ಲೋಕದರ್ಶನ ವರದಿ
ರಾಷ್ಟ್ರೀಯ ವಿಜ್ಞಾನಿ ದಿನ ಆಚರಣೆ
ವಿಜಯಪುರ 28: ಘನಮಠೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ದಿನಾಂಕ: 28 ಶುಕ್ರವಾರ ದಂದು ರಾಷ್ಟ್ರೀಯ ವಿಜ್ಞಾನಿ ದಿನ ಜಯಂತಿ ಹಾಗೂ ರಾಜೇಂದ್ರ ಪ್ರಸಾದ ಪುಣ್ಯ ಸ್ಮರಣೆ ಆಚರಣೆ ಮಾಡಲಾಯಿತು
ಈ ಸಮಯದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಎಸ್.ಎಂ.ಸಜ್ಜನ ಅವರು ಅವರ ಒಂದು ಸಣ್ಣ ಭಾಗವು ಘಟನೆಯ ಬೆಳಕಿನ ತರಂಗಾಂತರಗಳಿಗಿಂತ ಭಿನ್ನವಾಗಿರುತ್ತದೆ; ಅದರ ಉಪಸ್ಥಿತಿಯು ರಾಮನ್ ಪರಿಣಾಮದ ಪರಿಣಾಮವಾಗಿದೆ. ಎಂದರು ಹಾಗೂ ಮಕ್ಕಳಗೆ ರಾಷ್ಟ್ರೀಯ ವಿಜ್ಞಾನಿ ದಿನದ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು.
ಈ ಸಮಯದಲ್ಲಿ ಸಂಸ್ಥೆಯ ಕಾಯದರ್ಶಿ ವಿವೇಕಾನಂದ ಸಜ್ಜನ, ಮುಖ್ಯಗುರುಗಳಾದ ಬಿ.ಜಿ.ಸಜ್ಜನ, ಆರ್.ಎಸ್.ದೇಸಾಯಿ, ಬಿ.ಎಸ್.ಮಾಲಿಪಾಟೀಲ್ ದೈಹಿಕ ಶಿಕ್ಷಕ ಶಿವಾನಂದ ಸುಣದಳ್ಳಿ, ಪಿಯು ಕಾಲೇಜ್ ಪ್ರಾಚಾರ್ಯ ಕಿಶೋರಗೌಡ, ಸಿಬಿಎಸ್‌ಇ ಪ್ರಾಚಾರ್ಯ ಜಯಚಂದ್ರ, ಬಿಎಡ್ ಕಾಲೇಜ್ ಪ್ರಾಚಾರ್ಯ ಜಿ.ಎನ್.ಪಾಟೀಲ, ಸರ್ವ ಸಿಬ್ಬಂದಿವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.