ಯರಗಟ್ಟಿ, 20 ; ಹೂಲಿ ಗ್ರಾಮವೂ ಅನೇಕ ಸಿದ್ಧರ ಪವಾಡುಗಳನ್ನು ಮಾಡಿದ ಗ್ರಾಮವಾಗಿದೆ. ಈ ಗ್ರಾಮದ ಜನರು ನಂಬಿಕೆಗೆ ಹೆಸರು ವಾಸಿಯಾಗಿದ್ದಾರೆ.ಡೊಳ್ಳಿನ ಹಾಡುಗಳನ್ನು ಹಾಡುವ ಹಾಲುಮತದ ಮೂಲ ಸಂಸ್ಕೃತಿಯಾಗಿದೆ. ಇದನ್ನು ಉಳಿಸಿ ಬೆಳೆಸುವಲ್ಲಿ ಇಂತಹ ಗಾಯನ ಸಂಘ ಪಾತ್ರ ಬಹುಮುಖ್ಯವಾಗಿದೆ ಆದ್ದರಿಂದ ಮೇಲಿಂದ ಮೇಲೆ ಇಂತಹ ಕಾರ್ಯಕ್ರಮಗಳು ನೆರವೇರಬೇಕಿದೆ ಎಂದು ಶಾಸಕ ವಿಶ್ವಾಸ ವೈದ್ಯ ಮಾತನಾಡಿದರು.
ಸಮೀಪದ ಹೂಲಿ ಗ್ರಾಮದ ಬೀರದೇವರ ಜಾತ್ರೆಯ ಕಾರ್ಯಕ್ರಮದಲ್ಲಿ ಡೊಳ್ಳಿನ ಪದಗಳ ಕಾರ್ಯಕ್ರಮ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಕಾಶಪ್ಪ ಕಾರ್ಲಕಟ್ಟಿ, ಮಾಜಿ ಗ್ರಾ. ಪಂ. ಅದ್ಯಕ್ಷರು ವಿರುಪಾಕ್ಷ ತೋರಗಲ್ಲ, ಗ್ರಾ. ಪಂ. ಉಪಾಧ್ಯಕ್ಷರಾದ ಯಲ್ಲಪ್ಪ ಕಾರ್ಲಕಟ್ಟಿ, ಸದಸ್ಯರಾದಗಂಗಪ್ಪ ಹಾಲಪ್ಪನವರ, ಸಿದ್ದಪ್ಪ ದಿಡಗಣ್ಣವರ, ಹಣಮಂತ ಗೋರವನಕೊಳ್ಳ, ಶೇಕಪ್ಪ ಕ ಪತ್ರಾವಳಿ, ಮಲ್ಲಿಕಾರ್ಜುನ ಗೋರಾಬಾಳ, ಸಿದ್ದಪ್ಪ ಮಾದ್ಲೂರ, ಅಶೋಕ ಕುಲಕರ್ಣಿ, ಸುನೀಲ ಪಾಟೀಲ, ವಿರುಪಾಕ್ಷ ಕಡಕೋಳ, ಹೂಲಿ ಗ್ರಾಮ ಪಂಚಾಯತಿ ಸರ್ವ ಸದಸ್ಯರು ಹಾಗೂ ಗ್ರಾಮದ ಹಿರಿಯರು, ಯುವಕರು ಮತ್ತಿತರರು ಉಪಸ್ಥಿತರಿದ್ದರು.20 ಯರಗಟ್ಟಿ 02ಪೋಟೋ ಶೀರ್ಷಿಕೆ