ವಿಕಲಚೇತನ ಸೈನಾಜಾ ಹಾಗೂ ಕಳಸಪ್ಪ ಅವರಿಗೆ ಉದ್ಯೋಗ ಖಾತ್ರಿ ನೆರವು

NAREGA scheme a support for the disabled

ವಿಕಲಚೇತನರಿಗೆ ನರೇಗಾ ಯೋಜನೆ ಆಸರೆ 

ಗದಗ  29 :  ವರ್ಷವಿದ್ದಾಗ ಆಕ್ಸಿಡೆಂಟ್ ಆಗಿ ಬಲಗೈಯನ್ನು ಸಂಪೂರ್ಣವಾಗಿ ಕಳೆದು ಕೊಂಡು ವಿಕಲಚೇತನವಾಗಿರುವ ಸೈನಾಜಾ ಇನಾಮದಾರ ಅವರಿಗೆ ನರೇಗಾ ಯೋಜನೆಯಡಿಯಲ್ಲಿ ಕೆಲಸ ಮಾಡುವ ಮೂಲಕ ಜೀವನಕ್ಕೆ ಆಸರೆಯಾಗಿದೆ.

ನರಗುಂದ ತಾಲೂಕಿನ ಕೊಣ್ಣೂರು ಗ್ರಾಮದವರಾದ ಸೈನಾಜಾ ಇನಾಮದಾರ ಅವರು ವಯಸ್ಸಾದ ತಾಯಿ ಮತ್ತು ತಂಗಿಯ ಜೊತೆಗೆ ವಾಸವಾಗಿದ್ದು, ಯಾವುದೇ ಆಸ್ತಿ ಇಲ್ಲ. ದುಡಿದು ತಿನ್ನಲು ಸಾಧ್ಯವಾಗದ ಕಾರಣ ವಿಕಲಚೇತನರಿಗೆ ಸರ್ಕಾರದಿಂದ ದೊರೆಯುವ ಪ್ರತಿ ತಿಂಗಳ ಪಗಾರದ ಮೇಲೆ ಜೀವನ ಸಾಗಿಸುತ್ತಿದ್ದಾರೆ. ಈ ವರ್ಷ ಉದ್ಯೋಗ ಖಾತ್ರಿಯ ಬದು ನಿರ್ಮಾಣ ಕಾಮಗಾರಿಯಲ್ಲಿ ಕೆಲಸ ಮಾಡುವ ಮೂಲಕ ಜೀವನಕ್ಕೆ ಸಹಕಾರಿಯಾಗಲಿದೆ.ಮೊದಲ ವರ್ಷ ಉದ್ಯೋಗ ಖಾತ್ರಿ ಕೆಲಸಕ್ಕೆ: ವಿಕಲಚೇತನ ಆಗಿದ್ದರಿಂದ ನನ್ನ ಕಡೆಯಿಂದ ಕೆಲಸ ಮಾಡಲು ಆಗುವುದಿಲ್ಲ ನನ್ನು ಕೆಲಸಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಎಲ್ಲಿಯೋ ಕೆಲಸಕ್ಕೆ ಹೋಗುತ್ತಿರಲ್ಲಿ. ಗ್ರಾಮ ಪಂಚಾಯತಿಯಲ್ಲಿ ನರೇಗಾ ಯೋಜನೆಯಡಿ ವಿಕಲಚೇತನರು, ಬುದ್ಧಿ ಮಾಂದ್ಯರು ವಯೋವೃದ್ಧರು ಕೆಲಸಕ್ಕೆ ಬರಬಹುದು ಎಂದು ಮಾಹಿತಿ ಪಡೆದು ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಜಾಬ್ ಪಡೆದು ಈ ವರ್ಷ ಕೆಲಸಕ್ಕೆ ಬಂದಿದ್ದೇನೆ. ಉದ್ಯೋಗ ಖಾತ್ರಿಯಲ್ಲಿ ಒಂದೇ ಕೈಯಲ್ಲಿ ಕೆಲಸ ಮಾಡಲು ಆಗುವಿದಿಲ್ಲ. ಹಾಗಾಗಿ ಕೆಲಸದ ಸ್ಥಳದಲ್ಲಿ ಕೂಲಿಕಾರರಿಗೆ ನೀರನ್ನು ಕೊಡುವ ಮೂಲಕ ನಾನು ಎಲ್ಲರಂತೆ ಕೆಲಸದಲ್ಲಿ ತೊಡಗಿದ್ದೇನೆ ಎನ್ನುತ್ತಾರೆ ಸೈನಾಜಾ ಇನಾಮದಾರ.ಕಳಸಪ್ಪ ಅವರು ಹುಟ್ಟುತ್ತಾ ವಿಕಲಚೇತನ: ಕೊಣ್ಣೂರ ಗ್ರಾಮದ ನಿವಾಸಿಯಾದ ಕಳಸಪ್ಪ ಕಳಸಣ್ಣನವರ ಹುಟ್ಟುತ್ತಾ ವಿಕಲಚೇತನರಾಗಿದ್ದು, ಅವರಿಗೆ ಹೆಂಡತಿ, ಮಕ್ಕಳೊಂದಿಗೆ ಜೀವನ ಸಾಗಿಸುತ್ತಿರುವ ಈ ಕುಟುಂಬಕ್ಕೆ ನರೇಗಾ ವರದಾನವಾಗಿದೆ. ಕಳಸಪ್ಪ ಅವರಿಗೆ ಎಡಲು ಪಾದ ಡೊಂಕ್ಕಾಗಿದ್ದು, ಕಾಳಿನ ಬೆಳವಣಿಗೆ ಸರಿಯಾಗಿಲ್ಲ. ಬಾರದ ಕೆಲಸ ಮಾಡಲಾಗುವುದಿಲ್ಲ. ಆದರೂ ಅದರಲ್ಲಿಯೂ ನಡೆದಾಡುವುದು, ಕೆಲಸ ಮಾಡುತ್ತಿದ್ದಾರೆ. ಅವರಿಗೆ ವಿಕಲಚೇತನ ಎಂದಿಗೂ ಅಡ್ಡಿ ಬರಲಿಲ್ಲ. ದುಡಿಯುವುದಕ್ಕೆ ಯಾವುದೇ ಹಿಂಜರಿಕೆ ಇಲ್ಲದೆ. ಪ್ರತಿ ವರ್ಷ ಉದ್ಯೋಗ ಖಾತ್ರಿ ಕೆಲಸ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.ನರೇಗಾ ಯೋಜನೆಯಡಿ ಸಮಾನ ಕೆಲಸಕ್ಕೆ ಸಮಾನ ಕೂಲಿ, ವಿಕಲಚೇತನರಿಗೆ, ವಯೋವೃದ್ಧರು, ಬುದ್ಧಿಮಾಂದ್ಯರು ಕೆಲಸದಲ್ಲಿ ರಿಯಸಯಿತಿ ನೀಡುತ್ತಿರುವುದರಿಂದ  ಎಷ್ಟೋ ವಿಕಲಚೇತನರಿಗೆ, ಬುದ್ಧಿಮಾಂದ್ಯರಿಗೆ ವಯೋವೃದ್ಧರ ಕುಟುಂಬಗಳಿಗೆ  ಉದ್ಯೋಗ ಖಾತ್ರಿ ಬದುಕು ಕಟ್ಟಿಕೊಟ್ಟಿದೆ.

 3 ವರ್ಷ ಇದ್ದಾಗ ಆಕ್ಸಿಡೆಂಟ್ ಆಗಿ ಬಲಗೈ ಕಳೆದುಕೊಂಡು ವಿಕಲಚೇತನರಾಗಿರುವ ನಮಗೆ ಹೊರಗಡೆ ಹೋಗಿ ದುಡಿಯಲು ಸಾಧ್ಯವಾಗುತ್ತಿರಲಿಲ್ಲ. ಜೊತೆಗೆ ನಮಗೂ ಯಾರು ಕೆಲಸ ಕೊಡ್ತಿರಲಿಲ್ಲ. ಕೊಟ್ಟರು ಒಂದೇ ಕೈಯಲ್ಲಿ ಕೆಲಸ ಮಾಡಲು ಕಷ್ಟವಾಗುತ್ತಿರುವುದರಿಂದ ಮನೆಯಲ್ಲಿ ಇರುತ್ತಿದ್ದೆ. ನರೇಗಾ ಯೋಜನೆ ನಮಗೆ ಕೆಲಸ ನೀಡಿರುವುದು ತುಂಬಾ ಖುಷಿಯಾಗಿದೆ. ಮೊದಲ ವರ್ಷ ಒಡ್ಡಿನ ಕೆಲಸಕ್ಕೆ ಬಂದಿದ್ದು ಕೂಲಿಕಾರರಿಗೆ ನೀರು ಕೊಡುವ ಕೆಲಸಕ್ಕೆ ಹಚ್ಚಿದ್ದಾರೆ ಎಲ್ಲರಂತೆ ನಾನು ಕೆಲಸ ಮಾಡುತ್ತಿನೆ ಎಂಬ ಖುಷಿ ನನಗಿದೆ.- ಸೈನಾಜಾ ಇನಾಮದಾರ್, ವಿಕಲಚೇತನ ಕೂಲಿಕಾರರು.ಕೋಟ್‌..ಕೊಣ್ಣೂರ ಗ್ರಾಮ ಪಂಚಾಯತಿಯಲ್ಲಿ ವಿಕಲಚೇತರಿಗೆ ನರೇಗಾ ಯೋಜನೆಯಡಿ ಜಾಬ್ ನೀಡಿ ನರೇಗಾ ಯೋಜನೆಯ ಬಗ್ಗೆ ಮಾಹಿತಿ ನೀಡಿ ಕೆಲಸಕ್ಕೆ ಬರುವಂತೆ ಪ್ರೇರೆಪಿಸಲಾಯಿತು. ಆ ನಿಟ್ಟಿನಲ್ಲಿ ವಿಕಲಚೇತರು ಒಡ್ಡಿನ ಕೆಲಸಕ್ಕೆ ಬರುತ್ತಿದ್ದಾರೆ. ಅವರು ವಿಕಲಚೇತನರಾಗಿದ್ದರಿಂದ ಅವರ ಶಕ್ತಿಗನುಸಾರವಾಗಿ ಕೆಲಸ ನೀಡಲಾಗುತ್ತದೆ.-

ಮಂಜುನಾಥ ಗಣಿ,

ಪಿಡಿಒ ಗ್ರಾ.ಪಂ. ಕೊಣ್ಣೂರ.

ವಿಕಲಚೇತನರಾಗಿದ್ದರೂ ನರೇಗಾ ಯೋಜನೆಯಡಿ ಕೆಲಸ ಮಾಡಲು ಆಸಕ್ತಿಯಿಂದ ಮುಂದೆ ಬಂದಿರುವುದು ಒಳ್ಳೆಯದು. ಇದರಂತೆ ಎಲ್ಲಾ ಗ್ರಾಮ ಪಂಚಾಯತಿಯಲ್ಲಿ ಬೇರೆ ಬೇರೆ ದೈಹಿಕ ನ್ಯೂನತೆ ಇರುವವರು ಇದ್ದಾರೆ ಅವರು ಕೂಡಾ ನರೇಗಾ ಕೆಲಸಕ್ಕೆ ಬರಹುದು. ಸಮಾನ ಕೆಲಸಕ್ಕೆ ಸಮಾನ ವೇತನ ವಿಕಚೇತನರಿಗೆ, ಹಿರಿಯ ನಾಗರಿಗರಿಕೆ ಇತರೆ ಎಲ್ಲರೂ ಸಮಾನ ಕೂಲಿ ನೀಡಲಾಗುತ್ತದೆ. ಎಲ್ಲರೂ ಉದ್ಯೋಗ ಖಾತ್ರಿ ಕೆಲಸ ಸದ್ಬಳಕೆ ಮಾಡಿಕೊಳ್ಳಿ.ಸಂತೋಷಕುಮಾರ ಪಾಟೀಲ, ಸಹಾಯಕ ನಿರ್ದೇಶಕರು (ಗ್ರಾ.ಉ) ತಾ.ಪಂ. ನರಗುಂದಕೋಟ್‌..ನರೇಗಾ ಯೋಜನೆಯಡಿಯಲ್ಲಿ ವಿಕಲಚೇತನರಿಗೆ, ಬುದ್ಧಿಮಾಂದ್ಯರಿಗೆ, ಹಿರಿಯ ನಾಗರಿಕರಿಗೆ ಪ್ರತ್ಯೇಕ ಜಾಬ್ ಕಾರ್ಡ್‌ ನೀಡಲಾಗುತ್ತದೆ. ಉದ್ಯೋಗ ಖಾತ್ರಿ ಕೆಲಸದ ಪ್ರಮಾಣದಲ್ಲಿ ರಿಯಾಯಿತಿ ನೀಡಲಾಗುವುದು. ಅವರಿಗೆ ನರೇಗಾ ಯೋಜನೆಯಡಿಯಲ್ಲಿ ಸಾಮಾರ್ಥ್ಯಕ್ಕೆ ಅನುಸಾರ ಕೆಲಸ ನೀಡಿ ದಿನಕ್ಕೆ 370 ರೂ. ಕೂಲಿ ನೀಡಲಾಗುವುದು.

- ಎಸ್‌.ಕೆ. ಇನಾಮದಾರ,

ಕಾರ್ಯನಿರ್ವಾಹಕ ಅಧಿಕಾರಿಗಳು ತಾ.ಪಂ. ನರಗುಂದ.