ರಾಷ್ಟ್ರೀಯ ಸೇವಾಯೋಜನೆ ಗಾಂಧಿಜಿಯವರ ಕನಸಿನ ಕೂಸು: ಪ್ರೋ ಪಾಟೀಲ

National Service Scheme is Gandhiji's dream child: Prof. Patil
  • ಲೋಕದರ್ಶನ ವರದಿ 

ರಾಷ್ಟ್ರೀಯ ಸೇವಾಯೋಜನೆ ಗಾಂಧಿಜಿಯವರ ಕನಸಿನ ಕೂಸು: ಪ್ರೋ ಪಾಟೀಲ 

ಮಾಂಜರಿ 24: ರಾಷ್ಟ್ರೀಯ ಸೇವಾಯೋಜನೆಯು ಮಹತ್ಮಾ ಗಾಂಧಿಜಿಯವರ ಕಂಡ ಕನಸಿನ ಕೂಸು ಅದನ್ನು ಸಹಕಾರ ಮಾಡುವಲ್ಲಿ ಯುವಕರ ಪಾತ್ರವು ಅಮೂಲಾಗ್ರವಾಗಿದೆ ಎಂದು ಉಪನ್ಯಾಸಕ ಪ್ರೋ ಎ. ಕೆ ಪಾಟೀಲ ಹೇಳಿದರು. 

ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದಲ್ಲಿ ಕೆ.ಎಲ್ ಇ ಸಂಸ್ಥೆಯ ಪದವಿ ಮಹಾವಿದ್ಯಾಲಯ ಅಂಕಲಿಯ ರಾಷ್ಟ್ರೀಯ ಸೇವಾಯೋಜನೆ ಅಮೃತ ಸಮುದಾಯ ಅಭಿವೃದ್ಧಿ ಯೋಜನೆ ವಿಶೇಷ ಶಿಬಿರದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಅವರು ಗಾಂಧೀಜಿಯವರ ಶತಮಾನೋತ್ಸವದ ನಿಮಿತ್ಯವಾಗಿ ಪ್ರಾರಂಭವಾದ ಕಾರ್ಯಕ್ರಮವೇ ರಾಷ್ಟ್ರೀಯ ಸೇವಾ ಯೋಜನೆಯಾಗಿದೆ. ಸಾಮಾಜಿಕವಾದ ಕಳಕಳಿಯು ಮತ್ತು ಜಾಗೃತಿಯು ಯುವ ಜನರಿಗೆ ಅವಶ್ಯವಾಗಿದೆ. ಅದು ರಾಷ್ಟ್ರೀಯ ಸೇವಾ ಯೋಜನೆಯ ಲಾಂಛನದಲ್ಲಿರು ಚಕ್ರದಂತೆ ಅಷ್ಟದಿಕ್ಕುಗಳಲ್ಲಿ ತಮ್ಮ ಕಾರ್ಯ ಪ್ರವೃತ್ತಿಯು ಜರುಗಲಿ ಎಂದು ಹಾರೈಸಿದರು.  

ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ರಾಮು ಐಹೊಳೆ ಸೇವಾಮನೋಭಾವನೆಯಿಂದ ಎಲ್ಲರ ಮನಸ್ಸು ಮತ್ತು ಪ್ರೀತಿಯಿಂದ ಕಾರ್ಯನಿರ್ವಹಿಸಲು ಸಾಧ್ಯ ಎಂದು ಕಿವಿಮಾತನ್ನು ಹೇಳಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ರಾಜಾರಾಮ ಮಾನೆ ವಿದ್ಯಾರ್ಥಿಗಳ ಜೀವನದ ಅತಿಮಹತ್ವದ ಘಟ್ಟ ಎನ್‌.ಎಸ್‌.ಎಸ್ ಇದರಲ್ಲಿ ಬದುಕನ್ನು ಕಟ್ಟಿಕೊಳ್ಳುವ ವಿದ್ಯಾರ್ಥಿಗಳು ಸಮಾಜದ ಉತ್ತಮ ಬದಕುನ್ನು ಮತ್ತು ಬಾಂಧವ್ಯವನ್ನು ಕಟ್ಟಲು ಸಾಧ್ಯವೆಂದು ಹೇಳಿದರು 

ಅಧ್ಯಕ್ಷತೆ ವಹಿಸಿದ ಪ್ರೋ ಎಂ.ಎಸ್‌.ಕಾನಡೆ ಯವರು ಸೇವಾಕಾರ್ಯವನ್ನು ನಿಸ್ವಾರ್ಥದಿಂದ ಮಾಡುವ ಏಕೈಕ ವ್ಯಕ್ತಿ ಎಂದರೇ ಸ್ವಯಂ ಸೇವಕರು ಅವರ ಬದಕು ತಮಗೋಸ್ಕರವಲ್ಲ ತಮ್ಮ ಸಮಾಜದ ಉನ್ನತಿಗೊಸ್ಕರ ಆದರ್ಶ ವಿಚಾರಧಾರೆಗಾರೆ, ಪ್ರೇರಣಾಧಾಯಿಗಳಾಗಿ ಕಾರ್ಯನಿರ್ವಹಿಸುವವರು ಸ್ವಯಂ ಸೇವಕರು ಎಂದು ಅಧ್ಯಕ್ಷೀಯ ಭಾಷಣವನ್ನು ಮಾಡಿದರು. ಗ್ರಾಮ ಪಂಚಾಯತಿಯ ಸದಸ್ಯರಾದ ಸುಮನ ಶೇಳಕೆ, ವಂದನಾ ಕಾಂಬಳೆ, ಹನುಮಂತ ಮಿರ್ಜೇ, ರಾಮಜಿ ಕಾಂಬಳೆ ಮಹಾವಿದ್ಯಾಲಯದ ಸಿಬ್ಬಂದಿವರ್ಗ ಮತ್ತು ಶಿಬಿರಾರ್ಥಿಗಳು ಶಿಬಿರಾಧಿಕಾರಿ ರೂಪಾಲಿ ಪಿರನ್ನವರ, ಸಹಾಯಕ ಶಿಬಿರಾಧಿಕಾರಿ ಆರ್‌.ಎ.ಕೆರಗುಟ್ಟೆ ಉಪಸ್ಥಿತರಿದ್ದರು. ನಿರೂಪಣೆ ವೈಷ್ಣವಿ ಬುಬನಾಳೆ ನೆರವೇರಿಸಿದರು. ವಂದನಾರೆ​‍್ಣ ಆರ್‌.ಎ.ಕೆರಗುಟ್ಟೆ ಮಾಡಿದರು.