ಲೋಕದರ್ಶನ ವರದಿ
ವಿಜಯಪುರ 24: ಮುಂಬರುವ ಲೋಕಸಭೆಯಲ್ಲಿ ಯುಪಿಎ ನೇತೃತ್ವ ಸಕರ್ಾರ ರಚನೆಗೆ ಶ್ರಮಿಸಲು ಕಾರ್ಯಕರ್ತರ ಹಗಲಿರುಳು ದುಡಿಯಬೇಕು ಎಂದು ಕೆಪಿಸಿಸಿ ರಾಜ್ಯ ಕಾರ್ಯದಶರ್ಿ ಹಾಗೂ ಎಐಸಿಸಿ ಸದಸ್ಯ ಕಾಂತಾ ನಾಯಕ ಹೇಳಿದರು.
ಸಿಂದಗಿಯ ಪ್ರವಾಸಿ ಮಂದಿರದಲ್ಲಿ ಭಾನುವಾರ ವಿಜಯಪುರದಲ್ಲಿ ಫೆ.27 ರಂದು ನಡೆಯಲಿರುವ ಬೃಹತ್ ಕಾಂಗ್ರೆಸ ಜಿಲ್ಲಾಮಟ್ಟದ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ ಐದು ವರ್ಷದಲ್ಲಿ ಒಂದಾದದ ಮೇಲೆ ಒಂದು ಸುಳ್ಳು ಹೇಳುವುದರಲ್ಲಿ ನರೇಂದ್ರ ಮೋದಿ ಸಮಯ ಕಳೆದಿದ್ದಾರೆ.
ಯುವಜನರಿಗೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿದ್ದರು ಯಾವುದೂ ಈಡೇರಿಸಲಿಲ್ಲ. ಅವರು ಭರವಸೆ ನೀಡಿ ಜನರಿಗೆ ಮೋಸ ಮಾಡಿದ್ದಾರೆ. ಸುಳ್ಳು ಮಾತುಗಳು ಜನರ ಮುಂದೆ ಇಡಲು ಕಾಂಗ್ರೆಸ್ ನ ಬೂತ್ ಮಟ್ಟದ ಕಾರ್ಯಕರ್ತರು ಸಿದ್ಧರಾಗಬೇಕು ಎಂದು ತಿಳಿಸಿದರು. ಫೆ.27ಕ್ಕೆ ಸಮಾವೇಶ
ವಿಜಯಪುರದಲ್ಲಿ ಫೆ.27 ರಂದು ನಡೆಯಲಿರುವ ಜಿಲ್ಲಾ ಮಟ್ಟದ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಚಿವ ಎಚ್.ಕೆ ಪಾಟೀಲ ಸೇರಿದಂತೆ ಮುಂತಾದ ಗಣ್ಯರು ಈ ಸಮಾವೇಶದಲ್ಲಿ ಪಾಲ್ಗೊಂಡು ಕಾಂಗ್ರೆಸ ಅಭ್ಯಥರ್ಿ ಗೆಲುವಿಗಾಗಿ ಶ್ರಮಿಸಲಿದ್ದಾರೆ ಎಂದು ತಿಳಿಸಿದರು.
ಕಾಂಗ್ರೆಸ ಮುಖಂಡ ಲಿಂಗಣ್ಣ ಗೊಬ್ಬುರ್ ಮಾತನಾಡಿ, ವಿಜಯಪುರದಲ್ಲಿ ನಡೆಯಲಿರುವ ಸಮಾವೇಶದಲ್ಲಿ ನಮ್ಮ ಪ್ರತಿಯೊಬ್ಬ ಕಾರ್ಯಕರ್ತರು ಭಾಗವಹಿಸಿ, ರಾಹುಲ್ ಗಾಂಧಿಯವರನ್ನು ಪ್ರಧಾನಿಯಾಗಿ ಮಾಡಲು ಪಕ್ಷದ ಕೈ ಬಲಪಡಿಸಬೇಕು ಎಂದು ಹೇಳಿದರು. ಮುಂಡರಾದ ರಾಜು ಪೂಜಾರಿ, ವಿಠ್ಠಲ್ ಕೋಳೂರ ಶ್ರೀನಿವಾಸ್ ಪೂಜಾರಿ, ಮೊಹಮದ್ ಆಸೀಫ್ ಆಳಚಿದ್ ಮುಂತಾದವರು ಭಾಗವಹಿಸಿದ್ದರು.