ಉ.ಕೆ ಜಿಲ್ಲೆ ಸ್ಥಳೀಯ ಸಂಸ್ಥೆಗಳಿಗೆ ಶಾಂತಿಯುತ ಮತದಾನ 3.08 ರಷ್ಟು ಮತದಾನದಲ್ಲಿ 48.08 ಮತದಾನ


ಲೋಕದರ್ಶನ ವರದಿ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ 8 ಸ್ಥಳೀಯ ಸಂಸ್ಥೆಗಳಿಗೆ ಶಾಂತಿಯುತ ಮತದಾನ ನಡೆದಿದೆ. ಎಲ್ಲಿಯೂ ಅಹಿತಕರ ಘಟನೆ ವರದಿಯಾಗಿಲ್ಲ. ಕಾರವಾರ ನಗರಸಭೆಯ 31 ವಾರ್ಡಗಳಿಗೆ ಮತದಾನ ಶಾಂತಿಯುತವಾಗಿ ಮುಂದುವರಿದಿದೆ. 

ಮಳೆ ಸಹ ಇಲ್ಲದ ಕಾರಣ ಮತದಾನಕ್ಕೆ ಸಹಕಾರಿಯಾಯಿತು. ಜನರು ನಿಧಾನಕ್ಕೆ ಮತಗಟ್ಟೆಗೆ ಬಂದು ಮತ ಚಲಾಯಿಸಿದರು. ಸಾಲುಗಟ್ಟಿ ನಿಂತು ಮತಚಲಾವಣೆಗೆ ಮುಂದಾಗಿಲ್ಲ. ಬಹುತೇಕ ವಾರ್ಡಗಳಲ್ಲಿ ಜನರು ನಿಧಾನಗತಿಯಲ್ಲೇ ಮತ ಚಲಾಯಿಸಲು ಆಗಮಿಸಿದರು. ಕಾಂಗ್ರೆಸ್, ಬಿಜೆಪಿ ,ಜೆಡಿಎಸ್ ಹಾಗೂ ಪಕ್ಷೇತರ ಅಭ್ಯಥರ್ಿಗಳು ಮತ ಗಟ್ಟೆಯಿಂದ ದೂರದಲ್ಲಿ ಟೇಬಲ್ಗಳನ್ನು ಹಾಕಿ ಮತದಾರರ ಸಂಖ್ಯೆ ಬರೆದುಕೊಡುವ ಕಾಯಕದಲ್ಲಿ ನಿರತರಾಗಿದ್ದರು. ನಗರದ 55 ಮತಗಟ್ಟೆಗಳಲ್ಲಿ ಸಹ ಶಾಂತಿಯುತ ಮತದಾನ ನಡೆದಿತ್ತು. 

ಪಕ್ಷ ಸಂಘಟಕರ ಟೇಬಲ್ಬಳಿ ಉತ್ಸಾಹ:

ಬಿಜೆಪಿ ಮತ್ತು ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಸಂಘಟಕರು ಮತಗಟ್ಟೆಗಳಿಂದ 100 ಮೀಟರ್ಗೂ ಹೆಚ್ಚಿನ ಅಂತರದಲ್ಲಿ ಟೇಬಲ್ ಹಾಕಿ ಮತದಾರರಿಗೆ ನೆರವಾಗುವ ರೀತಿಯಲ್ಲಿ ಮತಸಂಖ್ಯೆಗಳನ್ನು ಹುಡುಕಿಕೊಡುವ ಕ್ರಿಯೆ ಕಂಡು ಬಂತು. ಎಲ್ಲಾ ವಾರ್ಡಗಳಲ್ಲಿ ಮತಗಳನ್ನು ಸೆಳೆಯಲು ಕೊನೆಯತನಕ ಪ್ರಯತ್ನಿಸಿದ್ದು, ಟೇಬಲ್ಗಳ ಅಭ್ಯಥರ್ಿಗಳ ಚಿತ್ರ ಹಾಗೂ ಚಿಹ್ನೆ ಹಾಕಿ ಮತದಾರರಿಗೆ ಮನವರಿಕೆ ಮಾಡಿಕೊಡುತ್ತಿದ್ದ ದೃಶ್ಯಗಳು ಕಂಡು ಬಂದವು. ಅತ್ಯಂತ ವಿನೀತ ಭಾವದಿಂದ ಮತಯಾಚನೆ ಮಾಡಿದ ದೃಶ್ಯಗಳು ಸಹ ಕಂಡು ಬಂದವು. ನಗರದಲ್ಲಿ ತ್ರಿಕೋನ ಸ್ಪಧರ್ೆ ಇದ್ದು, ಕೆಲವು ವಾರ್ಡಗಳಲ್ಲಿ ಪಕ್ಷೇತರರು ಪ್ರಬಲರಾಗಿದ್ದು, ಅತಂತ್ರ ನಗರಸಭೆ ಸೃಷ್ಟಿಯಾಗಬಹುದೆಂಬ ಲೆಕ್ಕಾಚಾರವಿದೆ. ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಬರಲಾರದು. ಅಲ್ಲದೇ ಹೊಸ ಮುಖಗಳಿಗೆ ನಗರದ ಜನತೆ ಮಣೆಹಾಕಿದ್ದಾರೆ ಎಂಬ ಚಚರ್ೆಗಳು ಮತದಾನದ ವೇಳೆ ಸಹ ನಡೆದವು.

ಎಲ್ಲೆಲ್ಲಿ ಎಷ್ಟು ಪ್ರಮಾಣದ ಮತದಾನ:

ಬೆಳಗಿನ 7 ರಿಂದ 9 ಗಂಟೆಯ ವರೆಗೆ ಕಾರವಾರ ನಗರಸಭೆಗೆ ಶೇ.8.57 ರಷ್ಟು ಮತದಾನವಾಗಿತ್ತು. ಶಿರಸಿಯಲ್ಲಿ ಶೇ.9.74, ದಾಂಡೇಲಿಯಲ್ಲಿ ಶೇ.10.78, ಅಂಕೋಲಾ ಪುರಸಭೆಗೆ ಶೇ.9.93, ಕುಮಟಾ 11.57, ಹಳಿಯಾಳದಲ್ಲಿ 12.80, ಮುಂಡಗೋಡ ಪಟ್ಟಣ ಪಂಚಾಯತ್ಗೆ 13.11 ಯಲ್ಲಾಪುರದಲ್ಲಿ 11.90 ರಷ್ಟು ಮತದಾನವಾಗಿತ್ತು. ಮಧ್ಯಾಹ್ನ 3 ಗಂಟೆಯ ವೇಳೆಗೆ  ಕಾರವಾರ ನಗರಸಭೆಗೆ ಶೇ. 43.33 ರಷ್ಟು ಮತದಾನವಾಗಿತ್ತು. ಶಿರಸಿ ನಗರಸಭೆಗೆ  ಶೇ.9. 44.51 , ದಾಂಡೇಲಿಯಲ್ಲಿ ಶೇ.47.39, ಅಂಕೋಲಾ ಪುರಸಭೆಗೆ ಶೇ.54.04, ಕುಮಟಾ ಪುರಸಭೆಗೆ 52.16 , ಹಳಿಯಾಳದಲ್ಲಿ 60.63, ಮುಂಡಗೋಡ ಪಟ್ಟಣ ಪಂಚಾಯತ್ಗೆ 61.35, ಯಲ್ಲಾಪುರದಲ್ಲಿ 53.16  ರಷ್ಟು, ಮತದಾನವಾಗಿತ್ತು. ಮಧ್ಯಾಹ್ನ 3 ಗಂಟೆಯ ಸಮಯಕ್ಕೆ ಜಿಲ್ಲೆಯಲ್ಲಿ ಒಟ್ಟು ಶೇ.49.08 ರಷ್ಟು ಮತದಾನವಾಗಿತ್ತು.