿಗೆ ಜೀವ ನಡೆಸುವುದೇ ಕಷ್ಟಕರ ಪರಿಸ್ಥಿತಿ ನಿರ್ಮಾಣವಾಗಿದ್ದು ಬೆಲೆಏರಿಕೆ ಖಂಡಿಸಿ ಈ ಸಂದರ್ಭದಲ್ಲಿ ಅವರು ಗ್ಯಾಸ ಸಿಲೆಂಡರ್ ಹೊತ್ತು ವಿಭಿನ್ನ ರೀತಿಯಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ಸರ್ಕಾರದ ಗಮನ ಸೆಳೆದರು. ಜೊತೆಗೆ ತಕ್ಷಣ ಬೆಲೆ ಏರಿಕೆಯನ್ನು ಹಿಂತೆಗೆದುಕೊಳ್ಳಿಲಿ ಎಂದು ಕಾಂಗ್ರೆಸ್ ಮುಖಂಡ, ನವಲಗುಂದ ಮಾಜಿ ಶಾಸಕ ಎನ್‌.ಹೆಚ್‌. ಕೋನರಡ್ಡಿಯವರು ಹೇಳಿದರು. 

ಅವರು ಇಂದು ಕೆಪಿಸಿಸಿ ನಿರ್ದೇಶನದ ಮೇಲೆ ಗ್ಯಾಸ್ ಸಿಲೆಂಡರ್ ಬೆಲೆ ಏರಿಕೆ ಖಂಡಿಸಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕರದ ವಿರುದ್ಧ ನವಲಗುಂದ ಕಾಂಗ್ರೆಸ್ ವತಿಯಿಂದ ಲಿಂಗರಾಜ ವೃತ್ತದಲ್ಲಿ ಹುಬ್ಬಳ್ಳಿ-ನವಲಗುಂದ ವಿಜಯಪುರ ರಾಷ್ಟ್ರೀಯ ಹೆದ್ದಾರಿ ಬಂದ ಮಾಡಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಕಾಂಗ್ರೆಸ್ ಸರ್ಕಾರದ ಅಧಿಕಾರದಲ್ಲಿ ಕೇವಲ 450 ಇದ್ದ ದರ ಈಗ 1150ಕ್ಕೆ ತಲುಪಿದೆ. ಇದಕ್ಕೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವೇ ಕಾರಣ. ಇದರಿಂದ ಬಡ ಮತ್ತು ಮಧ್ಯಮ ವರ್ಗದವರಿಗೆ ಗ್ಯಾಸ್ ಸಿಲೆಂಡರ್ ಉಪಯೋಗಿಸಲು ಆರ್ಥಿಕ ತೊಂದರೆಯಾಗಿದೆ. ಈಗಾಗಲೇ ಪೆಟ್ರೋಲ್, ಡಿಸೇಲ್ ಮುಂತಾದ ವಸ್ತುಗಳ ಬೆಲೆ ಏರಿಕೆ ಹಾಗೂ ಎಲ್ಲ ಪದಾರ್ಥಗಳ ಮೇಲೆ ಜಿಎಸ್‌ಟಿ ಹೇರಿಕೆಯಿಂದ ತತ್ತರಿಸಿದ ಜನರಿಗೆ ಮತ್ತೇ ಗ್ಯಾಸ್ ಸಿಲೆಂಡರ್ ಬೆಲೆ 50 ರೂ. ಹೆಚ್ಚಿಸಿದರ ಬಿಜೆಪಿ ವಿರುದ್ಧ ಪ್ರತಿಭಟಿಸಿ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದರು. 

ಬೆಲೆ ಏರಿಕೆ ಸಮಸ್ಯೆಗೆ ಪರಿಹಾರ ಪರಿಹಾರ ಕಂಡು ಹಿಡಿಯಲು ಕಾಂಗ್ರೆಸ್ ಪಕ್ಷ ಕಾಂಗ್ರೆಸ್ ಗ್ಯಾರೆಂಟಿ ಆಶ್ವಾಸನೆಯೊಂದಿಗೆ ಪ್ರತಿ ಮನೆಯ ಯಜಮಾನಿಗೆ ರೂ.2 ಸಾವಿರ ನೀಡುವ ಗೃಹಲಕ್ಷ್ಮೀ, ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಹಾಗೂ ಪ್ರತಿ ವ್ಯಕ್ತಿಗೆ 10 ಕೆ.ಜಿ ಉಚಿತ ಅಕ್ಕಿ ವಿತರಣೆ ಅನ್ನಭಾಗ್ಯ ಯೋಜನೆಗಳನ್ನು ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣ ಜಾರಿ  ಮಾಡಲು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ ಹಾಗೂ ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರ ಸಹಿ ಮಾಡಿದ ಗ್ಯಾರೆಂಟಿ ಕಾರ್ಡ್‌ಗಳನ್ನು ವಿತರಿಸಿ ಬೆಲೆ ಏರಿಕೆಯಿಂದ ತತ್ತರಿಸಿದ ಸಾರ್ವಜನಿಕರಿಗೆ ಸ್ಪಂಧಿಸಲು ಘೋಶಿಸಿದ್ದೇವೆ ಎಂದರು. 

ಬಿಜೆಪಿ ಪದೇ ಪದೇ ಸಾರ್ವಜನಿಕರು ಉಪಯೋಗಿಸುವ ಎಲ್ಲ ವಸ್ತುಗಳ ಬೆಲೆ ಏರಿಕೆ ಮಾಡುತ್ತಿರುವುದರಿಂದ 2023ರ ವಿಧಾಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ಆಶೀರ್ವದಿಸಿ ಕಾಂಗ್ರೆಸ್ ಆದಿಕಾರಕ್ಕೆ ತರಲು ಕೋನರಡ್ಡಿ ಮನವಿ ಮಾಡಿದರು. 

ಈ ಸಂದರ್ಭದಲ್ಲಿ ಮಾಜಿ ಸಚಿವ ಕೆ.ಎನ್‌. ಗಡ್ಡಿ, ಧಾರವಾಡ ಜಿಲ್ಲಾ ಗ್ರಾಮೀಣ ಯುವ ಕಾಂಗ್ರೆಸ್ ಅಧ್ಯಕ್ಷ ವಿನೋದ ಅಸೂಟಿ, ಕೆಸಿಸಿ ಬ್ಯಾಂಕ ಮಾಜಿ ಅಧ್ಯಕ್ಷ ಬಾಪುಗೌಡ್ರ ಪಾಟೀಲ, ಕೆ.ಪಿ.ಸಿ.ಸಿ. ಸದಸ್ಯ ರಾಜಶೇಖರ ಮೆಣಸಿನಕಾಯಿ, ಜಿಲ್ಲಾ ಸೇವಾದಳದ ಅಧ್ಯಕ್ಷ ಚಂಬಣ್ಣ ಹಾಳದೋಟರ, ಮಲಪ್ರಬಾ ನೀರು ಬಳಕೆದಾರರ ಸಂಘದ ಅಧ್ಯಕ್ಷ ಸದುಗೌಡ ಪಾಟೀಲ, ನವಲಗುಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವರ್ಧಮಾನಗೌಡ ಹಿರೇಗೌಡ್ರ, ಎಸ್‌.ಸಿ. ಘಟಕದ ಅಧ್ಯಕ್ಷ ರಾಜು ದೊಡಮನಿ, ನವಲಗುಂದ ಪುರಸಭೆ ಅಧ್ಯಕ್ಷ ಮೊದೀನಸಾಬ ಶಿರೂರ, ನವಲಗುಂದ ಪುರಸಭೆ ಸದಸ್ಯರಾದ ಅಪ್ಪಣ್ಣ ಹಳ್ಳದ, ಜೀವನ ಪವಾರ,  ಪ್ರಕಾಶ ಶಿಗ್ಲಿ, ಮಂಜು ಜಾಧವ, ಶಿವಾನಂದ ತಡಸಿ,   ಹುಸೇನಬಿ ಧಾರವಾಡ, ಮುಖಂಡರಾದ ವಿಜಯಪ್ಪಗೌಡ ಪಾಟೀಲ, ನಾರಾಯಣ ರಂಗರಡ್ಡಿ, ಉಸ್ಮಾನ ಬಬರ್ಚಿ, ಮಾಂತೇಶಗೌಡ ಸಾಲಮನಿ, ಈರಣ್ಣ ಸಿಡಗಂಟಿ, ಪ್ರದೀಪ ಲೆಂಕನಗೌಡ್ರ, ಕುಮಾರ ಮಾದರ, ಬಾಬು ಚಾಂದಕೋಟಿ, ಕುಮಾರ ಕಲಾಲ, ಹನಮಂತ ಚಿಕ್ಕಣ್ಣವರ, ವೀರನಾರಾಯಣ ಬೆಂತೂರ,   ನಂದಿನಿ ಹಾದಿಮನಿ, ಸುಲೇಮಾನ ನಾಶಿಪುಡಿ, ಯಲ್ಲಪ್ಪ ಗಾಣಿಗೇರ, ಸಂಗಪ್ಪ ಮಾದರ, ಅಲ್ಲಾಸಾಬ ಕಲಕುಟ್ರಿ, ಮಲ್ಲಪ್ಪ ಗಡ್ಡಿ, ಶಿರಾಜ ದಾರವಾಡ, ಶಿವಾನಂದ ಚಿಕ್ಕನರಗುಂದ, ಬಾಶೇಸಾಬ ಹಂಚಿನಾಳ, ಮಂಜು ಬಾಳಿ, ಅಶ್ಪಾಕ ಚಾಹುಸೇನ, ಶಿವಾನಂದ ಚಲವಾದಿ ಮುಂತಾದವರು ಇದ್ದರು.