ಕ್ರಿಕೆಟ್ ನಿವೃತ್ತಿ ಘೋಷಿಸಿದ ಪಾಕಿಸ್ತಾನದ ಸ್ಚಾರ್ ಆಟಗಾತರ್ಿ

ಇಸ್ಲಾಮಾಬಾದ್ 21: ಧಾಮರ್ಿಕತೆಗಾಗಿ ಪಾಕಿಸ್ತಾನದ ಸ್ಚಾರ್ ಆಟಗಾತರ್ಿಯೊಬ್ಬರು ಕ್ರಿಕೆಟ್ ಅನ್ನೇ ತ್ಯಜಿಸಲು ಮುಂದಾಗಿದ್ದಾರೆ. 

ಹೌದು.. ಪಾಕಿಸ್ತಾನ ಮಹಿಳಾ ಕ್ರಿಕೆಟ್ ತಂಡದ ಸ್ಠಾರ್ ಆಟಗಾತರ್ಿ ಆಯೇಶಾ ನಸೀಮ್ ತನ್ನ 18ನೇ ವಯಸ್ಸಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದು, ತನ್ನ ಮುಂದಿನ ಬದುಕನ್ನು ಇಸ್ಲಾಂ ಧರ್ಮಕ್ಕಾಗಿ ಮೀಸಲಿಡುತ್ತೇನೆ ಎಂದು ಹೇಳಿದ್ದಾರೆ. 'ನಾನು ಇನ್ಮುಂದೆ ಇಸ್ಲಾಮಿಕ್ ಧರ್ಮದಂತೆಯೇ ಬದುಕುತ್ತೇನೆ, ಇಸ್ಲಾಮಿಕ್ ತತ್ವ ಬೋಧನೆಯನ್ನ ಅನುಸರಿಸುತ್ತೇನೆ ಎಂದು ಹೇಳಿರುವ ಆಯೇಶಾ ನಸೀಮ್, ನಾನು ಕ್ರಿಕೆಟ್ ಆಟ ತ್ಯಜಿಸುತ್ತಿದ್ದೇನೆ ಮತ್ತು ಇಸ್ಲಾಂ ಧರ್ಮದ ಪ್ರಕಾರ ನನ್ನ ಜೀವನವನ್ನು ನಡೆಸಲು ಬಯಸುತ್ತೇನೆ' ಎಂದು ಹೇಳಿದ್ದಾರೆ. 

ಆರಂಭಿಕ ಹಂತದಿಂದಲೇ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದ ಆಯೇಶಾ, ಮುಂದೆ ತಂಡ ನಾಯಕತ್ವ ವಹಿಸುವ ಭರವಸೆ ಮೂಡಿಸಿದ್ದರು. ಇದೀಗ ನಿವೃತ್ತಿ ಘೋಷಿಸಿ ನಿರಾಸೆ ಮೂಡಿಸಿದ್ದಾರೆ. ನಸೀಮ್ ಅವರು ಇಸ್ಲಾಂ ಧರ್ಮದ ಪ್ರಕಾರ ತಮ್ಮ ಜೀವನವನ್ನು ನಡೆಸುವ ಕಾರಣದಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ. ಈ ವಿಚಾರವಾಗಿ  ನಸೀಮ್ ಪಾಕಿಸ್ತಾನ ಕ್ರಿಕೆಟ್ ಬೋಡರ್್ಗೂ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.