ಸರಣಿ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು; ಐವರು ಅರೆಸ್ಟ್
Police crack serial theft case; five arrested
ಲೋಕದರ್ಶನ ವರದಿ
ಬಾಗಲಕೋಟೆ 15 : ಕಲಾದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಜ್ಯುವೆಲ್ಲರಿ ಶಾಪ್ ಮತ್ತು ಹಾರ್ಡ್ವೇರ್ ಅಂಗಡಿ ಕಳ್ಳತನ ಹಾಗೂ ಜಬರಿ ಕಳ್ಳತನ ಪ್ರಕರಣಗಳನ್ನು ಭೇದಿಸಿರುವ ಪೊಲೀಸರು, ಐವರು ಆರೋಪಿಗಳನ್ನು ಬಂಧಿಸಿ ಅವರಿಂದ ರೂ7.80 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ನವನಗರದ ಬಾಂಬೆ ಕಾಲೋನಿಯ ಚಾಂದಬಾಷಾ ಕಾಶೀಮಸಾಬ ಚಿತ್ತಾಪೂರ, ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಚಿಂಚಲದ ಮಾರುತಿ ಅಲಿಯಾಸ್ ರಾಜಾ ಯಲ್ಲಪ್ಪ, ಕಲಾದಗಿಯ ಮಹಮ್ಮದಕೈಫ್ ರಾಜೇಸಾಬ ಕಲಾದಗಿ, ರಿಯಾಜಸಹೃದ ರಾಜೇಸಾಬ ಮಕಾನದಾರ ಹಾಗೂ ಮುಧೋಳ ತಾಲೂಕಿನ ಬದನೂರಿನ ಹನಮಂತ ವಿಠಲ ಹರಿಜನ ಬಂಧಿತ ಆರೋಪಿಗಳು.
ಘಟನೆಯ ವಿವರ:
ಜೂನ್ 29ರಂದು ಕಲಾದಗಿಯ ಸಿಮಿಕೇರಿ ಬೈಪಾಸ್ ಹತ್ತಿರದ ಮೌನೇಶ್ವರ ಜ್ಯುವೆಲ್ಲರಿ ಶಾಪ್ ಹಾಗೂ ಜೂನ್ 19ರಂದು ಕಲಾದಗಿ ಗ್ರಾಮದ ಹಾರ್ಡ್ವೇರ್ ಅಂಗಡಿಯಲ್ಲಿ ಕಳ್ಳತನ ನಡೆದಿತ್ತು. ಅಲ್ಲದೆ, ಜೂನ್ 30ರಂದು ಕೆರೂರ ಠಾಣಾ ವ್ಯಾಪ್ತಿಯಲ್ಲಿ ಜಬರಿ ಕಳ್ಳತನ ಪ್ರಕರಣ ನಡೆದಿತ್ತು. ಈ ಕುರಿತು ಪ್ರಕರಣಗಳು ದಾಖಲಾಗಿದ್ದವು. ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯೆಲ್ ಅವರ ಮಾರ್ಗದರ್ಶನದಲ್ಲಿ, ಗ್ರಾಮೀಣ ವೃತ್ತದ ಸಿಪಿಐ ಆರ್.ಎಸ್. ಬಿರಾದಾರ ಮತ್ತು ಕಲಾದಗಿ ಪಿಎಸ್‌ಐ ಪ್ರವೀಣ ಬೀಳಗಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತು. ಗದ್ದನಕೇರಿ ಕ್ರಾಸ್ ಬಳಿ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕೃತ್ಯಗಳು ಬೆಳಕಿಗೆ ಬಂದಿವೆ.
ವಶಪಡಿಸಿಕೊಂಡ ವಸ್ತುಗಳು:
ಆರೋಪಿಗಳ ವಶದಿಂದ 2,500 ಗ್ರಾಂ ಬೆಳ್ಳಿಯ ಆಭರಣಗಳು, ಕಳ್ಳತನಕ್ಕೆ ಬಳಸಿದ್ದ ಎರಡು ಮೋಟಾರ್ ಸೈಕಲ್ಗಳು, ಹಾರ್ಡ್ವೇರ್ ಸಾಮಗ್ರಿಗಳು ಮತ್ತು ಒಂದು ಮೊಬೈಲ್ ಫೋನ್ ಸೇರಿದಂತೆ ಒಟ್ಟು ರೂ7.80 ಲಕ್ಷ ಮೌಲ್ಯದ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಸಿಬ್ಬಂದಿಯ ಕಾರ್ಯವನ್ನು ಶ್ಲಾಘಿಸಿರುವ ಎಸ್ಪಿ ಸಿದ್ದಾರ್ಥ ಗೋಯೆಲ್, ತಂಡಕ್ಕೆ ನಗದು ಬಹುಮಾನ ಘೋಷಿಸಿದ್ದಾರೆ. ಎಎಸ್‌ಐ ಎಮ್.ಬಿ. ಬಳಬಟ್ಟಿ, ಸಿಬ್ಬಂದಿಗಳಾದ ಸಿ.ವಾಯ್. ಭಜಂತ್ರಿ, ಗದ್ದೆಪ್ಪ ಎ.ಎಂ., ಎಸ್.ಕೆ. ಕುರಿ, ಸಿ.ಎಸ್. ತಳವಾರ, ಪ್ರದೀಪ್ ಪಾಟೀಲ, ಎಸ್.ಕೆ. ಕಡಲ, ಬಿ.ಆರ್. ಮುರನಾಳ, ಬಿ.ಸಿ. ರಾಠೋಡ ಹಾಗೂ ಜಿಲ್ಲಾ ಗಣಕಯಂತ್ರ ವಿಭಾಗದ ಬಸವರಾಜ ಜಗಲಿ ಅವರು ಕಾರ್ಯಾಚರಣೆಯಲ್ಲಿದ್ದರು.
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ
ಬಿಗಿ ಭದ್ರತೆಯ ನಡುವೆ 6,200ಕ್ಕೂ ಹೆಚ್ಚು ಅಮರನಾಥ ಯಾತ್ರಿಕರು ಜಮ್ಮುವಿನಿಂದ ಪ್ರಯಾಣ ಬೆಳೆಸಿದರು
ಬೆಳಗಾವಿಯ ಜಿಮಖಾನಾ ಕ್ಲಬ್ನಲ್ಲಿ ಗುಂಡಿನ ದಾಳಿ; ವ್ಯಕ್ತಿ ಅದೃಷ್ಟವಶಾತ್ ಪಾರು
ವಾರಾಣಸಿಯ 27 ವರ್ಷದ ಯುವಕನಿಗೆ ಕೋವಿಡ್-19 ದೃಢ; ಬಿಎಚ್ಯು ಆಸ್ಪತ್ರೆಗೆ ದಾಖಲಾತಿ 