ಮಕ್ಕಳ ಬೆಳವಣಿಗೆಯಲ್ಲಿ ತಾಯಿ ಪಾತ್ರ ಮುಖ್ಯ: ಶಿವಾನಂದಯ್ಯ ಶಾಸ್ತ್ರಿ
Mother's role is important in children's development: Shivanandaiah Shastri
ಇಂಡಿ 29: ಮಕ್ಕಳ ಬೆಳವಣಿಗೆಯಲ್ಲಿ ತಾಯಿ ಪಾತ್ರ ಮುಖ್ಯವಾಗಿದೆ ಎಂದು ಖ್ಯಾತ ಪುರಾಣಿಕರಾದ ಶಿವಾನಂದಯ್ಯ ಶಾಸ್ತ್ರಿಗಳು ಹೇಳಿದ್ದಾರೆ.
ಅವರು ಇಂಡಿ ತಾಲ್ಲೂಕಿನ ಸುಕ್ಷೇತ್ರ ತಡವಲಗಾ ಗ್ರಾಮದ ಜೋಡಗುಡಿ ಶ್ರೀ ಮರುಳಸಿದ್ದೇಶ್ವರ ಜಾತ್ರೆಯ ನಿಮಿತ್ತವಾಗಿ ಇಪ್ಪತ್ತೊಂದು ದಿನಗಳ ಕಾಲ ನಡೆಯುವುತಿರುವ ಇಟಗಿ ಭೀಮಾಂಬಿಕಾ ಪುರಾಣದಲ್ಲಿ ಹೇಳಿದ ಅವರು ಮಕ್ಕಳಿಗೆ ಬಾಲ್ಯದಿಂದಲೇ ಸಂಸ್ಕಾರಯುತ ಶಿಕ್ಷಣ ನೀಡಿದರೆ ಆಗ ಮಾತ್ರ ಆ ಮಗು ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ. ಅದರಂತೆ ಇಟಗಿ ಭೀಮಾಂಬಿಕಾ ಶಿವಶರಣೆಯಾಗಿ, ಪರಮ ಭಕ್ತರನ್ನು ಗಳಿಸಿ ಅನೇಕರ ಮನೆ ಮನ ಪರಿವರ್ತನೆ ಮಾಡಿದ ಮಹಾಮಾತೆ ಭೀಮಾಂಬಿಕೆ. ಬಾಲ್ಯದಲ್ಲಿ ಇಟಗಿ ಭೀಮಮ್ಮ ಕಲಿತಿರಲಿಲ್ಲ. ಅದಕ್ಕೆ ಆಕೆಯಲ್ಲಿ ಚಿಂತೆಯು ಇರಲಿಲ್ಲ. ಭೀಮವ್ವ ಅವರ ಸಾಧನೆ ಬದುಕಿನುದ್ದಕ್ಕೂ ಆಧ್ಯಾತ್ಮಿಕ ಸಾಧನೆಯಾಗಿತ್ತು.ಭೀಮಮ್ಮ ತನ್ನ ಜನಿಸಿದ ಗ್ರಾಮ ಬಿಟ್ಟು ಯಾವ ಗುರುವಿನ ಅನುಹ ಪಡೆಯಲು ಹೋದವಳಲ್ಲ. ಆಧ್ಯಾತ್ಮ ಧರ್ಮಗಳನ್ನು ಗುರುವೆಂದು ನಂಬಿ ಬಡವರ, ಆಶ್ರಯ ಬಯಸಿ ಬರುವವರ ಸಂಕಷ್ಟಗಳಿಗೆ ಪರಿಹಾರ ಸೂಚಿಸುತ್ತಾ. ಯಾರೇ ಬಂದರೂ ಅವರ ಕಣ್ಣೀರು ಒರಿಸಿ ಸಾಂತ್ವನ ಹೇಳಿ ಆತ್ಮಸ್ಥೈರ್ಯ ತುಂಬಿ ಮೆರೆದ ಧೀಮಂತ ಸಾಧ್ವಿಮಣಿ. ಇಟಗಿ ಶ್ರೀ ಭೀಮಾಂಬಿಕಾ ತಾಯಿ ಹಾಲುಮತ ಕೃಷಿಕ ಕುಟುಂಬದಲ್ಲಿ ಜನಿಸಿದವರು. ಸಂಸಾರಿಕಾಶ್ರಮ ಸ್ವೀಕರಿಸಿ, ತಮ್ಮ ಆಧ್ಯಾತ್ಮಿಕ ಶಕ್ತಿಯಿಂದ ಅನೇಕ ಜನರಿಗೆ ಆಶ್ರಯವಾದರು. ನಿರಂತರ ಅನ್ನದಾಸೋಹವನ್ನಿಟ್ಟು ಮಹಾ ದಾಸೋಹಿಯನಿಸಿದರು.
ಈ ಮಹಾದೇವತೆಯ ಶ್ರೀ ಭೀಮಾಂಬಿಕೆಯವರ ಜೀವನ ಅರ್ಥಪೂರ್ಣವಾಗಿತ್ತು ಎಂದು ಹೇಳಿದರು.
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ 