ಪಂಡಿತ ದೀನದಯಾಳ ಉಪಾಧ್ಯಾಯ ಅಧ್ಯಯನ ಪೀಠದ ಸಲಹಾ ಸಮಿತಿ ಸಭೆ

ಲೋಕದರ್ಶನ ವರದಿ

ಬೆಳಗಾವಿ, 3: ರಾಣಿಚನ್ನಮ್ಮ ವಿಶ್ವವಿದ್ಯಾಲಯದ ಪಂಡಿತ ದೀನದಯಾಳ ಉಪಾಧ್ಯಾಯ ಅಧ್ಯಯನ ಪೀಠದಲ್ಲಿ ದ್ವೀತಿಯ ಸಲಹಾ ಸಮಿತಿ ಸಭೆಯನ್ನು ದಿನಾಂಕ 03.05.2019 ರಂದು ಏರ್ಪಡಿಸಲಾಗಿತ್ತು. 

ಸಭೆಯಲ್ಲಿ ಪಂಡಿತ ದೀನದಯಾಳ ಉಪಾಧ್ಯಾಯ ಅಧ್ಯಯನ ಪೀಠವನ್ನು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಉದ್ಘಾಟನೆ ಮಾಡುವದರ ಕುರಿತು ಚಚರ್ಿಸಲಾಯಿತು, ಗ್ರಾಮೀಣ ನಿರುದ್ಯೋಗಿ ಯುವಕರಿಗೆ ಪಂಡಿತ ದೀನದಯಾಳ ಉಪಾಧ್ಯಾಯ ಅಧ್ಯಯನ ಪೀಠದ ವತಿಯಿಂದ ತರಬೇತಿ ನಿಡುವದರ ಮೂಲಕ ಉದ್ಯೋಗ ಅವಕಾಶ ಕಲ್ಪಿಸಿಕೊಡುವುದರ ಬಗ್ಗೆ ತೀಮರ್ಾನಿಸಲಾಯಿತು. ಅಲ್ಲದೇ ಪಂಡಿತ ದೀನದಯಾಳ ಉಪಾಧ್ಯಾಯರವರ ಜೀವನತತ್ವ ಸಿದ್ದಾಂತಗಳಿಗೆ ಸಂಬಂದಿಸಿದಂತೆ ಪ್ರಬಂಧಗಳನ್ನು ಪ್ರಕಟಿಸುವುದರ ಬಗ್ಗೆ ಆಲೋಚಿಸಲಾಯಿತು ಹಾಗೂ ಪಂಡಿತ ದೀನದಯಾಳ ಉಪಾಧ್ಯಾಯ ಅಧ್ಯಯನ ಪೀಠದ ಸಂಯೋಜಕರಾದ ಡಾ. ಮಹಾಂತೇಶ ಕುರಿ, ಇವರು ಪಂಡಿತ ದೀನದಯಾಳ ಉಪಾಧ್ಯಾಯ ಅಧ್ಯಯನ ಪೀಠದ   2019-20 ನೇ ಸಾಲಿನ ಕ್ರಿಯಾಯೋಜನೆಯನ್ನು ಮಂಡಿಸಿದರು ಹಾಗೂ ಸಭೆಯ ಸರ್ವಸದಸ್ಯರು ಸುದೀರ್ಘ ಚಚರ್ೆಯ ನಂತರ ಅನುಮೋದನೆಯನ್ನು ವ್ಯಕ್ತಪಡಿಸಿದರು.

ಸದರಿ ಸಭೆಗೆ ದೀನದಯಾಳ ಶೋಧ ಸಂಸ್ಥಾನ ದೆಹಲಿಯ ಪ್ರಧಾನ ಕಾರ್ಯದಶರ್ಿಗಳಾದ ಅತುಲ ಜೈನ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಶಿವಾನಂದ ಬಿ. ಹೊಸಮನಿ, ಕುಲಸಚಿವರಾದ ಪ್ರೊ. ಸಿದ್ದು ಪಿ. ಆಲಗೂರ, ಸಿಂಡಿಕೇಟ ಸದಸ್ಯರಾದ ಬಸವರಾಜ ಎನ್. ಚಿಕ್ಕನಗೌಡರ,  ವಿಜಯ ಕುಚನೂರೆ, ಎಕ್ಸಿಕ್ಯೂಟಿವ್ ಕೌನ್ಸಿಲ್ ಸದಸ್ಯರು, ವಿ.ಟಿ.ಯು, ಗೋಪಾಲ ಆರ್ಯ ಪಂಡಿತ ದೀನದಯಾಳ ಉಪಾಧ್ಯಾಯ ಅಧ್ಯಯನ ಪೀಠದ ಸಂಯೋಜಕರಾದ ಡಾ. ಮಹಾಂತೇಶ ಎಮ್. ಕುರಿ, ಅಧ್ಯಯನ ಪೀಠದ ಸಹಾಯಕ ಪ್ರಾಧ್ಯಾಪಕರಾದ ಡಾ.ಶಂಕರರಾವ್ ಮಗರ ಹಾಗೂ ಸಹ ಸಂಶೋಧಕರಾದ ಬೋರಪ್ಪಾ ಪಾಟೀಲ, ಹಾಜರಿದ್ದರು.