ಇಡೀ ರಾಜ್ಯವನ್ನೇ ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಿ ರೈತ ಹೋರಾಟ ಸಮಿತಿಯ ಅಧ್ಯಕ್ಷ ಮುರಗೆಪ್ಪ ಶೆಟ್ಟರ ಆಗ್ರಹ

ಇಡೀ ರಾಜ್ಯವನ್ನೇ ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಿ ರೈತ ಹೋರಾಟ ಸಮಿತಿಯ ಅಧ್ಯಕ್ಷ ಮುರಗೆಪ್ಪ ಶೆಟ್ಟರ ಆಗ್ರಹ Murageppa Shettar, President of the Farmers' Struggle Committee, demands that the entire state be de

ಬ್ಯಾಡಗಿ   13: ಕಳೆದ ವರ್ಷ ಅತಿವೃಷ್ಟಿಯಿಂದ ರೈತರು ನಲುಗಿದ್ದು ಈ ಬಾರಿಯೂ ಸಹ ಬರಗಾಲದ ಆತಂಕ ಎದುರಿಸುತ್ತಿದ್ದಾರೆ. ಮತ್ತು ಬಿತ್ತಿದ ಬೆಳೆಗಳು ಮಳೆಯ ಕೊರತೆಯಿಂದ ಒಣಗುತ್ತಿವೆ ಇಡಿ ನಮ್ಮ ರಾಜ್ಯವನ್ನು ಬರಗಾಲ ಪೀಡಿತ  ರಾಜ್ಯವನ್ನಾಗಿ ಘೋಷಿಸಬೇಕು ಎಂದು ಬ್ಯಾಡಗಿ ತಾಲೂಕ ರೈತ ಹೋರಾಟ ಸಮಿತಿಯು ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ ಅವರು ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿ ಆಗ್ರಹಿಸಿದರು.

ಈ ವೇಳೆ ರೈತ ಹೋರಾಟ ಸಮಿತಿಯ ಅಧ್ಯಕ್ಷ ಮುರಗೆಪ್ಪ ಶೆಟ್ಟರ್ ಮಾತನಾಡಿ ರಾಜ್ಯ ಸರ್ಕಾರವು ಬರಗಾಲದ ಪರಿಸ್ಥಿತಿ ಎದುರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಮುಂಗಾರು ಕುಂಠಿತಗೊಂಡಿದೆ ಶೇಕಡ 60ಅ ರಷ್ಟು ಮಳೆ ಕೊರತೆ ಇದೆ ಎಂದು ಹವಮಾನ ವರದಿ ಬಂದಿದ್ದು ರಾಜ್ಯದ ಹಲವು ಜಿಲ್ಲೆಗಳಲ್ಲಿ ಬರಗಾಲ ಪೀಡಿತ ಜಿಲ್ಲೆಗಳೆಂದು ಘೋಷಣೆ ಮಾಡಬೇಕು ರಾಜ್ಯವು ಹಿಂದೆಂದೂ ಕಾಣದ ಬರ ಪರಿಸ್ಥಿತಿ ಎದುರಿಸುತ್ತಿದೆ ಅನೇಕ ರೈತರು ಎರಡು ಬಾರಿ ಬಿತ್ತನೆ ಮಾಡಿ ಹಾನಿಯ ಅನುಭವಿಸುತ್ತಿದ್ದಾರೆ.

ಕೆಲವೊಂದು ಪ್ರದೇಶಗಳಲ್ಲಿ ಸರಿಯಾಗಿ ಬಿತ್ತನೆ ಮಾಡಿದ ಬೈರುಗಳು ಹುಟ್ಟದೇ ಇರುವುದರಿಂದ ರೈತರು ಹರಗಿದ್ದಾರೆ ಪ್ರತಿ ಎಕರೆಗೆ 30,000 ಪರಿಹಾರ ಒದಗಿಸಬೇಕ ಕೂಲಿ ಕಾರ್ಮಿಕರು ಗುಳೇ ಹೋಗದಂತೆ ಕೆಲಸ ನೀಡಬೇಕು. ಕಳೆದ ವರ್ಷ ಫಸಲ ಭೀಮಾ ಯೋಜನೆಯಲ್ಲಿಯ ತಾರತಮ್ಯ ಪರಿಹರಿಸಿ ರೈತರಿಗೆ ಬೆಳೆಯೊಮ್ಮೆ ಮುಟ್ಟಿಸಲು ಸರಕಾರ ಮುಂದಾಗಬೇಕು ಈ ಎಲ್ಲ ಕಾರಣಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ರಾಜ್ಯವನ್ನು ಬರಗಾಲ ಪೀಡಿತ ಪ್ರದೇಶ ಒಂದು ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಈರಣ್ಣ ಸಂಕಣ್ಣನವರ. ನಿಂಗಪ್ಪ ಮಾಗೋಡ್‌. ಶಶಿಧರಯ್ಯ ಗೊಲ್ಲರಹಳ್ಳಿಮಠ. ಗೋಣೆಪ್ಪ ಸಂಕಣ್ಣನವರ. ಹನುಮಂತಪ್ಪ ಹರಮುಗಟ್ಟಿ. ಬಸಪ್ಪ ಶಿವಣ್ಣನವರ. ಚಂದ್ರಶೇಖರ್ ಮಾಗೋಡ. ಬಿಎಮ್ ಪಾಟೀಲ್‌.ಬಸವರಾಜ್ ಸಂಕಣ್ಣನವರ. ಚಂದ್ರ​‍್ಪ ಸಂಕಣ್ಣನವರ. ಸೇರಿದಂತೆ ಅನೇಕರು ಉಪಸ್ಥಿತರಿದ್ದರು.