ಇಂದಿನಿಂದ ರಾಷ್ಟ್ರ ಮಟ್ಟದ ಕಬ್ಬಡ್ಡಿ ಪಂದ್ಯಾವಳಿ

National level kabaddi tournament from today

ಇಂದಿನಿಂದ ರಾಷ್ಟ್ರ ಮಟ್ಟದ ಕಬ್ಬಡ್ಡಿ ಪಂದ್ಯಾವಳಿ  

ಬೀಳಗಿ 20: ತಾಲೂಕಿನ ಪ್ರತಿಷ್ಠಿತ ಬ್ಯಾಂಕ್ ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕ್ ನಿಯಮಿತ, ಬೀಳಗಿಯ ಇದರ ರಜತ ಮಹೋತ್ಸವ 2025ರ ಅಂಗವಾಗಿ ಮೇ 6 ರಿಂದ ವಿವಿದ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದು ಈ ರಜತ ಮಹೋತ್ಸವದ ಅಂಗವಾಗಿ ಅಖಿಲ ಭಾರತ ’ಎ’ ಗ್ರೇಡ್ ಪುರುಷರ ಮತ್ತು ಮಹಿಳೆಯರ  ರಾಷ್ಟ್ರ ಮಟ್ಟದ  ಕಬಡ್ಡಿ ಪಂದ್ಯಾವಳಿಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಎಲ್‌.ಬಿ.ಕುರ್ತಕೋಟಿ ತಿಳಿಸಿದರು. ಇಲ್ಲಿನ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಮೈದಾನದಲ್ಲಿ ಬೀಳಗಿ ಪಟ್ಟಣ ಬ್ಯಾಂಕ್ ನ ರಜತ ಮಹೋತ್ಸವದ ಅಂಗವಾಗಿ ಅಮೆಚೂರ್ ಕಬಡ್ಡಿ ಫೆಡರೇಶನ್ ಆಫ್ ಇಂಡಿಯಾ, ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಮತ್ತು ಬಾಗಲಕೋಟ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಅವರು ಆಯೋಜಿಸಿರುವ ಪುರುಷ ಮತ್ತು ಮಹಿಳಾ ರಾಷ್ಟ್ರ ಮಟ್ಟದ ಕಬಡ್ಡಿ ಪಂದ್ಯಾವಳಿಗಾಗಿ ಸಿದ್ದತೆ ನಡೆದಿರುವ ಕಬಡ್ಡಿ ಮೈದಾನವನ್ನು ಮತ್ತು ವೀಕ್ಷಕರಿಗಾಗಿ ಸಿದ್ಧಗೊಳಿಸಿದ ಆಸನದ ವ್ಯವಸ್ಥೆಯನ್ನು ವೀಕ್ಷಿಸಿ ಪರೀಶೀಲಿಸಿ ಅವರು ಮಾತನಾಡಿದರು. ಬ್ಯಾಂಕಿನ ರಜತ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಅಖಿಲ ಭಾರತ ’ಎ’ ಗ್ರೇಡ್ ಪುರುಷರ ಮತ್ತು ಮಹಿಳೆಯರ ಕಬಡ್ಡಿ ಪಂದ್ಯಾವಳಿಗಳನ್ನು ನೆಡೆಸುವ ಸಂಘಟನೆ ಮತ್ತು ತಾಂತ್ರಿಕ ಸಮಿತಿಯಲ್ಲಿ ಕೆ.ಆರ್‌.ಎ.ಕೆ.ಎ. ಅಧ್ಯಕ್ಷ ರಾಕೇಶ್ ಮಲ್ಲಿ, ಕೆ.ಆರ್‌.ಎ.ಕೆ.ಎ. ಮಾಜಿ ಅಧ್ಯಕ್ಷ ಹನುಮಂತೇಗೌಡ, ಮಾಜಿ ಪ್ರಧಾನ ಕಾರ್ಯದರ್ಶಿ ಎ.ಮುನಿರಾಜು, ಅರ್ಜುನ ಪ್ರಶಸ್ತಿ ಪುರಸ್ಕೃತ ಹಾಗೂ ಬೆಂಗಳೂರು ಬುಲ್ಸ್‌ ತಂಡದ ಕೊಚ್ ಬಿ.ಸಿ. ರಮೇಶ್ ಈಗಿನ ಕೆ.ಆರ್‌.ಎ.ಕೆ.ಎ ಅಧ್ಯಕ್ಷ ಬಿ.ಸಿ.ಸುರೇಶ, ಪ್ರಧಾನ ಕಾರ್ಯದರ್ಶಿ ಗೌರೀಶ್ ಕೆ,ಬಿ.ಡಿ.ಎ.ಕೆ.ಎ. ಅಧ್ಯಕ್ಷ ಶಶಣ್ಣ ಕುಬಕಡ್ಡಿ,ಬಿ.ಡಿ.ಎ.ಕೆ.ಎ ಕಾರ್ಯದರ್ಶಿ ಲಿಂಬಣ್ಣ ಹೆಚ್ ಮುಕ್ಕಣ್ಣವರ್, ಕೆ.ಆರ್‌.ಎ.ಕೆ.ಎ ರೆಫರಿ ಬೋರ್ಡ್‌ ಅಧ್ಯಕ್ಷ ಎಂ. ಷಣ್ಮುಖಂ, ಬಿ.ಡಿ.ಎ.ಕೆ.ಎ. ರೆಫರಿ ಬೋರ್ಡ್‌ ಅಧ್ಯಕ್ಷ ಎಸ್‌.ಎಫ್‌. ಬಾರಡ್ಡಿ ಭಾಗವಹಿಸಲಿದ್ದಾರೆ ಅಲ್ಲದೆ ಪಂದ್ಯಾವಳಿಯಲ್ಲಿ ಕರ್ನಾಟಕ, ಕೇರಳ, ಪಂಜಾಬ, ಮಹಾರಾಷ್ಟ್ರ, ಹರಿಯಾಣ, ಹಿಮಾಚಲ ಪ್ರದೇಶ, ಉತ್ತರ ಪ್ರದೇಶ, ಉತ್ತರಾಕಾಂಡ ಸೇರಿದಂತೆ ಸುಮಾರು  8 ರಿಂದ 9 ರಾಜ್ಯಗಳಿಂದ ತಂಡಗಳು ಆಗಮಿಸುತ್ತವೆ ಮತ್ತು ಪ್ರೋ ಕಬಡ್ಡಿಯಲ್ಲಿ ಆಡಿರುವ ಸುಮಾರು 30 ಜನ ಆಟಗಾರರು ಈ ಪಂದ್ಯಾವಳಿಯಲ್ಲಿ ಆಡಲಿದ್ದಾರೆ ಹಾಗೂ ಒಟ್ಟು 18 ಪುರುಷರ ಮತ್ತು 16 ಮಹಿಳೆಯರ ತಂಡಗಳು ಭಾಗವಹಿಸಲಿದ್ದು,   ಪಂದ್ಯಾವಳಿಗಳು 21 ಮೇ ನಿಂದ 23 ಮೇ - 2025ರ ವರೆಗೆ ಕೊರ್ತಿ (ಖಅ) ಯಲ್ಲಿನ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಮೈದಾನದಲ್ಲಿ ಜರುಗಲಿದ್ದು, ಪುರುಷರ ಪಂದ್ಯಾವಳಿಗಳ ಬಹುಮಾನಗಳು ಮೊದಲ ಬಹುಮಾನ ರೂ. 200000, ಎರಡನೆಯ ಬಹುಮಾನ 150000,ಮೂರನೇ ಬಹುಮಾನ 100000, ನಾಲ್ಕನೇ ಬಹುಮಾನ 100000. ಮಹಿಳೆಯರ ಪಂದ್ಯಾವಳಿಗಳ ಬಹುಮಾನಗಳು ಮೊದಲ ಬಹುಮಾನ ರೂ. 200000, ಎರಡನೆಯ ಬಹುಮಾನ 150000,ಮೂರನೇ ಬಹುಮಾನ 100000, ನಾಲ್ಕನೇ ಬಹುಮಾನ 100000. ಒಟ್ಟು ಪಂದ್ಯಾವಳಿಯಲ್ಲಿ ಏಂಟು ಬಹುಮಾನಗಳನ್ನು ನಿಡಲಾಗುವದು ಎಂದರು.