ವಿದ್ಯೆಯನ್ನು ಯಾರಿಂದಲೂ ಕದಿಯಲು ಸಾಧ್ಯವಿಲ್ಲ

ಲೋಕದರ್ಶನ ವರದಿ

ಮೋಳೆ 05: ಹಿಂದಿನ ಕಾಲದಲ್ಲಿ ಆಸ್ತಿಯ ವ್ಯಾಮೋಹ, ಹಣಗಳಿಕೆ ವ್ಯಾಮೋಹ ಹೆಚ್ಚಾಗಿತ್ತು. ಆದರೆ ಪ್ರಚಲಿತ ದಿನಮಾನಗಳಲ್ಲಿ ವಿದ್ಯೆಯೇ ಸರ್ವ ಸಾಧನ ಎಂದು ಅರಿತಿರುವ ಪೋಷಕರು ಮಕ್ಕಳಿಗೆ ವಿದ್ಯೆಯನ್ನು ಕಲಿಸಲು ಪ್ರೇರೆಪಿಸುತ್ತಿದ್ದಾರೆ ಎಂದು   ಪಟ್ಟಣ ಪಂಚಾಯತ್ ಉಪಾಧ್ಯಕ್ಷ ರವೀಂದ್ರ ಗಾಣಿಗೇರ ಹೇಳಿದರು.

    ಅವರು ಮಂಗಳವಾರ ದಿ.5 ರಂದು ಐನಾಪುರ ಸರಕಾರಿ ಉದರ್ು ಹಿರಿಯ ಪ್ರಾಥಮಿಕ ಶಾಲಾ ಕಟ್ಟವನ್ನು ಉದ್ಘಾಟಿಸಿ  ಮಾತನಾಡಿದ ಅವರು ಮನುಷ್ಯನ ಆಸ್ತಿಯನ್ನು, ಹಣವನ್ನು ಯಾರು ಬೇಕಾದರೂ ದೋಚಬಹುದು. ಆದರೆ ವಿದ್ಯೆಯನ್ನು ಯಾರಿಂದಲೂ ಕದಿಯಲು ಸಾಧ್ಯವಿಲ್ಲ. ಹಾಗೆಯೇ ನಮ್ಮ ದೇಶದಲ್ಲಿ ಅತೀ ಬಡತನದಲ್ಲಿ ಹುಟ್ಟಿ ಸಾಧನೆಗೈದು ದೇಶದ ಮಹಾನ್ ನಾಯಕರಾಗಿ ಮೆರೆದಂತಹ ಶಾಸ್ತ್ರಿಜಿ, ರಾಧಾಕೃಷ್ಣನ್,ಕಲಾಂರವರ ಕಥೆಗಳನ್ನು ಮಾದರಿಯಾಗಿ ನೀಡಿದರು.

  ಕಳೆದ ಹಲವಾರು ವರ್ಷಗಳಿಂದ ಉದರ್ು ಶಾಲೆಗೆ ಕಟ್ಟಡದ ಅಭಾವತೆ ಇತ್ತು ಈ ಕುರಿತು ಶಿಕ್ಷಣ ಇಲಾಖೆಗೆ ಮನವಿ ಮಾಡಿಕೊಂಡಾಗ ಎರಡು ಶಾಲಾ ಕೊಠಡಿಗಳನ್ನು ಮಂಜೂರುಗೊಳಿಸಿದ್ದು, ಉತ್ತಮವಾಗಿ ಶಾಲಾ ಕಟ್ಟಡಗಳು ನಿರ್ಮಾಣಗೊಂಡಿವೆ, ಅದರ ಅಂದ ಕೆಡದ ಹಾಗೆ ನೋಡಿಕೊಳ್ಳಬೇಕೆಂದು ರವೀಂದ್ರ ಗಾಣಿಗೇರ ಹೇಳಿದರು. ಈ ವೇಳೆ ಶಾಲಾ ಸುಧಾರಣಾ ಸಮೀತಿಯ ಅಧ್ಯಕ್ಷ ಜಾವೇದ ಡಾಂಗೆ, ಉಪಾಧ್ಯಕ್ಷ ಸೈಫಾನ ಶೇಖ,  ಮುಖ್ಯೋಪಾದ್ಯಾಯ ವೈ.ಬಿ. ಮುಲ್ಲಾ. ಮುಖಂಡರಾದ ಬಾದಷಹಾ ಡಾಂಗೆ, ಬಂದೇನವಾಜ ಸೈಯ್ಯದ, ಮೌಲಾ ನದಾಫ, ಮುಸಾ ಸೈಯ್ಯದ, ರಿಜ್ವಾನ ಮುಜಾವರ, ಇಲಾಹಿ ಸೈಯ್ಯದ, ಮೆಹಬೂಬ್ ಮುಲ್ಲಾ, ರಾಜು ಸೈಯ್ಯದ, ರಫೀಕಸೈಯ್ಯದ, ಬಾಳು ನದಾಫ,ಇಸ್ಮಾಯಿಲ್ ರಾವತ್, ಸೇರಿದಂತೆ ಅನೇಕ ಅಲ್ಪಸಂಖ್ಯಾತ ಮುಖಂಡರು ಪಾಲ್ಗೊಂಡಿದ್ದರು. 

  ಮುಖ್ಯೋಪಾದ್ಯಾಯ ವೈ.ಬಿ. ಮುಲ್ಲಾ ಸ್ವಾಗತಿಸಿ ವಂದಿಸಿದರು.