ಯೋಜಿತ ಕುಟುಂಬ ಯೋಜನೆಯಿಂದ ಸುಂದರ ಭವಿಷ್ಯ ಡಿಎಚ್‌ಒ ಡಾ. ಸಂಪತ್ತಕುಮಾರ ಗುಣಾರಿ ಅಭಿಮತ

ಯೋಜಿತ ಕುಟುಂಬ ಯೋಜನೆಯಿಂದ ಸುಂದರ ಭವಿಷ್ಯ ಡಿಎಚ್‌ಒ ಡಾ. ಸಂಪತ್ತಕುಮಾರ ಗುಣಾರಿ ಅಭಿಮತ Planned family planning leads to a beautiful future: DHO Dr. Sampathkumar Gunari's view

ಲೋಕದರ್ಶನ ವರದಿ 

ವಿಜಯಪುರ 14: ತಾಯಿ ಮರಣ ಪ್ರಮಾಣ ಮತ್ತು ತೊಂದರೆ ತಡೆಗಟ್ಟುವುದು  ವಿಶ್ವ ಜನಸಂಖ್ಯೆ  ದಿನಾಚರಣೆಯ ಉದ್ದೇಶವಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ. ಸಂಪತ್ತ ಗುಣಾರಿ, ಹೇಳಿದರು. ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿರುವ ನಸಿಂರ್ಗ್ ಕಾಲೇಜಿನ ಆವರಣದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮವನ್ನು ದ್ದೇಶಿಸಿ ಅವರು ಮಾತನಾಡಿದರು. ಆರೋಗ್ಯಕರ ಸಮಯದಲ್ಲಿ ಗರ್ಭಧಾರಣೆ ಹಾಗೂ ಮಕ್ಕಳ ನಡುವೆ ಆರೋಗ್ಯಕರ ಅಂತರ ಕಾಪಾಡುವವರಿಂದ ತಾಯಿ ಮತ್ತು ಮಕ್ಕಳ ಆರೋಗ್ಯ ವೃದ್ಧಿಸುವದರೊಂದಿಗೆ ಅನಗತ್ಯ ಗರ್ಭಧಾರಣೆಯನ್ನು ತಡೆಗಟ್ಟಬಹುದಾಗಿದೆ ಎಂದ ಅವರು, ಮಹಿಳೆಯರ ಸಂತಾನೋತ್ಪತ್ತಿ ಆರೋಗ್ಯದ ಗುಣಮಟ್ಟ ಸುಧಾರಣೆ ಗರ್ಭಧಾರಣೆಗೆ ಆರೋಗ್ಯಕರ ಸಮಯ ಮತ್ತು ಗರ್ಭಧಾರಣೆಗಳ ನಡುವಿನ ಅಂತರವನ್ನು ಉತ್ತೇಜಿಸಬೇಕಿದೆ ಎಂದರು. 

ಭಾರತ ಸ್ವಾತಂತ್ರ್ಯ ಪಡೆದುಕೊಂಡಾಗ ದೇಶದ ಜನಸಂಖ್ಯೆ ಕೇವಲ 33 ಕೋಟಿ ಇತ್ತು. ಕಳೆದ 79 ವರ್ಷಗಳಲ್ಲಿ ಜನಸಂಖ್ಯೆಯ ವಿಷಯದಲ್ಲಿ ಹಲವು ಮಹತ್ವದ ಬದಲಾವಣೆ ಮಾಡಲಾಗಿದೆ. ಪ್ರಸ್ತುತ ಭಾರತ ಜನಸಂಖ್ಯೆ 144 ಕೋಟಿಗೂ ಅಧಿಕ ಜನಸಂಖ್ಯೆ ಹೊಂದಿದೆ. ಆದ್ದರಿಂದ ವಿಶ್ವದಲ್ಲಿ ಅತ್ಯಧಿಕ ಜನಸಂಖ್ಯೆ ಹೊಂದಿದ ರಾಷ್ಟ್ರವಾಗಿ ಹೊರಹೊಮ್ಮಿದೆ. ಆದರೆ ಇತ್ತಿಚಿನ ವರ್ಷಗಳಲ್ಲಿ ಭಾರತ ದೇಶದ ಜನನ ದರ 1.94 ಕ್ಕೆ ಕುಸಿದಿದೆ. ಇದು ಭವಿಷ್ಯದಲ್ಲಿ ಜನಸಂಖ್ಯೆಯ ಆಸಮತೋಲನಕ್ಕೆ ಕಾರಣವಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು. ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ. ಶಿವಾನಂದ ಮಾಸ್ತಿಹೊಳಿ ಮಾತನಾಡಿ, ವೃದ್ಧರ ಸಂಖ್ಯೆ ಹೆಚ್ಚಳಗೊಂಡು ದುಡಿಯುವ ಕೈಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಇದು ಮುಖ್ಯವಾಗಿ ದೇಶಕ್ಕೆ ಆರ್ಥಿಕ ದೃಷ್ಟಿಯಿಂದ ಅಪಾಯವಾಗುತ್ತದೆ ಎಂದರು.